ಹಿಟ್ ವಿಕೆಟ್ ಔಟ್, ವಿರಾಟ್ ಕೊಹ್ಲಿ ಎರಡನೇ ಕ್ಯಾಪ್ಟನ್

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 14: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ತಂಡದಿಂದ ಅನೇಕ ದಾಖಲೆಗಳು ನಿರ್ಮಾಣವಾಯಿತು. ಭಾರತದ ಕಳಪೆ ಫೀಲ್ಡಿಂಗ್, ಇಂಗ್ಲೆಂಡ್ ಬ್ಯಾಟಿಂಗ್ ಭಾರಿ ಚರ್ಚೆಗೊಳಪಟ್ಟಿತು. ಈ ಪೈಕಿ ವಿರಾಟ್ ಕೊಹ್ಲಿ ಅವರು ಔಟ್ ಆದ ರೀತಿ ಎಲ್ಲರ ಗಮನ ಸೆಳೆಯಿತು. ಹಿಟ್ ವಿಕೆಟ್ ಮಾಡಿಕೊಂಡು ಔಟಾದ ಕೊಹ್ಲಿ ಅವರು ಈ ರೀತಿ ವಿಚಿತ್ರ ರೀತಿ ಔಟಾದ ಆಟಗಾರ ಪಟ್ಟಿಗೆ ಸೇರಿದರು.

ವಿರಾಟ್ ಕೊಹ್ಲಿ ಅವರು ಇಂಗ್ಲೆಂಡಿನ ಸ್ಪಿನ್ನರ್ ಆದಿಲ್ ರಷೀದ್ ಎಸೆತವನ್ನು ಪುಲ್ ಮಾಡಿದ ಸಂದರ್ಭದಲ್ಲಿ ಅವರ ಹಿಮ್ಮಡಿ ಲೆಗ್ ಸ್ಟಂಪ್ ಗೆ ತಾಗಿ ಬೇಲ್ಸ್ ಉದುರಿತು. ಕೊಹ್ಲಿ ಹಿಟ್ ವಿಕೆಟ್ ಔಟಾಗಿದ್ದು, ತಕ್ಷಣಕ್ಕೆ ತಿಳಿಯಲೇ ಇಲ್ಲ. ನಂತರ ಥರ್ಡ್ ಅಂಪೈರ್ ಗೆ ಅಪೀಲ್ ಮಾಡಲಾಯಿತು. ಆ ಸಂದರ್ಭದಲ್ಲಿ ಇಂಗ್ಲೆಂಡಿನ 537ಸ್ಕೋರಿಗೆ ಉತ್ತರವಾಗಿ ಭಾರತ 361/6 ಸ್ಕೋರ್ ಮಾಡಿತ್ತು. ಕೊಹ್ಲಿ 40ರನ್ ಗಳಿಸಿ ಆಡುತ್ತಿದ್ದರು. ಕೊಹ್ಲಿ ಔಟ್ ಎಂದು ಟಿವಿ ಅಂಪೈರ್ ಘೋಷಿಸಿದರು.

ಈ ರೀತಿ ಕೊಹ್ಲಿಗೂ ಮುನ್ನ 21 ಭಾರತೀಯ ಕ್ರಿಕೆಟರ್ಸ್ ಔಟಾಗಿದ್ದಾರೆ. ಆದರೆ, 1949ರ ನಂತರ ನಾಯಕರೊಬ್ಬರು ಈ ರೀತಿ ಔಟಾಗಿದ್ದು ಇದು ಎರಡನೇ ಸಲ. ಲಾಲಾ ಅಮರನಾಥ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈ ಟೆಸ್ಟ್ ನಲ್ಲಿ ಈ ರೀತಿ ಔಟಾದ ಮೊದಲ ಕ್ಯಾಪ್ಟನ್. ಭಾರತೀಯ ಆಟಗಾರರ ಪೈಕಿ 2002ರಲ್ಲಿ ವಿವಿಎಸ್ ಲಕ್ಷ್ಮಣ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಔಟಾದ ಬಳಿಕ ಕೊಹ್ಲಿ ಅವರು ಈಗ ಔಟಾಗಿದ್ದಾರೆ.

Virat Kohli out in bizarre way: Full list of Indian Test batsmen hit-wicket

 • India in Sri Lanka 2017

  SL
  IND
  Aug 24 2017, Thu - 02:30 PM
 • West Indies in England 2017

  ENG
  WI
  Aug 25 2017, Fri - 03:30 PM
 • Australia in Bangladesh 2017

  BAN
  AUS
  Aug 27 2017, Sun - 09:30 AM
+ More
+ More
 • Shastri More Involved In New Stint Wriddhiman Saha
  Shastri More Involved In New Stint Wriddhiman Saha
 • Watch : What Saha Has To Say About His Skipper Kohli
  Watch : What Saha Has To Say About His Skipper Kohli
 • Sreesanth Moves HC To Seek NOC From BCCI
  Sreesanth Moves HC To Seek NOC From BCCI
Photos
 • IPL 2017 Images
  "IPL 2017"
 • India Tour Of West Indies 2017 Images
  "India Tour Of West Indies 2017"
 • ICC Women's World Cup 2017 Images
  "ICC Women's World Cup 2017"
 • India Tour Of Sri Lanka 2017 Images
  "India Tour Of Sri Lanka 2017"

ಟೆಸ್ಟ್ ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಔಟಾದ ಭಾರತೀಯ ಬ್ಯಾಟ್ಸ್ ಮನ್ ಗಳು:
1. ಲಾಲಾ ಅಮರನಾಥ್ - 13 ರನ್ (1949, Vs ವೆಸ್ಟ್ ಇಂಡೀಸ್, ಚೆನ್ನೈ)
2. ಮಾಧವ್ ಆಪ್ಟೆ - 30 (1953, Vs ವೆಸ್ಟ್ ಇಂಡೀಸ್,ಜಾರ್ಜ್ ಟೌನ್)
3. ನವೀನ್ ತಮ್ಹಾನೆ - 5 ರನ್ (1959, Vs ವೆಸ್ಟ್ ಇಂಡೀಸ್, ದೆಹಲಿ)
4. ಚಂದು ಬೋರ್ಡೆ - 96 ರನ್ (1959, Vs ವೆಸ್ಟ್ ಇಂಡೀಸ್, ದೆಹಲಿ)
5. ಬುದಿ ಕುಂದರನ್ - 2 ರನ್ (1960, Vs ಆಸ್ಟ್ರೇಲಿಯಾ, ಮುಂಬೈ)
6. ದೀಲಿಪ್ ಸರ್ದೇಸಾಯಿ - 28 ರನ್ (1961, Vs ಇಂಗ್ಲೆಂಡ್, ಕಾನ್ಪುರ)
7. ವಿಜಯ್ ಮಂಜೇಕ್ರರ್ - 0 (1962, Vs ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್)
8. ಹನುಮಂತ್ ಸಿಂಘ್ - 0 ರನ್ (1965, Vs ನ್ಯೂಜಿಲೆಂಡ್, ಮುಂಬೈ)
9. ಎಂಎಲ್ ಜೈಸಿಂಹ - 1 ರನ್ (1965, Vs ನ್ಯೂಜಿಲೆಂಡ್, ನವದೆಹಲಿ)
10. ಸೈಯದ್ ಅಬಿದ್ ಅಲಿ - 78 ರನ್ (1968, Vs ಆಸ್ಟ್ರೇಲಿಯಾ, ಸಿಡ್ನಿ)
11. ಮದನ್ ಲಾಲ್ - 7 ರನ್ (1974, Vs ಇಂಗ್ಲೆಂಡ್, ಮ್ಯಾಂಚೆಸ್ಟರ್)
12. ವಿನೂ ಮಂಕಡ್ - 43 ರನ್ (1974, Vs ಇಂಗ್ಲೆಂಡ್, ಬಿರ್ಮಿಂಗ್ ಹ್ಯಾಮ್)
13. ಬ್ರಿಜೇಶ್ ಪಟೇಲ್ - 21 ರನ್ (1977, Vs ಇಂಗ್ಲೆಂಡ್, ಕೋಲ್ಕತ)
14. ದಿಲೀಪ್ ವೆಂಗ್ ಸರ್ಕಾರ್ - 48 ರನ್ (1977, Vs ಆಸ್ಟ್ರೇಲಿಯಾ, ಬ್ರಿಸ್ಬೇನ್)
15. ಮೊಯಿಂದರ್ ಅಮರನಾಥ್ - 20 ರನ್ (1978, Vs ಪಾಕಿಸ್ತಾನ, ಲಾಹೋರ್)
16. ಮೊಯಿಂದರ್ ಅಮರನಾಥ್ - 2 ರನ್ (1979, Vs ಆಸ್ಟ್ರೇಲಿಯಾ, ಮುಂಬೈ)
17. ಮೊಯಿಂದರ್ ಅಮರನಾಥ್ - 37 ರನ್ (1984, Vs ಪಾಕಿಸ್ತಾನ,ಫೈಸಲಾಬಾದ್)
18. ಕಿರಣ್ ಮೋರೆ -6 ರನ್ (1989, Vs ವೆಸ್ಟ್ ಇಂಡೀಸ್, ಕಿಂಗ್ಸ್ ಟನ್)
19. ನಯನ್ ಮೊಂಗಿಯಾ - 34 ರನ್ (1994, Vs ವೆಸ್ಟ್ ಇಂಡೀಸ್, ಮೊಹಾಲಿ)
20. ಶಿವ ಸುಂದರ್ ದಾಸ್ - 13 ರನ್ (1949, Vs ಆಸ್ಟ್ರೇಲಿಯಾ, ಕೋಲ್ಕತ)
21. ವಿವಿಎಸ್ ಲಕ್ಷ್ಮಣ್ - 130 ರನ್ (2002, Vs ವೆಸ್ಟ್ ಇಂಡೀಸ್, ಸೈಂಟ್ ಜಾನ್)
22. ವಿರಾಟ್ ಕೊಹ್ಲಿ - 40 ರನ್ (2016, Vs ಇಂಗ್ಲೆಂಡ್, ರಾಜ್ ಕೋಟ್)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's captain Virat Kohli was dismissed in a bizarre fashion during the 4th day's play of the 1st Test against England here on November 12. Here is Full list of Indian Test batsmen hit-wicket
Please Wait while comments are loading...