ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕಕ್ಕೆ 5 ರನ್ ಗಳ ಅಮೋಘ ಜಯ

ಕೋಲ್ಕತ್ತ, ಫೆಬ್ರವರಿ. 26 : ವೇಗಿ ಪ್ರಸಿದ್ಧ ಎಂ. ಕೃಷ್ಣ ಚುರುಕಿನ ಬೌಲಿಂಗ್‌ನಿಂದ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ ಜಾರ್ಖಂಡ್ ಎದುರು ಐದು ರನ್‌ಗಳ ರೋಚಕ ಗೆಲುವು ಸಾಧಿಸಿತು.

ಈಡನ್ ಗಾರ್ಡನ್‌ ಕ್ರೀಡಾಂಗಣ ದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮನೀಷ್ ಪಾಂಡೆ ಪಡೆ 49.4 ಓವರ್‌ಗಳಲ್ಲಿ 266 ರನ್‌ ಗಳಿಸಿತ್ತು. ಉತ್ತಮ ಮೊತ್ತದ ಗುರಿ ಬೆನ್ನು ಹತ್ತಿದ ಜಾರ್ಖಂಡ್ 49.5 ಓವರ್ ಗಳಲ್ಲಿ 261 ಗಳಿಸಿ ಗೆಲುವಿಗೆ 5 ರನ್ ಅಗತ್ಯವಿದ್ದಾಗ ಸರ್ವಪ ಕಂಡಿತು.

ಸೈಯದ್‌ ಮುಷ್ತಾಕ್ ಅಲಿ ಟೂರ್ನಿಯ ದಕ್ಷಿಣ ವಲಯದ ಚಾಂಪಿ ಯನ್ ಕರ್ನಾಟಕ ತಂಡಕ್ಕೆ ಆರ್. ಸಮರ್ಥ್ 93 ಎಸೆತಗಳಲ್ಲಿ 6 ಬೌಂಡರಿ ನೆರವಿನೊಂದಿಗೆ 71 ರನ್ ಗಳಿಸಿದರು.

Vijay Hazare: Karnataka manages a narrow win over Jharkhand

ಮತ್ತು ಮನೀಷ್ 95 ಎಸೆತಗಳಲ್ಲಿ 6 ಬೌಂಡರಿ, ಆಕರ್ಷಕ 2 ಸಿಕ್ಸರ್ ನಿಂದ 77 ರನ್ ಗಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಪವನ್‌ ದೇಶಪಾಂಡೆ 36 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಜಾರ್ಖಂಡ್ ತಂಡ ಅರಂಭಿಕ ಕ್ರಮಾಂಕದ ಬ್ಯಾಟ್ಸ್ ಮನ್‌ಗಳ ವೈಫಲ್ಯ ದಿಂದ ಪರದಾಡಿದರೂ ನಂತರ ಉತ್ತಮ ಹೋರಾಟ ನಡೆಸಿದರಾದರೂ ಕೊನೆಗಳಿಗೆಯಲ್ಲಿ ಗೆಲುವಿನ ಗುರಿ ಮಟ್ಟದೆ ಸೋಲನುಭವಿಸಿತು.

ಸೌರಭ್ ತಿವಾರಿ (68) ಮತ್ತು ದೋನಿ (43) ಐದನೇ ವಿಕೆಟ್‌ಗೆ 81 ರನ್ ಕಲೆ ಹಾಕಿ ತಂಡವನ್ನು ಗೆಲುವಿನ ಸನಿಹ ತಂದರು. ಆದರೆ, ಬಾಲಂಗೋಚಿ ಗಳು ಬೇಗನೆ ಔಟಾದ ಕಾರಣ ಕರ್ನಾಟಕ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು.

ದೋನಿ ಬಳಗ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಾಗ 233 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 29 ರನ್ ಅಗತ್ಯವಿತ್ತು.ಹತ್ತನೇ ವಿಕೆಟ್‌ಗೆ ಮೌನು ಕುಮಾರ್‌ ಮತ್ತು ರಾಹುಲ್‌ ಶುಕ್ಲಾ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಹೋರಾಟ ನಡೆಸಿ ವಿಫಲರಾದರು.

ಜಾರ್ಖಂಡ್ ಗೆಲುವಿಗೆ ಆರು ಎಸೆತಗಳಲ್ಲಿ 13 ರನ್ ಅಗತ್ಯವಿತ್ತು. ಒಂದು ಸಿಕ್ಸರ್ ಮತ್ತು ಎರಡು ರನ್‌ ಗಳಿಸಿದ ತಂಡ ಕೊನೆಯ ಎರಡು ಎಸೆತಗಳಲ್ಲಿ ಐದು ರನ್ ಗಳಿಸ ಬೇಕಿತ್ತು.

ಆಗ ಚುರುಕಿನ ಫೀಲ್ಡಿಂಗ್ ಮಾಡಿ ಶುಕ್ಲಾ ಅವರನ್ನು ಪ್ರಸಿದ್ಧ ಕೃಷ್ಣ ಐದನೇ ಎಸೆತದಲ್ಲಿ ರನ್‌ ಔಟ್‌ ಮಾಡಿ ರಾಜ್ಯ ತಂಡದ ಜಯಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ 49.4 ಓವರ್‌ಗಳಲ್ಲಿ 266 (ಮಯಂಕ್ 26, ಆರ್‌. ಸಮರ್ಥ್ 71, ಮನೀಷ್ ಪಾಂಡೆ 77, ಪವನ್‌ ದೇಶಪಾಂಡೆ 36, ಜೆ. ಸುಚಿತ್ 19; ರಾಹುಲ್‌ ಶುಕ್ಲಾ 45ಕ್ಕೆ4).

ಜಾರ್ಖಂಡ್ 49.5 ಓವರ್‌ಗಳಲ್ಲಿ 261. ಸೌರಭ್ ತಿವಾರಿ 68, ಮಹೇಂದ್ರ ಸಿಂಗ್ ದೋನಿ 43, ರಾಹುಲ್‌ ಶುಕ್ಲಾ  23; ಎಂ. ಪ್ರಸಿದ್ಧ ಕೃಷ್ಣ 41ಕ್ಕೆ2, ಟಿ. ಪ್ರದೀಪ್‌ 49ಕ್ಕೆ2, ಕೆ. ಗೌತಮ್ 58ಕ್ಕೆ4.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X