ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುರೇಶ್ ರೈನಾ 10 ವರ್ಷದ ಸಂಭ್ರಮ, ಟ್ವೀಟ್ ಚಿಟ್ ಚಾಟ್

By Mahesh

ಬೆಂಗಳೂರು, ಜುಲೈ 31: ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಬಲ ತಂದ ಎಡಗೈ ಆಟಗಾರ ಸುರೇಶ್ ರೈನಾ ಅವರು ತಮ್ಮ ವೃತ್ತಿ ಬದುಕಿನ 10 ವರ್ಷಗಳನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳೊಡನೆ ಟ್ವಿಟ್ಟರ್ ಮೂಲಕ ಚಿಟ್ ಚಾಟ್ ನಡೆಸಿದ್ದಾರೆ.

ಸುರೇಶ್ ರೈನಾ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟು ಗುರುವಾರ(ಜುಲೈ30)ಕ್ಕೆ 10 ವರ್ಷಗಳು ಪೂರೈಸಿವೆ. ಉತ್ತರಪ್ರದೇಶ ಮೂಲದ ಎಡಗೈ ಬ್ಯಾಟ್ಸ್ ಮನ್ ರೈನಾ ಅವರು 2005ರ ಜುಲೈ 30 ರಂದು ಡಂಬುಲ್ಲಾದಲ್ಲಿ ಶ್ರೀಲಂಕಾದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟರು. [ಐಪಿಎಲ್ 8: ಎಲೈಟ್ ಕ್ಲಬ್ ನಲ್ಲಿ ರೈನಾ ಟಾಪ್]

28ರ ಹರೆಯದ ರೈನಾ ಚೊಚ್ಚಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದು ವಿಶೇಷ. ಅದರೆ, ಸತತ ಪರಿಶ್ರಮದ ಮೂಲಕ ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ಹಾಗೂ ಟಿ20 ತಂಡಗಳ ನಂಬುಗೆಯ ಆಟಗಾರ ಎನಿಸಿಕೊಂಡಿದ್ದಾರೆ.[ಚಿತ್ರಗಳು: ಸುರೇಶ್ ರೈನಾ ವೆಡ್ಸ್ ಪ್ರಿಯಾಂಕಾ ]

ಆದರೆ, ದಶಕದ ಸಂಭ್ರಮದ ಬಗ್ಗೆ ಅಭಿಮಾನಿಗಳ ಟ್ವೀಟ್ಸ್ ಗೆ ಪ್ರತಿಕ್ರಿಯಿಸುತ್ತಾ, ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮರಳುವುದು ನನ್ನ ಉದ್ದೇಶ ಇದಕ್ಕಾಗಿ ಹಾತೊರೆಯುತ್ತಿದ್ದೇನೆ ಎಂದು ಮನದಾಳದ ಮಾತುಗಳನ್ನಾಡಿದ್ದಾರೆ. ರೈನಾ ಅವರ ಟ್ವೀಟ್ಸ್ ಸಂಗ್ರಹ ಇಲ್ಲಿದೆ...

ಏಕದಿನ ಪಂದ್ಯಗಳ ಸರದಾರ

ಏಕದಿನ ಪಂದ್ಯಗಳ ಸರದಾರ

ಸುರೇಶ್ ರೈನಾ ಅವರು 218 ಏಕದಿನ ಪಂದ್ಯಗಳನ್ನು ಆಡಿ ಐದು ಶತಕ ಹಾಗೂ 35 ಅರ್ಧಶತಕಗಳ ಸಹಿತ 5,500 ರನ್ ಗಳಿಸಿದ್ದಾರೆ.

10 ವರ್ಷದ ಸಂಭ್ರಮಾಚರಣೆಯಲ್ಲಿ ರೈನಾ

10 ವರ್ಷದ ಸಂಭ್ರಮಾಚರಣೆಯಲ್ಲಿ ರೈನಾ ಟ್ವೀಟ್ ಮಾಡಿದ್ದು ಹೀಗೆ

 ಶತಕ ಸಿಡಿಸಿರುವ ಭಾರತದ ಏಕೈಕ ಬ್ಯಾಟ್ಸ್ ಮನ್

ಶತಕ ಸಿಡಿಸಿರುವ ಭಾರತದ ಏಕೈಕ ಬ್ಯಾಟ್ಸ್ ಮನ್

ಸುರೇಶ್ ರೈನಾ ಮೂರು ಮಾದರಿಯ ಕ್ರಿಕೆಟ್‌ಗಳಾದ ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್ ನಲ್ಲಿ ಶತಕ ಸಿಡಿಸಿರುವ ಭಾರತದ ಏಕೈಕ ಬ್ಯಾಟ್ಸ್ ಮನ್.

ಅಭಿಮಾನಿಗಳ ಜೊತೆ ಮಾತನಾಡಿದ ಖುಷಿ

ಅಭಿಮಾನಿಗಳ ಜೊತೆ ಮಾತನಾಡಿದ ಖುಷಿ ಹಂಚಿಕೊಂಡ ರೈನಾ, ಹೆಚ್ಚು ಮಾತನಾಡಲು ಆಗಲಿಲ್ಲ, ಕ್ಷಮಿಸಿ, ಮತ್ತೊಮ್ಮೆ ಸಿಗೋಣ ಎಂದಿದ್ದಾರೆ.

ಅಭಿಮಾನಿಗಳ ಕೋರಿಕೆ ಮೇರೆಗೆ ತಮಿಳು ಪದ

ಅಭಿಮಾನಿಗಳ ಕೋರಿಕೆ ಮೇರೆಗೆ ತಮಿಳು ಪದ ಬಳಸಿದ ರೈನಾ.

ಎರಡು ವಿಶ್ವಕಪ್ ನಲ್ಲಿ ಆಡಿರುವ ರೈನಾ

ಎರಡು ವಿಶ್ವಕಪ್ ನಲ್ಲಿ ಆಡಿರುವ ರೈನಾ

2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಈ ವರ್ಷಾರಂಭದಲ್ಲಿ ನಡೆದ ವಿಶ್ವಕಪ್‌ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು.

ಟೆಸ್ಟ್ ತಂಡಕ್ಕೆ ಸೇರ್ಪಡೆ ಆಗುವ ಕನಸಿದೆ

ಟೆಸ್ಟ್ ತಂಡಕ್ಕೆ ಸೇರ್ಪಡೆ ಆಗುವ ಕನಸಿದೆ, ಯಾವಾಗ ನನಸಾಗುವುದೋ ಕಾಯುತ್ತಿದ್ದೇನೆ ಎಂದ ರೈನಾ.

ನನ್ನ ಏಳಿಗೆಗೆ ನನ್ನ ಕುಟುಂಬ ಸೋದರ ಕಾರಣ

ನನ್ನ ಏಳಿಗೆಗೆ ನನ್ನ ಕುಟುಂಬ ಸೋದರ ದಿನೇಶ್ ಕಾರಣ ಎಂದ ಸುರೇಶ್ ರೈನಾ.

ವಿದೇಶಗಳಲ್ಲಿ ಸೆಂಚುರಿ ಬಾರಿಸಿದ ರೈನಾ

ವಿದೇಶಗಳಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿದ ರೈನಾ ಬಗ್ಗೆ ಅಭಿಮಾನಿಗಳಿಂದ ಟ್ವೀಟ್.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X