ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಸೂರಲ್ಲಿ ಬಾಂಗ್ಲಾದೇಶ 'ಎ' ಬಗ್ಗು ಬಡಿದ ಕರ್ನಾಟಕ

By Mahesh

ಮೈಸೂರು, ಸೆ.25: ಮೈಸೂರು ಮೂಲದ ಕರ್ನಾಟಕದ ಎಡಗೈ ಸ್ಪಿನ್ನರ್ ಜಗದೀಶ್ ಸುಚಿತ್ ಅವರ ಮಾರಕ ಹಾಗೂ ನಾಯಕ ಸಿಎಂ ಗೌತಮ್ ಅವರ ಆಕರ್ಷಕ ಆಟದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ 'ಎ' ವಿರುದ್ಧ ಕರ್ನಾಟಕ ಅರ್ಹ ಜಯ ದಾಖಲಿಸಿದೆ.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್) ಮೈದಾನದಲ್ಲಿ 3ನೇ ಹಾಗೂ ಅಂತಿಮ ದಿನ ಗೆಲುವಿಗೆ 181 ರನ್ ಸವಾಲು ಪಡೆದ ಆತಿಥೇಯ ಕರ್ನಾಟಕ ತಂಡ, 40.5 ಓವರ್​ಗಳಲ್ಲಿ 6 ವಿಕೆಟ್​ಗೆ 185 ರನ್​ಗಳಿಸಿ ಜಯ ಗಳಿಸಿತು. ಈ ಜಯದ ಮೂಲಕ ಅಕ್ಟೋಬರ್ 1 ರಿಂದ ಅರಂಭವಾಗಲಿರುವ ಈ ಬಾರಿಯ ರಣಜಿ ಋತುವಿಗೆ ಉತ್ತಮ ಅಭ್ಯಾಸವನ್ನು ಕರ್ನಾಟಕ ತಂಡ ಪಡೆದುಕೊಂಡಿತು.

ಪ್ರವಾಸಿ ಬಾಂಗ್ಲಾದೇಶ ಎ ವಿರುದ್ಧ ನಡೆದ ಮೂರು ದಿನಗಳ ಪಂದ್ಯದಲ್ಲಿ ಸ್ಪಿನ್ನರ್ ಸುಚಿತ್ 60ಕ್ಕೆ 6 ವಿಕೆಟ್ ಪಡೆದರೆ, ಗೌತಮ್ 49 ರನ್ (35 ಎಸೆತ, 10‍X4) ಗಳಿಸಿ ಜಯಕ್ಕೆ ತಮ್ಮ ಕೊಡುಗೆ ನೀಡಿದರು.

Suchith shines as Karnataka beat Bangladesh A by 4 wickets

ಬಾಂಗ್ಲಾ ಮೊದಲ ಇನಿಂಗ್ಸ್ 158 ರನ್​ಗಳಿಸಿದರೆ, ಪ್ರತಿಯಾಗಿ ಕರ್ನಾಟಕ 287ರನ್ ಪೇರಿಸುವ ಮೂಲಕ 129ರನ್ ಮುನ್ನಡೆ ಗಳಿಸಿತ್ತು. ಗುರುವಾರ ಅಂತಿಮ ದಿನದಂದು 3 ವಿಕೆಟ್​ಗೆ 188 ರನ್​ಗಳಿಂದ ಆಟ ಆರಂಭಿಸಿದ ಪ್ರವಾಸಿ ಬಾಂಗ್ಲಾ, 309 ರನ್​ಗೆ ಎರಡನೇ ಇನಿಂಗ್ಸ್ ಮುಗಿಸಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ಆರ್. ಸಮರ್ಥ್ (1) ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತು. ಇದರ ಬೆನ್ನಲ್ಲೆ ರಾಬಿನ್ ಉತ್ತಪ್ಪ (3) ಕೂಡ ನಿರಾಸೆ ಮೂಡಿಸಿದರು.. ಮಯಾಂಕ್ ಅಗರ್ವಾಲ್ (23) ಹಾಗೂ ನಾಯಕ ಸಿ.ಎಂ. ಗೌತಮ್ ಮೂರನೇ ವಿಕೆಟ್​ಗೆ 60 ರನ್ ಪೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಅಭಿಷೇಕ್ ರೆಡ್ಡಿ 36 ರನ್ ಶಿಶಿರ್ ಭವಾನಿ 24 ರನ್ ಹಾಗೂ ಶ್ರೇಯಸ್ ಗೋಪಾಲ್ ಅಜೇಯ 40 ರನ್ ಗಳಿಸಿ ಜಯಕ್ಕೆ ಕಾರಣರಾದರು.

ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಾದ ಶಿಶಿರ್ ಭವಾನೆ, ಜೆ ಸುಚಿತ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಆಟವನ್ನು ನಾಯಕ ಗೌತಮ್ ಹೊಗಳಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X