ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಎ ತಂಡ ಮಣಿಸಿ ಫೈನಲಿಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ

By Mahesh

ಚೆನ್ನೈ, ಆಗಸ್ಟ್ 10: ತ್ರಿಕೋನ ಏಕದಿನ ಸರಣಿಯಲ್ಲಿ ಅಜೇಯವಾಗಿ ಉಳಿದಿರುವ ಆಸ್ಟ್ರೇಲಿಯಾ ಎ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಎ ತಂಡವನ್ನು ಸೋಲಿಸಿ ಫೈನಲಿಗೆ ಲಗ್ಗೆ ಇಟ್ಟಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಎ ತಂಡ 3 ವಿಕೆಟ್ ಗಳ ಅಂತರದ ಸೋಲು ಕಂಡಿದೆ.

ಗೆಲ್ಲಲು ಬೇಕಿದ್ದ 259ರನ್ ಗಳ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಆಸ್ಟ್ರೇಲಿಯಾ ಎ ಬ್ಯಾಟ್ಸ್ ಮನ್ ಗಳು ಅತಿಥೇಯ ಭಾರತದ ವಿರುದ್ಧ ಸತರ ಎರಡನೇ ಜಯ ದಾಖಲಿಸಿದರು. [ದಕ್ಷಿಣ ಆಫ್ರಿಕಾ ಪರ ಮಂದೀಪ್ ಫೀಲ್ಡಿಂಗ್, ಟ್ವೀಟ್ಸ್ ಪ್ರತಿಕ್ರಿಯೆ]

ಈ ಗೆಲುವಿನೊಂದಿಗೆ 14 ಅಂಕಗಳನ್ನು ಪಡೆದು ಸರಣಿಯ ಫೈನಲಿಗೆ ಆಸ್ಟ್ರೇಲಿಯಾ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬೋನಸ್ ಅಂಕಗಳೊಂದಿಗೆ ಜಯ ದಾಖಲಿಸಿದ ಭಾರತ ಎ ತಂಡ 5 ಅಂಕಗಳೊಂದಿಗೆ ಫೈನಲ್ ಪ್ರವೇಶಿಸುವುದು ಖಾತ್ರಿಯಾಗಿದೆ.

Tri-series: Ashton Agar shines as Australia A edge India A to enter final


ಭಾರತ ಎ ಇನ್ನಿಂಗ್ಸ್:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ತಂಡ 50 ಓವರ್ ಗಳಲ್ಲಿ 258/9 ಸ್ಕೋರ್ ಮಾಡಿತು. ಕರ್ನಾಟಕದ ಮಾಯಾಂಕ್ ಅಗರವಾಲ್ 61 ( 61ಎಸೆತ, 7x4, 1x6) ಹಾಗೂ ಮನೀಶ್ ಪಾಂಡೆ 50 ರನ್ (38 ಎಸೆತಗಳು, 2x4,2x6) ತಂಡಕ್ಕೆ ಅಸರೆಯಾದರು. ಆಸ್ಟ್ರೇಲಿಯಾ ಪರ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್ 5/39 ಗಳಿಸಿ ಭಾರತ ತಂಡಕ್ಕೆ ಮುಳುವಾದರು.

ಆಸ್ಟ್ರೇಲಿಯಾ ಎ ತಂಡ 34.3 ಓವರ್ ಗಳಲ್ಲಿ 178/6 ಸ್ಕೋರ್ ಮಾಡಿ ದುಃಸ್ಥಿತಿಯಲ್ಲಿದ್ದಾಗ ಬಲಗೈ ಬ್ಯಾಟ್ಸ್ ಮನ್ ಆಡಂ ಝಂಪಾ 54 ರನ್ (49 ಎಸೆತ, 7x4,1x6), ಫರ್ಗುಸನ್ ಅಜೇಯ 45 ರನ್ ಗಳಿಸಿ 80 ಜೊತೆಯಾಟದಿಂದ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಭಾರತದ ಪರ ಕರಣ್ ಶರ್ಮ 3/45 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಆಗಸ್ಟ್ 12 ರಂದು ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಆಡಲಿದೆ. ಇದಕ್ಕೂ ಮುನ್ನ ಆಗಸ್ಟ್ 11 ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸೆಣಸಾಡಲಿವೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X