ಐಸಿಸಿ ವಿಶ್ವಕಪ್ ಶ್ರೇಷ್ಠ ತಂಡಕ್ಕೆ ಮಿಥಾಲಿ ರಾಜ್ ನಾಯಕಿ

Posted By:
Subscribe to Oneindia Kannada

ಲಂಡನ್, ಜುಲೈ 24: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಮಹಿಳಾ ವಿಶ್ವಕಪ್ 2017ರ ತಂಡವನ್ನು ಪ್ರಕಟಿಸಲಾಗಿದೆ. ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ಕ್ಯಾಪ್ಟನ್‌ ಆಗಿ ಆಯ್ಕೆಗೊಂಡಿದ್ದಾರೆ.

ಭಾರತೀಯ ಮಹಿಳಾ ಆಟಗಾರರಾದ ಹರ್ಮನ್‌ ಪ್ರೀತ್‌ ಕೌರ್‌ ಹಾಗೂ ದೀಪ್ತಿ ಶರ್ಮಾ ಸಹ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಮಿಥಾಲಿ ಅವರು ಮಹಿಳಾ ಕ್ರಿಕೆಟ್ ಲೋಕದ ಅನುಭವಿ ಆಟಗಾರ್ತಿಯಾಗಿದ್ದಾರೆ.

ಯುವ ಕ್ರಿಕೆಟರ್ ಗಳಿಂದ ಕೂಡಿರುವ ಮಹಿಳಾ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಈ ಬಾರಿಯ ಫೈನಲ್ ತನಕ ತಂಡವನ್ನು ತಂದರು. ನ್ಯೂಜಿಲೆಂಡ್ ವಿರುದ್ಧ ಶತಕ ಸೇರಿದಂತೆ ವಿಶ್ವಕಪ್ ನಲ್ಲಿ 409 ರನ್ ಕಲೆ ಹಾಕಿದರು.

Team of ICC Women's World Cup 2017 announced; Mithali Raj captain

ಐಸಿಸಿ ತಂಡದಲ್ಲಿ ಇಂಗ್ಲೆಂಡಿನಿಂದ ಮೂವರು, ದಕ್ಷಿಣ ಆಫ್ತಿಕಾದಿಂದ ಮೂವರು, ಆಸ್ಟ್ರೇಲಿಯಾದ ಆಲ್ ರೌಂಡರ್ ಸೇರಿದ್ದಾರೆ.

England Beat India By 9 Runs To Win ICC Women's World Cup 2017 | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The International Cricket Council (ICC) today (July 24) announced the Team of the ICC Women's World Cup 2017 with India's Mithali Raj as its captain
Please Wait while comments are loading...