ವಿಶ್ವ ಟಿ20: ಟ್ವಿಟ್ಟರ್ ಕನಸಿನ ತಂಡಕ್ಕೆ ಧೋನಿ ಕ್ಯಾಪ್ಟನ್!

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 14: ಮಾರ್ಚ್ 21ರಂದು ಹತ್ತನೇ ಹುಟ್ಟುಹಬ್ಬ ಆಚರಿಸುತ್ತಿರುವ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಇತ್ತೀಚೆಗೆ ವಿಶ್ವ ಟಿ20ಗಾಗಿ ಕನಸಿನ ತಂಡವನ್ನು ಪ್ರಕಟಿಸಿತ್ತು. ಈ ಡ್ರೀಂ ಟೀಂಗೆ ಎಂಎಸ್ ಧೋನಿ ಅವರು ನಾಯಕರಾಗಿದ್ದರೆ, ವಿರಾಟ್ ಕೊಹ್ಲಿ ಉಪನಾಯಕರಾಗಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಶ್ವ ಟಿ20 ಬಗ್ಗೆ ಬಂದಿರುವ ವರದಿ, ಆಟಗಾರರ ಅಂಕಿ ಅಂಶ, ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಆಟಗಾರರ ಬಗ್ಗೆ ಕಳೆದ ವರ್ಷದಿಂದಲೇ ಮಾಹಿತಿ ಕಲೆ ಹಾಕಿ ಈ ತಂಡವನ್ನು ಪ್ರಕಟಿಸಲಾಗಿದೆ.[ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು]

ಕನಸಿನ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕರಾಗಿರುವ ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿದ್ದಾರೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್ ಹಾಗೂ ಇನ್ನೂ ಚಾನ್ಸ್ ಸಿಗದ ಹರ್ಭಜನ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ.[ಬೊಂಬಾಟ್ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ 10ರ ಸಂಭ್ರಮ]

ಟ್ವಿಟ್ಟರ್ ನಲ್ಲಿ #WT20 ಸರ್ಚ್ ನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಆಟಗಾರರಿಗೆ ತಂಡ ಸೇರುವ ಅವಕಾಶ ಸಿಕ್ಕಿದೆ. ಇಂಥ ತಂಡವೊಂದನ್ನು ಕೋಚ್ ಮಾಡಲು ಅವಕಾಶ ಪಡೆದವರೇ ಲಕ್ಕಿ ಎಂದು ಹೇಳಲಾಗಿದೆ.[ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

ಉಳಿದಂತೆ ತಂಡದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್, ಪಾಕಿಸ್ತಾನದ ಆಲ್ ರೌಂಡರ್, ನಾಯಕ ಶಾಹೀದ್ ಅಫ್ರಿದಿ, ಆಲ್ ರೌಂಡರ್ ವಹಾಬ್ ರಿಯಾಜ್, ಬ್ಯಾಟ್ಸ್ ಮನ್ ಮೊಹಮ್ಮದ್ ಹಫೀಜ್, ದಕ್ಷಿಣ ಅಫ್ರಿಕಾದ ವೇಗಿ ಡೇಲ್ ಸ್ಟೈನ್, ವೆಸ್ಟ್ ಇಂಡೀಸ್ ನ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಇದ್ದಾರೆ. ಅಚ್ಚರಿ ಎಂದರೆ, ಎಲ್ಲಾ ಮಾದರಿಯಲ್ಲೂ ಚಾಣಕ್ಷತನದ ಬ್ಯಾಟಿಂಗ್ ಪ್ರದರ್ಶಿಸುವ 360 ಡಿಗ್ರಿ ಬ್ಯಾಟ್ ಬೀಸುವ ಎಬಿ ಡಿ ವಿಲಿಯರ್ಸ್ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. (ಐಎಎನ್ಎಸ್)

English summary
Can the likes of Virat Kohli and Dale Steyn play for the same team in the World Twenty 20? Twitter came up with a dream XI for the tournament featuring the duo.The dream XI also boasts of five Indian cricketers with Mahendra Singh Dhoni as the captain and wicket-keeper of the team.
Please Wait while comments are loading...