ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಂಬ್ಳೆ-ಕೊಹ್ಲಿ ಕಲಹ ನಿನ್ನೆ ಮೊನ್ನೆಯದ್ದಲ್ಲ, ತುಂಬಾ ಹಳೆ ಕಿರಿಕ್!

ಕುಂಬ್ಳೆ-ಕೊಹ್ಲಿ ಕಲಹ ನಿನ್ನೆ ಮೊನ್ನೆಯದ್ದಲ್ಲ, ತುಂಬಾ ಹಳೆ ಕಿರಿಕ್, ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಟೆಸ್ಟ್ ವೇಳೆಯೆ ಸ್ಫೋಟಗೊಳ್ಳಬೇಕಿತ್ತು. ಆದರೆ, ಇಬ್ಬರ ನಡುವಿನ ಮನಸ್ತಾಪ ಐಪಿಎಲ್ ಆರಂಭದಿಂದಲೂ ಇದೆ ಎಂಬ ಸುದ್ದಿ ಸಿಕ್ಕಿದೆ.

By Mahesh

ಬೆಂಗಳೂರು, ಮೇ 31: ಟೀಂ ಇಂಡಿಯಾದ ಹಿರಿಯ ಆಟಗಾರರು ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ದೂರು ನೀಡಿರುವ ಸುದ್ದಿಗೆ ಮತ್ತಷ್ಟು ಪೂರಕ ಮಾಹಿತಿ ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಕಲಹ ನಿನ್ನೆ ಮೊನ್ನೆಯದ್ದಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಟೂರ್ನಮೆಂಟ್ ನ ಮೊದಲ ಪಂದ್ಯದಿಂದಲೇ ವಿರಸ ಆರಂಭವಾಗಿರುವ ಸುದ್ದಿ ಸಿಕ್ಕಿದೆ.

ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ವಿರಸ ಕಂಡು ನನಗೇನೂ ಅಚ್ಚರಿಯಾಗುತ್ತಿಲ್ಲ. ಇಬ್ಬರು ತಮ್ಮ ವಾದ ಮಂಡಿಸುವಲ್ಲಿ, ಬೇಕಾದ್ದು ಪಡೆಯುವಲ್ಲಿ ಹಠಮಾರಿತನ ತೋರುತ್ತಾರೆ.ಇದನ್ನು ನಾನು ಐಪಿಎಲ್ ಆರಂಭದಲ್ಲೇ ಕಂಡಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಕೋಚ್ ದಕ್ಷಿಣ ಆಫ್ರಿಕಾದ ರೇ ಜೆನ್ನಿಂಗ್ಸ್ ಹೇಳಿದ್ದಾರೆ.[ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರ ದೂರು]

ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡುತ್ತಾ, ನಾಯಕ ಹಾಗೂ ಕೋಚ್ ನಡುವಿನ ಹೊಂದಾಣಿಕೆ ಅತಿ ಮುಖ್ಯ, ಟೀಂ ಇಂಡಿಯಾದಲ್ಲಿ ಇಬ್ಬರ ನಡುವಿನ ಈ ರೀತಿ ಕಲಹವಿದ್ದರೂ ತಂಡ ಉತ್ತಮ ಫಲಿತಾಂಶ ಹೊರ ಹಾಕಿರುವುದು ಅಚ್ಚರಿಯ ಅಂಶ. ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾದಾಗಿನಿಂದಲೂ ಮಾಜಿ ನಾಯಕ ರವಿಶಾಸ್ತ್ರಿ ಅವರು ಕೋಚ್ ಆಗಲಿ ಎಂದು ಬಯಸಿದ್ದರು. ಅವರಿಬ್ಬರ ನಡುವೆ ಉತ್ತಮ ಸಂವಹನವಿತ್ತು.

Conflict between Virat Kohli and Anil Kumble isn't surprising to his first IPL coach


ಆದರೆ, ಕುಂಬ್ಳೆ ಅವರು ಕೋಚ್ ಆಗಿ ಬಂದ ಮೇಲೆ ತಂಡದಲ್ಲಿ ಶಿಸ್ತು, ನಿಯಮಗಳು ಹೆಚ್ಚಾಯಿತು. ತಂಡದ ಆಯ್ಕೆ ವಿಷಯದಲ್ಲೂ ಇಬ್ಬರ ನಡುವೆ ಮನಸ್ತಾಪಗಳು ಉಂಟಾಗಿರಬಹುದು ಎಂದು ಜೆನ್ನಿಂಗ್ಸ್ ಹೇಳಿದರು.

ರಾಂಚಿ ಟೆಸ್ಟ್ :
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಟೆಸ್ಟ್​ನಲ್ಲಿ ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು ಕಣಕ್ಕಿಳಿಸುವ ಬಗ್ಗೆ ಕೊಹ್ಲಿ -ಕುಂಬ್ಳೆಯಲ್ಲಿ ಒಮ್ಮತ ಮೂಡಿರಲಿಲ್ಲ. ಆದರೆ, ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡ ಕೊಹ್ಲಿ ಬದಲಿಗೆ ಅಜಿಂಕ್ಯ ರಹಾನೆ ಅವರು ನಾಯಕರಾಗಿ ಕಣಕ್ಕಿಳಿದರು. ಕುಲದೀಪ್ ಗೆ ಅವಕಾಶ ಸಿಕ್ಕು, ಉತ್ತಮ ಪ್ರದರ್ಶನ ನೀಡಿದ್ದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X