ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟ್ಟರಿಗರ ಪಾಲಿಗೆ ಶಕುನಿ, ಎಂಎಂ ಸಿಂಗ್ ಆದ ರವಿಶಾಸ್ತ್ರಿ

By Mahesh

ಬೆಂಗಳೂರು, ಜುಲೈ 12: ಅಂತೂ ಇಂತೂ ನಾಯಕ ವಿರಾಟ್ ಕೊಹ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಿದ್ದಾರೆ. ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಿಸಲಾಗಿದೆ.

ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ಮತ್ತೆ ಕೋಚ್ ಆಗಿ ಬಂದಿದ್ದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ.

ರವಿಶಾಸ್ತ್ರಿ ಅವರು ಮುಖ್ಯ ಕೋಚ್ ಆಗಿದ್ದರೆ, ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ವಿದೇಶದಲ್ಲಿ ಆಡುವಾಗ ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಸಲಹೆ ನೀಡಲಿದ್ದಾರೆ.

ಮಿಕ್ಕಂತೆ ಸಂಜಯ್ ಬಂಗಾರ್ ಅವರು ಪೂರ್ಣಾವಧಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ(ಜುಲೈ 11) ರಾತ್ರಿ ಪ್ರಕಟಿಸಿದೆ. ಸುದ್ದಿ ಹೊರಬರುತ್ತಿದ್ದಂತೆ, ಸಾಮಾಜಿಕ ಜಾಲ ತಾಣಗಳಲ್ಲಿ ಥರಾವರಿ ಪ್ರತಿಕ್ರಿಯೆಗಳು ಬಂದಿವೆ. ಬಹುತೇಕ, ಕೈಗೊಂಬೆ ಕೋಚ್ ನೇಮಕಕ್ಕೆ ಛೀಮಾರಿ ಹಾಕಿದ ಟ್ವೀಟ್ ಗಳು ಕಂಡು ಬಂದಿವೆ..

ನೇಮಕದ ಬಗ್ಗೆ ಅಣಕು

ನೇಮಕದ ಬಗ್ಗೆ ಅಣಕು

ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದರ ಬಗ್ಗೆ ಬಹುತೇಕ ತಮಾಷೆ, ಗೇಲಿ ಟ್ವೀಟ್ ಗಳು ಬಂದಿವೆ.

ಟೀಂ ಇಂಡಿಯಾದ ಮನಮೋಹನ್ ಸಿಂಗ್

ಟೀಂ ಇಂಡಿಯಾದ ಮನಮೋಹನ್ ಸಿಂಗ್ -ರವಿಶಾಸ್ತ್ರಿ. ಹುಡುಗರೇ ಚೆನ್ನಾಗಿ ಆಟವಾಡಿ, ಲೆಜೆಂಡ್ ಕುಂಬ್ಳೆಯನ್ನು ಹೊರಹಾಕಿದ್ರಿ ಎಂಬ ಗೇಲಿ ಮಾಡುವ ಟ್ವೀಟ್.

ಸಂದರ್ಶನದ ನಾಟಕ ಏಕೆ?

ರವಿಶಾಸ್ತ್ರಿ ಅವರನ್ನೇ ಮುಖ್ಯ ಕೋಚ್ ಆಗಿ ನೇಮಿಸಬೇಕಿದ್ದರೆ, ಬೇರೆಯವರನ್ನು ಸಂದರ್ಶಿಸುವ ನಾಟಕ ಮಾಡಿದ್ದು ಏಕೆ?

ಕೊಹ್ಲಿ ರಾಜಕಾರಣಿ

2019ರ ವಿಶ್ವಕಪ್ ತನಕ ರವಿ ಶಾಸ್ತ್ರಿ ಕೋಚ್ ಆಗಿ ನೇಮಕವಾಗಿದ್ದಾರೆ. ಕೊಹ್ಲಿ ಒಬ್ಬ ಉತ್ತಮ ಬ್ಯಾಟ್ಸ್ ಮನ್ ಅಷ್ಟೇ ಅಲ್ಲ, ಒಬ್ಬ ಒಳ್ಳೆ ರಾಜಕಾರಣಿಯಾಗಬಹುದು.

ಸ್ವಾರ್ಥಕ್ಕೆ ತಕ್ಕಂತೆ ಕುಣಿತ

ಸ್ವಾರ್ಥಕ್ಕೆ ತಕ್ಕಂತೆ ಕುಣಿತ ಎಲ್ಲೆಡೆ ಕಂಡು ಬಂದಿದೆ. ಸಿಎಸಿ, ಬಿಸಿಸಿಐ ನಾಟಕವನ್ನು ನೋಡುವ ದೌರ್ಭಾಗ್ಯ ನಮ್ಮದಾಗಿದೆ.

ರವಿಶಾಸ್ತ್ರಿ ಶಕುನಿ ಮಾಮ

ಧುರ್ಯೋದನ ವಿರಾಟ್ ಕೊಹ್ಲಿ ಈಗ ಶಕುನಿ ಮಾಮ ರವಿಶಾಸ್ತ್ರಿ ಜತೆಗೂಡಿದ್ದಾರೆ. ಧೋನಿ, ಯುವರಾಜ್ ಮುಂತಾದ ಕ್ರಿಕೆಟರ್ಸ್ ಅವನತಿ ಆರಂಭ.

ಕಾಮೆಂಟ್ರಿ ಮಿಸ್

ರವಿಶಾಸ್ತ್ರಿ ಅವರ ಕ್ರಿಕೆಟ್ ಕಾಮೆಂಟ್ರಿ ಮಿಸ್ ಮಾಡಿಕೊಳ್ಳುತ್ತೇವೆ ಎಂದ ಕೆಲ ಟ್ವಿಟ್ವಿಗರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X