ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಆಧಾರ್ ಕಾರ್ಡ್ ವಿವರ ಬಹಿರಂಗ, ಸಾಕ್ಷಿ ಗರಂ

ನಾಗರಿಕರಿಗೆ ಆಧಾರ್ ಸಂಖ್ಯೆ ಒದಗಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)ಕ್ಕೆ ನೆರವಾಗುವ ಏಜೆನ್ಸಿಯೊಂದು ಕ್ರಿಕೆಟರ್ ಧೋನಿ ಅವರ ಆಧಾರ್ ಕಾರ್ಡ್ ವಿವರ ಬಹಿರಂಗ ಮಾಡಿದ್ದು ತಿಳಿದಿರಬಹುದು. ಈ ಸಂಸ್ಥೆ ಈಗ ಕಪ್ಪಪಟ್ಟಿಗೆ ಸೇರಿದೆ.

By Mahesh

ರಾಂಚಿ, ಮಾರ್ಚ್ 29: ನಾಗರಿಕರಿಗೆ ಆಧಾರ್ ಸಂಖ್ಯೆ ಒದಗಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)ಕ್ಕೆ ನೆರವಾಗುವ ಏಜೆನ್ಸಿಯೊಂದು ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರ ಆಧಾರ್ ಕಾರ್ಡ್ ವಿವರ ಬಹಿರಂಗ ಮಾಡಿದ್ದು ತಿಳಿದಿರಬಹುದು. ಇಂಥದ್ದೊಂದು ಪ್ರಮಾದ ಎಸಗಿದ ಸಂಸ್ಥೆಯನ್ನು 10ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ವಿವರಗಳನ್ನು ಟ್ವೀಟ್ ಮಾಡಲಾಗಿತ್ತು.ಇದನ್ನು ಕಂಡು ಗರಂ ಆಗಿದ್ದ ಧೋನಿ ಅವರ ಪತ್ನಿ ಸಾಕ್ಷಿ ಅವರು ಕೇಂದ್ರ ಸರ್ಕಾರದ ಗಮನಕ್ಕೆ ಈ ವಿಷಯ ತಂದಿದ್ದರು.

UIDAI blacklists Agency that leaked Dhoni's Aadhar details


ಧೋನಿ ಅವರ ಪತ್ನಿ ಸಾಕ್ಷಿ ಟ್ವಿಟರ್​ನಲ್ಲಿ ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ವಿಷಯ ತಿಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ರಾಂಚಿಯ ವಿಎಲ್​ಇ ಮರಿಯಾ ಫಾರುಖಿ ಅವರ ಕಾಮನ್ ಸರ್ವೀಸ್ ಸೆಂಟರ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಕುಟುಂಬಸ್ಥರು ಆಧಾರ್ ನೋಂದಣಿ ಮಾಡಿಸಿದ್ದರು.ದೋನಿ ಅವರ ಜೊತೆಗೆ ಏಜೆನ್ಸಿಯ ಸಿಬ್ಬಂದಿ ತೆಗೆಸಿಕೊಂಡ ಫೋಟೊವನ್ನು ಲಗತ್ತಿಸಿ ಟ್ವೀಟ್ ಮಾಡಲಾಗಿತ್ತು.

'ಅಪ್ಲಿಕೇಶನ್ ಸೇರಿದಂತೆ ಆಧಾರ್ ಕಾರ್ಡ್ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಖಾಸಗಿತನಕ್ಕೆ ಅವಕಾಶವೇ ಇಲ್ಲವೇ?' ಎಂದು ಸಾಕ್ಷಿ ಅವರು ಖಾರವಾಗಿ ರವಿಶಂಕರ್ ಪ್ರಸಾದ್ ಅವರನ್ನು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಸಾದ್, 'ವೈಯಕ್ತಿಕ ಮಾಹಿತಿ ಬಹಿರಂಗ ಮಾಡುವುದು ಅಕ್ರಮ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು' ಎಂದು ಪ್ರತಿಕ್ರಿಯಿಸಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X