ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್, ದ್ರಾವಿಡ್, ಗಂಗೂಲಿಗೆ ಸಿಗಲಿರುವ ಗೌರವ ಧನವೆಷ್ಟು?

By Mahesh

ಮುಂಬೈ, ನ. 09: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಸೇರಿದಂತೆ 11 ಜನ ಮಾಜಿ ಆಟಗಾರರಿಗೆ ತಲಾ 1.5 ಕೋಟಿ ರು ನಂತೆ ಗೌರವ ಸಂಭಾವನೆ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ.

ಮುಂಬೈನಲ್ಲಿ ಸೋಮವಾರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಚಿನ್,ದ್ರಾವಿಡ್ ಹಾಗೂ ಗಂಗೂಲಿ ಅಲ್ಲದೆ ಮಾಜಿ ಆಟಗಾರರಿಗೆ ಒಂದು ಬಾರಿಗೆ ಈ ಗೌರವ ಸಂಭಾವನೆ ಸಲ್ಲಲಿದೆ.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ದಿಲೀಪ್ ವೆಂಗ್ ಸರ್ಕಾರ್, ಸೈಯದ್ ಕಿರ್ಮಾನಿ, ಎಸ್ ವೆಂಕಟರಾಘವನ್ ಹಾಗೂ ಜಾವಗಲ್ ಶ್ರೀನಾಥ್ ಅವರಿಗೆ ತಲಾ 1.5 ಕೋಟಿ ರು ನೀಡಿ ಗೌರವಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. [ಬಿಸಿಸಿಐ ಆಯ್ಕೆ ಸಮಿತಿಯಿಂದ ರೋಜರ್ ಬಿನ್ನಿ ಔಟ್]

Ganguly and 8 others to receive Rs 1.5 crore each from BCCI

ಮಾಜಿ ಆಟಗಾರರ ವೃತ್ತಿ ಬದುಕಿನ ಮೇಲೆ ಗೌರವ ಧನದ ಮೊತ್ತ ಹೆಚ್ಚು ಕಡಿಮೆ ಮಾಡಲಾಗಿದೆ. ಒಟ್ಟಾರೆ 200ಕ್ಕೂ ಅಧಿಕ ಕ್ರಿಕೆಟರ್ಸ್ ಗಳಿಗೆ ಈ ಗೌರವ ಸಲ್ಲಲಿದೆ.

1 ಕೋಟಿ ರು ಪಡೆಯಲಿರುವ ಮಾಜಿ ಕ್ರಿಕೆಟರ್ಸ್ : ಜಿಆರ್ ವಿಶ್ವನಾಥ್, ನವಜ್ಯೋತ್ ಸಿಂಗ್ ಸಿಧು, ಕ್ರಿಸ್ ಶ್ರೀಕಾಂತ್, ಬಿಕೆ ವೆಂಕಟೇಶ್ ಪ್ರಸಾದ್, ಕಿರಣ್ ಮೋರೆ, ನಯನ್ ಮೋಂಗಿಯಾ ಹಾಗೂ ಮೊಹಿಂದರ್ ಅಮರನಾಥ್. ಜೊತೆಗೆ 37ಕ್ಕೂ ಅಧಿಕ ದಿವಂಗತ ಕ್ರಿಕೆಟರ್ಸ್. [ಐಸಿಸಿ ಚೇರ್ಮನ್ ಹುದ್ದೆಯಿಂದ ಎನ್ ಶ್ರೀನಿವಾಸನ್ ಗೆ ಕೊಕ್]

100ಕ್ಕಿಂತ ಅಧಿಕ ಟೆಸ್ಟ್ ಪಂದ್ಯವನ್ನಾಡಿದ ಕ್ರಿಕೆಟರ್ಸ್ ಗೆ 1.5 ಕೋಟಿ ರು ಹಾಗೂ 75 ರಿಂದ 100 ರ ತನಕ ಪಂದ್ಯವನ್ನಾಡಿದ ಕ್ರಿಕೆಟರ್ಸ್ ಗೆ 1 ಕೋಟಿ ರು ಎಂದು ಬಿಸಿಸಿಐ ನಿಗದಿ ಪಡಿಸಿದೆ.

ಯಾರಿಗೆ ಎಷ್ಟು ಗೌರವ ಧನ?

* 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಆಡಿದವರಿಗೆ : ತಲಾ 1.5 ಕೋಟಿ : 11 ಜನಕ್ಕೆ ಸಿಗಲಿದೆ.
* 75 ರಿಂದ 100 ಟೆಸ್ಟ್ ಆಡಿದವರಿಗೆ : ತಲಾ 1 ಕೋಟಿ ರು: 7 ಜನಕ್ಕೆ ಸಿಗಲಿದೆ.
* 50 ರಿಂದ 74 ಟೆಸ್ಟ್ ಆಡಿದವರಿಗೆ : ತಲಾ 75 ಲಕ್ಷ ರು: 13 ಜನಕ್ಕೆ ಸಿಗಲಿದೆ.
* 25 ರಿಂದ 49 ಟೆಸ್ಟ್ ಆಡಿದವರಿಗೆ : ತಲಾ 60 ಲಕ್ಷ ರು: 27 ಜನಕ್ಕೆ ಸಿಗಲಿದೆ.
* 10 ರಿಂದ 24 ಟೆಸ್ಟ್ ಆಡಿದವರಿಗೆ : ತಲಾ 50 ಲಕ್ಷ ರು: 37 ಜನಕ್ಕೆ ಸಿಗಲಿದೆ.
* 1 ರಿಂದ 9 ಟೆಸ್ಟ್ ಆಡಿದವರಿಗೆ : ತಲಾ 35 ಲಕ್ಷ ರು: 37 ಜನಕ್ಕೆ ಸಿಗಲಿದೆ. ಸಿಗಲಿದೆ.
* 100 ಅಥವಾ ಅದಕ್ಕಿಂತ ಹೆಚ್ಚಿನ ಪ್ರಥಮ ದರ್ಜೆ ಪಂದ್ಯವಾಡಿದವರಿಗೆ(2003-04 ತನಕ) : ತಲಾ 30 ಲಕ್ಷ ರು : 24 ಜನಕ್ಕೆ ಸಿಗಲಿದೆ.

* 75 ರಿಂದ 99 ಪ್ರಥಮ ದರ್ಜೆ ಪಂದ್ಯವಾಡಿದವರಿಗೆ (2003-04 ತನಕ) : ತಲಾ 25 ಲಕ್ಷ ರು : 81 ಜನಕ್ಕೆ ಸಿಗಲಿದೆ.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X