ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಡಿಯೋ : ವಿಶೇಷ ರೀತಿಯಲ್ಲಿ ಜಾಸನ್ ರಾಯ್ ರನೌಟ್

By Mahesh

ಲಂಡನ್ ಜೂನ್ 25: ಇಂಗ್ಲೆಂಡಿನ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ರನೌಟ್ ಆಗಿದ್ದು ಹೊಸ ದಾಖಲೆಯಾಗಿದೆ. ರನೌಟ್ ಗೆ ಸಂಬಂಧಿಸಿದ ಹೊಸ ನಿಯಯಕ್ಕೆ ಔಟಾದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡಿನ ಆರಂಭಿಕ ಆಟಗಾರ ರಾಯ್ ಫೀಲ್ಡಿಂಗಿಗೆ ಅಡ್ಡಿಪಡಿಸಿದ ಕಾರಣಕ್ಕೆ ಅಂಪೈರ್‌ ಗಳು ರನೌಟ್ ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಈ ರೀತಿ ರನೌಟ್‌ ಆಗಿದ್ದು ಇದೇ ಮೊದಲು.

ಆಗಿದ್ದೇನು? : ಇಂಗ್ಲೆಂಡಿನ ಇನಿಂಗ್ಸ್‌ ನ 16ನೇ ಓವರ್‌ ನಲ್ಲಿ ಈ ಘಟನೆ ನಡೆಯಿತು.ಲಿಯಾಮ್ ಲಿವಿಂಗ್‌ ಸ್ಟೋನ್ ಅವರು ಬ್ಯಾಕ್‌ವರ್ಡ್ ಪಾಯಿಂಟ್‌ನತ್ತ ಚೆಂಡನ್ನು ತಳ್ಳಿದಾಗ ನಾನ್ ಸ್ಟ್ರೈಕ್ ನಲ್ಲಿದ್ದ ರಾಯ್‌ ಅವರು ಒಂದು ರನ್ ಗಾಗಿ ಕರೆ ನೀಡಿದರು.

Video: England's Jason Roy given out obstructing the field in T20I

ಆದರೆ, ಲಿಯಾಮ್ ಅವರು ರಾಯ್ ಮನವಿ ಪುರಸ್ಕರಿಸದೆ ಕ್ರೀಸ್ ಗೆ ಹಿಂತಿರುಗಿದರು.

ಈ ಸಂದರ್ಭದಲ್ಲಿ ರಾಯ್ ಅವರನ್ನು ರನೌಟ್ ಮಾಡಲು ಎಸೆದ ಚೆಂಡನ್ನು ರಾಯ್ ಅವರು ಬೇಕಂತಲೆ ಬೂಟಿನಿಂದ ತಡೆದರು. ಇದನ್ನು ಕಂಡು ದಕ್ಷಿಣ ಅಫ್ರಿಕಾದ ಆಟಗಾರರು ರನೌಟ್ ಗಾಗಿ ಮನವಿ ಮಾಡಿದರು.


ಟಿವಿ ಅಂಪೈರ್ ರಾಯ್ ವಿರುದ್ಧ ರನೌಟ್ ತೀರ್ಪು ನೀಡಿ ಅಚ್ಚರಿ ಮೂಡಿಸಿದರು. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮನಾಗಿದೆ.

ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಈ ರೀತಿ ರನೌಟ್ ಆದವರು:

* ರಮೀಜ್ ರಾಜ(ಪಾಕಿಸ್ತಾನ) ವಿರುದ್ಧ ಇಂಗ್ಲೆಂಡ್ 1987, ಕರಾಚಿ
* ಮೊಹಿಂದರ್ ಅಮರನಾಥ್ (ಭಾರತ) ವಿರುದ್ಧ ಶ್ರೀಲಂಕಾ, 1989, ಅಹಮದಾಬಾದ್
* ಇನ್ಜಾಮಾ ಉಲ್ ಹಕ್ (ಪಾಕಿಸ್ತಾನ) ವಿರುದ್ಧ ಭಾರತ, 2006 (ಪೇಶಾವರ್)
* ಮೊಹಮ್ಮದ್ ಹಫೀಜ್ (ಪಾಕಿಸ್ತಾನ) ವಿರುದ್ಧ ದಕ್ಷಿಣ ಆಫ್ರಿಕಾ, 2013 (ಡರ್ಬನ್)
* ಅನ್ವರ್ ಅಲಿ (ಪಾಕಿಸ್ತಾನ) ವಿರುದ್ಧ ದಕ್ಷಿಣ ಆಫ್ರಿಕಾ, 2013 (ಪೋರ್ಟ್ ಎಲಿಜಬತ್)
* ಬೆನ್ ಸ್ಟೋಕ್ಸ್ (ಇಂಗ್ಲೆಂಡ್) ವಿರುದ್ಧ ಆಸ್ಟ್ರೇಲಿಯಾ, 2015 (ಲಾರ್ಡ್ಸ್, ಲಂಡನ್)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X