ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ಅಬ್ಬರಿಸಿದರೂ ಅವರ ತಂಡ ಗೆಲ್ಲಲಾಗಿಲ್ಲ

By Mahesh

ಲಂಡನ್, ಜೂ.01: ವೆಸ್ಟ್ ಇಂಡೀಸ್ ನ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಗೇ ಯಾಕೋ ಲಕ್ಕಿಲ್ಲ, ಭರ್ಜರಿ ಆಟ ಪ್ರದರ್ಶಿಸಿದರೂ ಅವರ ತಂಡ ಗೆಲ್ಲುತ್ತಿಲ್ಲ, ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಇಂಗ್ಲೀಷ್ ಕೌಂಟಿಯಲ್ಲಿ ಗೇಲ್ ಅಬ್ಬರಿಸಿದರೂ ಅವರ ತಂಡ ಗೆಲ್ಲಲಾಗಿಲ್ಲ.

ಭಾನುವಾರ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರು ಅಜೇಯ 151ರನ್ ಚೆಚ್ಚಿದ್ದಾರೆ. ನ್ಯಾಟ್ ವೆಸ್ಟ್ ಟಿ20 ಕ್ರಿಕೆಟ್ ಪಂದ್ಯವಾಳಿಯಲ್ಲಿ ಸಮರ್ ಸೆಟ್ ಪರ ಬ್ಯಾಟ್ ಬೀಸಿದ ಗೇಲ್ 15 ಸಿಕ್ಸರ್ ಹಾಗೂ 10 ಬೌಂಡರಿ ಬಾರಿಸಿದರು. 64 ಎಸೆತಗಳಲ್ಲಿ 151ರನ್ ಕಲೆ ಹಾಕಿ ಔಟಾಗದೆ ಉಳಿದರು. ಕೊನೆ ಓವರ್ ತನಕ ರನ್ ಚೇಸ್ ಜಾರಿಯಲ್ಲಿತ್ತು. ಅಂತಿಮವಾಗಿ ಕೆಂಟ್ ತಂಡದ ಬೌಲರ್ ಗಳು ಸಮರ್ ಸೆಟ್ ನ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ಸಫಲರಾದರು.

T20 Blast: Chris Gayle smashes 151* but his team loses

228ರನ್ ಗುರಿ ಬೆನ್ನು ಹತ್ತಿದ ಸಮ್ಮರ್ ಸೆಟ್ ತಂಡ 3 ರನ್ ಗಳ ಅಂತರದ ಸೋಲು ಕಂಡಿದೆ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೆಂಟ್ ಪರ ಸ್ಯಾಮ್ ನಾರ್ಥ್ ಈಸ್ಟ್ 58 ಎಸೆತಗಳಲ್ಲಿ 114 (16X4, 2x6)ರನ್ ಚೆಚ್ಚಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 227/7ಕ್ಕೇರಿಸಿದರು.

ಇದಕ್ಕೆ ಉತ್ತರವಾಗಿ ಸಮ್ಮರ್ ಸೆಟ್ 3.3 ಓವರ್ ಗಳಲ್ಲಿ 22/2 ಸ್ಕೋರ್ ಮಾಡಿ ಆತಂಕದ ಸ್ಥಿತಿಯಲ್ಲಿತ್ತು. ನಂತರ ಗೇಲ್ ಆರ್ಭಟದಿಂದಾಗಿ ಗೆಲುವಿನ ಹೊಸ್ತಿಲಿಗೆ ಬಂದು ಮುಗ್ಗರಿಸಿದೆ.

ಕೊನೆ ಓವರ್ ನಲ್ಲಿ ಗೆಲ್ಲಲು ಸಮರ್ ಸೆಟ್ ಗೆ 17ರನ್ ಬೇಕಿತ್ತು. ಮೊದಲ ಎರಡು ಎಸೆತಗಳಲ್ಲಿ ರನ್ ಬರಲಿಲ್ಲ, ಗೇಲ್ ಕೂಡಾ ಆಫ್ ಸ್ಟ್ರೈಕ್ ಇದ್ದರು. ಕೊನೆ ನಾಲ್ಕು ಎಸೆತಗಳಲ್ಲಿ 17ರನ್ ಹೊಡೆಯಬೇಕಿತ್ತು. ಗೇಲ್ ಅವರು ಹಾಗೂ ಹೀಗೂ 14ರನ್ ಗಳಿಸಿದರು ಒಂದು ಹೊಡೆತ ಮಿಸ್ ಮಾಡಿಕೊಂಡರು. ಕೆಂಟ್ ಪರ ಬೌಲರ್ ಮಿಚೆಲ್ ಕ್ಲೇಡನ್ ಮಿಂಚಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X