ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಶ್ರೇಯಾಂಕ ಪಟ್ಟಿ : ವಿರಾಟ್ ಕೊಹ್ಲಿ ಮತ್ತೆ ನಂ.1

By Mahesh

ಮುಂಬೈ, ಮಾರ್ಚ್ 29: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಗಳವಾರ ಪ್ರಕಟಿಸಿರುವ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ವಿಶ್ವ ಟ್ವೆಂಟಿ20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 82ರನ್ ಚೆಚ್ಚಿದ್ದ ಕೊಹ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಈ ಮೂಲಕ ಆಸ್ಟ್ರೇಲಿಯಾದ ಆಟಗಾರ ಅರೋನ್ ಫಿಂಚ್ ರನ್ನು ಕೆಳಕ್ಕೆ ತಳ್ಳಿದ್ದಾರೆ. ಫಿಂಚ್ ಗಿಂತ ಸುಮಾರು 68 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿರುವ ಕೊಹ್ಲಿ ಸದ್ಯಕ್ಕೆ ಚುಟುಕು ಮಾದರಿ ಕ್ರಿಕೆಟ್ ನ ಕಿಂಗ್ ಎನಿಸಿಕೊಂಡಿದ್ದಾರೆ. [ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

Virat Kohli becomes No. 1 T20I batsman in the world

27ವರ್ಷವಯಸ್ಸಿನ ಕೊಹ್ಲಿ ಅವರು 2016ರಲ್ಲಿ ನಾಲ್ಕು ಟಿ20 ಇನ್ನಿಂಗ್ಸ್ ಗಳಿಂದ 184ರನ್ ಕಲೆ ಹಾಕಿದ್ದು, ಮಾರ್ಚ್ 31ರಂದು ವೆಸ್ಟ್ ಇಂಡೀಸ್ ವಿರುದ್ಧ ವಿಶ್ವ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಆಡಲಿದ್ದಾರೆ.['ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!']

ಮುಂಬೈನ ವಾಖೆಂಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಿ20ಐ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ನ ಸ್ಯಾಮುಯಲ್ ಬದ್ರಿ ಅವರನ್ನು ಎದುರಿಸಲಿದ್ದಾರೆ. ವಿಂಡೀಸ್ ನ ದೈತ್ಯ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರು ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಐಸಿಸಿ ಟಿ20ಐ ಶ್ರೇಯಾಂಕ ಪಟ್ಟಿ ಟಾಪ್ 5 ಬ್ಯಾಟ್ಸ್ ಮನ್ (ಮಾರ್ಚ್ 29, 2016) ವಿವರ ಸ್ಲೈಡ್ ಗಳಲ್ಲಿ ನೋಡಿ...

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X