ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಷಿಂಗ್ಟನ್ 'ಸುಂದರ' ಆಟ, ಯು-19 ತಂಡ ಫೈನಲಿಗೆ

By Mahesh

ಕೋಲ್ಕತಾ, ನ.25: ಇಲ್ಲಿನ ಜಾಧವ್‌ಪುರ ಯುನಿವರ್ಸಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿಯೊಳಗಿನ ತಂಡಗಳ ತ್ರಿಕೋನ ಸರಣಿಯಲ್ಲಿ ಭಾರತ ಫೈನಲ್ ತಲುಪಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೇ ನನ್ನ ಉತ್ತಮ ಪ್ರದರ್ಶನಕ್ಕೆ ಕಾರಣ ಎಂದು ಪಂದ್ಯಶ್ರೇಷ್ಠ ಸುಂದರ್ ಅವರು ಹೇಳಿದ್ದಾರೆ.

ಟೀಂ ಇಂಡಿಯಾ ಆಟಗಾರ ಸುಂದರ್ ವಾಷಿಂಗ್ಟನ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಆತಿಥೇಯ ಭಾರತ ತಂಡ ತ್ರಿಕೋನ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4 ವಿಕೆಟ್‌ಗಳಿಂದ ಮಣಿಸಿದೆ.

ಸತತ ಮೂರು ಗೆಲುವು ಸಾಧಿಸಿರುವ ಭಾರತ ತ್ರಿಕೋನ ಸರಣಿಯಲ್ಲಿ ಫೈನಲ್‌ಗೆ ತಲುಪಿದೆ. ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೆಹದಿ ಹಸನ್ ಮಿರಾಝ್ (87) ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿತ್ತು.

U-19 Tri-series: Sundar Washington shines as India enter final


ಸುಲಭ ಗುರಿಯನ್ನು ಬೆನ್ನು ಹತ್ತಿದ್ದ ಭಾರತದ ಜೂನಿಯರ್ ತಂಡಕ್ಕೆ ರಿಷಬ್ ಪಂತ್ 51 ರನ್(26 ಎಸೆತ, 9X4, 2X6), ವಾಷಿಂಗ್ಟನ್ ಸುಂದರ್ 50 ರನ್(75 ಎಸೆತ, 6 ‍X4) ಹಾಗೂ ಅಮನ್‌ದೀಪ್ ಖರೆ 41 ರನ್(95 ಎಸೆತ, 3 X4) ಅವರ ಸಮಯೋಚಿತ ಬ್ಯಾಟಿಂಗ್‌ ನೆರ್ರವಿನಿಂದ 48.4 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 223 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಭಾರತ 21.2 ಓವರ್‌ಗಳಲ್ಲಿ 116 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಅದರೆ, 5ನೇ ವಿಕೆಟ್‌ಗೆ 69 ರನ್ ಜೊತೆಯಾಟವನ್ನು ನಡೆಸಿದ ಸುಂದರ್ (50) ಹಾಗೂ ಅಮನ್‌ದೀಪ್ ಖರೆ (41) ಭಾರತದ ಗೆಲುವಿನ ಆಸೆ ಮೂಡಿಸಿದರು.
ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಎಡಗೈ ಬ್ಯಾಟ್ಸ್ ಮನ್ ಸುಂದರ್ ಬೌಲಿಂಗ್‌ನಲ್ಲಿ ಆರು ಓವರ್‌ಗಳಲ್ಲಿ 25 ರನ್‌ಗೆ 2 ವಿಕೆಟ್‌ಗಳನ್ನು ಕಬಳಿಸಿ ಬಾಂಗ್ಲಾದೇಶವನ್ನು 7 ವಿಕೆಟ್‌ಗೆ 222 ರನ್‌ಗೆ ನಿಯಂತ್ರಿಸಿದ್ದರು. ಮೂರು ಪಂದ್ಯಗಳಲ್ಲಿ ಒಟ್ಟು 13 ಅಂಕವನ್ನು ಗಳಿಸಿರುವ ಭಾರತ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ತನ್ನ ಸ್ಥಾನ ದೃಢಪಡಿಸಿದೆ. ಬಾಂಗ್ಲಾದೇಶ ಬುಧವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 50 ಓವರ್‌ಗಳಲ್ಲಿ 222/7
(ಮೆಹದಿ ಹಸನ್ ಮಿರಾಝ್ 87,ಸೈಫ್ ಹಸನ್ 33, ಮುಹಮ್ಮದ್ ಸೈಫುದ್ದೀನ್ 30, ವಾಷಿಂಗ್ಟನ್ ಸುಂದರ್ 2-25)
ಭಾರತ: 48.4 ಓವರ್‌ಗಳಲ್ಲಿ 223/6
(ಆರ್. ಪಂತ್ 51, ವಾಷಿಂಗ್ಟನ್ ಸುಂದರ್ 50, ಖರೆ 41, ಮೆಹದಿ ಹಸನ್ 2-50)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X