ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018ರಲ್ಲಿ ಗೇಲ್ ಸೇರಿದಂತೆ ಯಾರೆಲ್ಲ ಇರಲ್ಲ!

ಐಪಿಎಲ್ 2018ರಲ್ಲಿ ಯಾವ ಆಟಗಾರರು ಯಾವ ತಂಡದಲ್ಲಿರುತ್ತಾರೆ ಹೇಳಲಿಕ್ಕೆ ಬರುವುದಿಲ್ಲ, ಹರಾಜು ಸೇರಿದಂತೆ ತಂಡಗಳ ಸ್ವರೂಪವೇ ಹೊಸತನದಿಂದ ಕೂಡಲಿದೆ. ಜತೆಗೆ ಗೇಲ್ ಸೇರಿದಂತೆ ಹಿರಿಯ ಆಟಗಾರರು ವಿದಾಯ ಹೇಳುವ ನಿರೀಕ್ಷೆಯಿದೆ

By Mahesh

ಬೆಂಗಳೂರು, ಮೇ 21: ಐಪಿಎಲ್ 2018ರಲ್ಲಿ ಯಾವ ಆಟಗಾರರು ಯಾವ ತಂಡದಲ್ಲಿರುತ್ತಾರೆ ಹೇಳಲಿಕ್ಕೆ ಬರುವುದಿಲ್ಲ, ಹರಾಜು ಸೇರಿದಂತೆ ತಂಡಗಳ ಸ್ವರೂಪವೇ ಹೊಸತನದಿಂದ ಕೂಡಲಿದೆ. ಜತೆಗೆ ಗೇಲ್ ಸೇರಿದಂತೆ ಹಿರಿಯ ಆಟಗಾರರು ವಿದಾಯ ಹೇಳುವ ನಿರೀಕ್ಷೆಯಿದೆ.

ಇದು ನಿರೀಕ್ಷೆ ಇಟ್ಟುಕೊಂಡು ಬರೆದ ಲೇಖನವಷ್ಟೇ ವಯಸ್ಸು ಎಂಬುದು ಜಸ್ಟ್ ನಂಬರ್ ಎಂದು ಹೇಳಿ 40ಪ್ಲಸ್ ಆದರೂ ತಂಡದಲ್ಲಿ ಕಾಣಿಸಿಕೊಂಡರೆ ನಮ್ಮನ್ನು ದೂರಬೇಡಿ.

ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಸಂಭ್ರಮಾಚರಣೆ ಜತೆಗೆ ಹಿರಿಯ ಆಟಗಾರರಾದ ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಜಹೀರ್ ಖಾನ್ ಮುಂತಾದವರ ವಿದಾಯದ ಟೂರ್ನಿಯಾಗಿದೆ.

ಗೇಲ್ ಸೇರಿದಂತೆ ಬಹುತೇಕ ಹಿರಿಯ ಆಟಗಾರರ ಪೈಕಿ ಅನೇಕರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೆಲವು ಉತ್ತಮ ಪ್ರದರ್ಶನ ನೀಡಿದರೂ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸಲು ಸಾಧ್ಯವಾಗಿಲ್ಲ. ಗೌತಮ್ ಗಂಭೀರ್ ಮಾತ್ರ ಇದಕ್ಕೆ ಅಪವಾದ.

ಐಪಿಎಲ್ 2017ರ ಕೊನೆ ಘಟ್ಟದಲ್ಲಿ ನಿಂತು ಮುಂಬರುವ ವರ್ಷದಲ್ಲಿ ಯಾರೆಲ್ಲ ಹಿರಿಯ ಆಟಗಾರರು ವಿದಾಯ ಹೇಳಬಹುದು ಎಂದು ಲೆಕ್ಕ ಹಾಕಿ ಟಾಪ್ 10 ಪಟ್ಟಿ ಮಾಡಲಾಗಿದೆ.

ಕ್ರಿಸ್ ಗೇಲ್

ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 10ರಲ್ಲಿ 9 ಪಂದ್ಯಗಳಿಂದ 200ರನ್ ಮಾತ್ರ ಗಳಿಸಿದ್ದು, ಮುಂದಿನ ಐಪಿಎಲ್ ಗೆ ಆರ್ ಸಿಬಿ ಇವರನ್ನು ಉಳಿಸಿಕೊಳ್ಳುವುದು ಡೌಟ್. ಬೇರೆ ತಂಡಕ್ಕೆ ಸೇರುವುದು ಗೇಲ್ ಅವರಿಗೆ ಬಿಟ್ಟ ವಿಷ್ಯ. ಆದರೆ, ವಯಸ್ಸಿನ(38 ವರ್ಷ ಆಗಲಿದೆ) ಕಾರಣ ಐಪಿಎಲ್ ನಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ.

ಬ್ರೆಂಡನ್ ಮೆಕಲಮ್

ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನ ಚೊಚ್ಚಲ ಟೂರ್ನಮೆಂಟ್ ನಲ್ಲಿ ಕೆಕೆಆರ್ ಪರ ಆಡಿ ತ್ವರಿತಗತಿಯಲ್ಲಿ 158ರನ್ ಗಳಿಸಿ ಐಪಿಎಲ್ ಗೆ ಕಿಚ್ಚು ಹಚ್ಚಿದವರು. ಸದ್ಯ ಗುಜರಾತ್ ಲಯನ್ಸ್ ಪರ ಆಡಿದರೂ ಮುಂದಿನ ಐಪಿಎಲ್ ನಲ್ಲಿ 36 ವರ್ಷ ವಯಸ್ಸಿನಲ್ಲಿ ಹೊಸ ತಂಡ ಅರಿಸಿ ಹೋಗುವ ಸಾಧ್ಯತೆ ಕಡಿಮೆ ಇದೆ. ಕಾಮೆಂಟ್ರಿ ಮಾಡಲು ಈಗಾಗಲೇ ಆಹ್ವಾನ ಸಿಕ್ಕಿದೆ.

ಆಶೀಶ್ ನೆಹ್ರಾ

ಆಶೀಶ್ ನೆಹ್ರಾ

ಟೀಂ ಇಂಡಿಯಾದ ಎಡಗೈ ವೇಗಿ ಆಶೀಶ್ ನೆಹ್ರಾ ಅವರು ಮುಂದಿನ ವರ್ಷಕ್ಕೆ 39ವರ್ಷ ವಯಸ್ಸಿನವರಾಗಲಿದ್ದು, ಈಗಾಗಲೇ ಹಲವಾರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಈ ಬಾರಿ ಹರಾಜಿನಲ್ಲೂ ಯಾರೂ ಖರೀದಿಸಿರಲಿಲ್ಲ.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಇನ್ನೂ ಒಂದೆರಡು ವರ್ಷ ಆಡುವ ಹುಮ್ಮಸ್ಸಿದ್ದರೂ ಬೇಗನೇ ಬಲವಂತವಾಗಿ ಐಪಿಎಲ್ ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂದರೆ ಅದು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಮಾತ್ರ. ಈಗಾಗಲೆ ಹಲವು ಬಾರಿ ಆಡುವ XI ನಿಂದ ಔಟ್ ಆಗಿ, ಪ್ರಮುಖ ಸ್ಪಿನ್ನರ್ ಸ್ಥಾನ ಕಳೆದುಕೊಂಡಿರುವ ಭಜ್ಜಿ, 35 ವರ್ಷ ವಯಸ್ಸಿನಲ್ಲೇ ವಿದಾಯ ಘೋಷಿಸುವ ಒತ್ತಡದಲ್ಲಿದ್ದಾರೆ.

ಶೇನ್ ವಾಟ್ಸನ್

ಶೇನ್ ವಾಟ್ಸನ್

ಶ್ರೇಷ್ಠ ಆಲ್ ರೌಂಡರ್ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಶೇನ್ ವಾಟ್ಸನ್ 102 ಪಂದ್ಯಗಳಿಂದ 2622ರನ್ ಹಾಗೂ 86 ವಿಕೆಟ್ ಗಳಿಸಿದ್ದಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಮುಂದಿನ ಸೀಸನ್ ನಲ್ಲಿ ಹರಾಜಿಗೆ ಬರುವುದು ಡೌಟ್.

ಇಮ್ರಾನ್ ತಾಹೀರ್

ಇಮ್ರಾನ್ ತಾಹೀರ್

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಆದರೆ, 38 ವರ್ಷ ವಯಸ್ಸಿನ ತಾಹೀರ್ ಅವರು ಮುಂದಿನ ಐಪಿಎಲ್ ಆಡುವುದು ಕೊಂಚ ಅನುಮಾನ. ದಕ್ಷಿಣ ಆಫ್ರಿಕಾ ತಂಡದ ಪರ ಮತ್ತೊಂದು ವರ್ಷ ಆಡುವುದು ಅವರ ಆದ್ಯತೆ.

ಜಹೀರ್ ಖಾನ್

ಜಹೀರ್ ಖಾನ್

ಡೆಲ್ಲಿ ತಂಡ ನಾಯಕರಾಗಿ ಐಪಿಎಲ್ 2017ರಲ್ಲಿ ಕಮ್ ಬ್ಯಾಕ್ ಮಾಡಿದ್ದ ಹಿರಿಯ ವೇಗಿ ಜಹೀರ್ ಖಾನ್ ಅವರು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ನಾಯಕರಾಗಿ ಕೂಡಾ ತಂಡವನ್ನು ಮುನ್ನಡೆಸಲಿಲ್ಲ. ಗಾಯದ ಸಮಸ್ಯೆ ಬೇರೆ ಇದೆ. 38ವರ್ಷದ ಜಹೀರ್ ಅವರು ಐಪಿಎಲ್ ವಿದಾಯ ಹೇಳುವುದು ನಿರೀಕ್ಷಿತ.

ಡ್ವಾಯ್ನೆ ಸ್ಮಿತ್

ಡ್ವಾಯ್ನೆ ಸ್ಮಿತ್

ವೆಸ್ಟ್ ಇಂಡೀಸ್ ನ ಆಲ್ ರೌಂಡರ್, ಗುಜರಾತ್ ಲಯನ್ಸ್ ಪರ ಆರಂಭಿಕ ಆಟಗಾರ ಡ್ವಾಯ್ನೆ ಸ್ಮಿತ್ ಅವರು ಲಯ ಕಂಡುಕೊಂಡರೂ ಮುಂದಿನ ವರ್ಷಕ್ಕೆ ಐಪಿಎಲ್ ಗೆ ಬರುವುದು ಅನುಮಾನ. ಕೆರಿಬಿಯನ್ ಲೀಗ್ ನಲ್ಲೇ ಉಳಿಯುವ ನಿರೀಕ್ಷೆಯಿದೆ. 35 ವರ್ಷ ವಯಸ್ಸಿಗೆ ವಿದಾಯ ಹೇಳಲು ಫಾರ್ಮ್ ಕಾರಣವಾಗಬಹುದು.

ಪ್ರವೀಣ್ ತಾಂಬೆ

ಪ್ರವೀಣ್ ತಾಂಬೆ

ಪ್ರವೀಣ್ ತಾಂಬೆ- ಐಪಿಎಲ್ ನ ಹಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಷ್ಟೇ ಬಂತು. ಈ ಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಮುಂದಿನ ಐಪಿಎಲ್ ಹರಾಜಿಗೆ ಲಭ್ಯರಿರುವುದು ಅನುಮಾನ.

ಮಿಚೆಲ್ ಜಾನ್ಸನ್

ಮಿಚೆಲ್ ಜಾನ್ಸನ್

ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಐಪಿಎಲ್ ನಲ್ಲಿ 46 ಪಂದ್ಯಗಳಿಂದ 54 ವಿಕೆಟ್ ಗಳಿಸಿದರೂ ಸಾಧಾರಣ ಎನಿಸುವ ಪ್ರದರ್ಶನ ಮಾತ್ರ ನೀಡಿದ್ದಾರೆ. 36 ವರ್ಷ ವಯಸ್ಸಿನ ಜಾನ್ಸನ್ ರನ್ನು ಮುಂದಿನ ಹರಾಜಿನಲ್ಲಿ ಯಾರಾದರೂ ಖರೀದಿಸಿದರೆ ಆಡುವ ಸಾಧ್ಯತೆಯಿದೆ ಅಷ್ಟೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X