ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಟಕ್ಕೆ ಚೆನ್ನೈ ಇಲ್ಲ ; ಎತ್ತ ಕಡೆ ಧೋನಿ ಪಯಣ?

ಬೆಂಗಳೂರು, ಅಕ್ಟೋಬರ್. 24: ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಸಿಲುಕಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ನಿಷೇಧ ಹೇರಲಾಗಿದ್ದು ಈ ಬಾರಿಯ ಐಪಿಎಲ್ ನಲ್ಲಿ ಅವುಗಳ ಬದಲಾಗಿ ಎರಡು ಹೊಸ ತಂಡಗಳು ಆಡುವುದು ಪಕ್ಕಾ ಆಗಿದೆ.

ಇದರೊಂದಿಗೆ ಸ್ಟಾರ್ ಆಟಗಾರರಾದ ಎಂ ಎಸ್ ಧೋನಿ, ಸುರೇಶ್ ರೈನಾ ಯಾವ ತಂಡದ ಪರವಾಗಿ ಈ ಬಾರಿ ಬ್ಯಾಟ್ ಬೀಸಲಿದ್ದಾರೆ ಎಂಬ ಪ್ರಶ್ನೆ ಉದ್ಭವಾಗಿತ್ತು. ಆದರೆ ಭಾರತ ತಂಡದ ನಾಯಕ ಎಂ ಎಸ್ ಧೋನಿ ಹೊಸ ತಂಡವೊಂದಕ್ಕೆ ಸೇರುವುದು ಖಾತ್ರಿಯಾಗಿದೆ. ಅಲ್ಲದೇ ಹೊಸ ತಂಡವನ್ನು ಅವರೇ ಮುನ್ನಡೆಸಲಿದ್ದಾರೆ.[ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪೇನು?]

ಸದ್ಯಕ್ಕೆ ಹೊಸ ಫ್ರಾಂಚೈಸಿಗಳ ಹೆಸರನ್ನು ಇನ್ನೂ ಗುರುತಿಸಲಾಗಿಲ್ಲ. ಆದರೆ ಎರಡೂ ಹೊಸ ಫ್ರಾಂಚೈಸಿಗಳಿಗೆ ಧೋನಿ ಅವರ ಬ್ರಾಂಡ್ ಮೌಲ್ಯ ಮತ್ತು ಪಂದ್ಯ ಗೆಲ್ಲುವ ಸಾಮರ್ಥ್ಯಗಳಿಂದಾಗಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಧೋನಿ ಎರಡುವರ್ಷಗಳ ಕಾಲ ಆಡಿದರೆ, ಸಿಎಸ್‌ಕೆ ಅವರನ್ನು ವಾಪಸು ಕರೆಸಿಕೊಳ್ಳುವ ಆಯ್ಕೆ ಇದ್ದೇ ಇದೆ.

ಧೋನಿ-ಶ್ರೀನಿವಾಸನ್ ಭೇಟಿ

ಧೋನಿ-ಶ್ರೀನಿವಾಸನ್ ಭೇಟಿ

ಈ ನಡುವೆ ಎಂಎಸ್ ಧೋನಿ ಮತ್ತು ಸುಪ್ರೀಂ ಕೋರ್ಟ್ ನಿಂದ ಛಿಮಾರಿಗೆ ಗುರಿಯಾಗಿರುವ ಎನ್ ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಬಗ್ಗೆ ವಲಯದಲ್ಲಿ ಟೀಕೆಗಳು ಕೇಳಿ ಬಂದಿವೆ.

ಚೆನ್ನೈ ತಂಡದ ಪ್ರಮುಖರು

ಚೆನ್ನೈ ತಂಡದ ಪ್ರಮುಖರು

ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಎಂಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಮೆಕಲಮ್, ಸ್ಮಿತ್ ಈ ಬಾರಿ ಬೇರೆ ಬೇರೆ ತಂಡದ ಪಾಲಾಗಲಿದ್ದಾರೆ. ಆರಂಭದಿಂದಲೂ ಚೆನ್ನೈ ನ್ನು ಮುನ್ನಡೆಸಿಕೊಂಡು ಬಂದಿದ್ದ ಧೋನಿಗೆ ಈ ಬಾರಿ ಹೊಸ ತಂಡ ಸೇರುವುದು ಅನಿವಾರ್ಯ.

 ರಾಜಸ್ಥಾನದಲ್ಲಿ ಯಾರ್ಯಾರು?

ರಾಜಸ್ಥಾನದಲ್ಲಿ ಯಾರ್ಯಾರು?

ಶೇನ್ ವಾಟ್ಸನ್, ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ , ರಜತ್ ಭಾಟಿಯಾ ಸಹ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡತಿ ಶಿಲ್ಪಾ ಶೇಟ್ಟಿಯ ಗ್ಲಾಮರ್ ಸಹ ಈ ಬಾರಿಯ ಐಪಿಎಲ್ ನಲ್ಲಿ ಕಾಣಸಿಗುವುದು ಅನುಮಾನ.

ಯಾಕೆ ಹೀಗಾಯ್ತು?

ಯಾಕೆ ಹೀಗಾಯ್ತು?

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ತನ್ನ ಅಂತಿಮ ತೀರ್ಪು ನೀಡಿ ಎರಡು ತಂಡಗಳಿಗೆ ಕಳೆದ ಜುಲೈ ತಿಂಗಳಲ್ಲಿ ಐಪಿಎಲ್ ನಿಂದ ನಿಷೇಧ ಹೇರಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X