ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೈನಾ ಶತಕ, ಬಾಂಗ್ಲಾ 'ಎ' ವಿರುದ್ಧ ಸರಣಿ ಜಯ

By Mahesh

ಬೆಂಗಳೂರು, ಸೆ. 20: ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲು ಸಜ್ಜಾಗುತ್ತ್ತಿರುವ ಸುರೇಶ್ ರೈನಾ ಅವರು ಭಾರತ 'ಎ' ಪರ ಆಡಿ ಭರ್ಜರಿ ಶತಕ ಬಾರಿಸಿ ಬಾಂಗ್ಲಾದೇಶ 'ಎ' ವಿರುದ್ಧ ಸರಣಿ ಜಯ ಸಾಧಿಸಲು ನೆರವಾದರು. ಬಾಂಗ್ಲಾ ಎ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೈನಾ ಹಾಗೂ ಸಂಜು ಸಾಮ್ಸನ್ ಉತ್ತಮ ಆಟದ ನೆರವಿನಿಂದ ಭಾರತ 'ಎ' ತಂಡ ಗೆಲುವಿನ ನಗೆ ಬೀರಿತು.

ಸುರೇಶ್ ರೈನಾ 104 ರನ್ (94 ಎಸೆತ, 9‍X4, 1X6) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ 90 ರನ್( 99 ಎಸೆತ, 10X4, 1X6) ನೆರವಿನಿಂದ 50 ಓವರ್ ಗಳಲ್ಲಿ 297 ರನ್ ಗಳಿಸಿತು. ಮಳೆಯಿಂದ ಆಟಕ್ಕೆ ಆಗಾಗ ತೊಂದರೆಯಾಗುತ್ತಲ್ಲೇ ಇತ್ತು. ಅದರೆ, 32 ಓವರ್ ಗಳಲ್ಲಿ 141 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ ಗೆಲ್ಲುವ ಲಕ್ಷಣಗಳು ಡಕ್ ವರ್ತ್ ಲೂಯಿಸ್ ವ್ಯವಸ್ಥೆಯಿಂದಲೂ ಕಾಣಲಿಲ್ಲ.[ಭಾರತ 'ಎ' ತಂಡಕ್ಕೆ 'ಗುರು' ಬಲ ನೆಲಕಚ್ಚಿದ ಬಾಂಗ್ಲಾ]

Suresh Raina's century seals series for India A

ಕೊನೆಗೆ ರಾಹುಲ್ ದ್ರಾವಿಡ್ ಕೋಚ್ ಮಾಡಿರುವ ಉನ್ಮುಕ್ತ್ ಚಂದ್ ನಾಯಕತ್ವದ ಭಾರತ 'ಎ' ತಂಡ 75ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತು. ಭಾರತ 'ಎ' ಪರ ಎಡಗೈ ವೇಗಿ ಎಸ್ ಅರವಿಂದ್ ಹಾಗೂ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ತಲಾ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. [ಪ್ರವಾಸಿ ಬಾಂಗ್ಲಾದೇಶ 'ಎ' ಸರಣಿ ವೇಳಾಪಟ್ಟಿ]

ಸ್ಕೋರ್ ಕಾರ್ಡ್

ಭಾರತ: 6 ವಿಕೆಟ್​ಗೆ 297 (ರೈನಾ 104, ಸಂಜು ಸ್ಯಾಮ್ಸನ್ 90, ಉನ್ಮುಕ್ತ್ 41, ಶಫಿಯುಲ್ 56ಕ್ಕೆ 2)

ಬಾಂಗ್ಲಾದೇಶ: 32 ಓವರ್​ಗಳಲ್ಲಿ 6 ವಿಕೆಟ್​ಗೆ 141 (ಶಬ್ಬೀರ್ 41*, ಮಾಮಿನುಲ್ 37, ಅರವಿಂದ್ 14ಕ್ಕೆ 2, ಕುಲ್​ದೀಪ್ 29ಕ್ಕೆ2), ಪಂದ್ಯಶ್ರೇಷ್ಠ: ಸುರೇಶ್ ರೈನಾ, ಸರಣಿಶ್ರೇಷ್ಠ: ನಾಸೀರ್ ಹುಸೇನ್. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X