ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

199 ಕ್ಕೆ ಔಟ್: ದ್ವಿಶತಕ ವಂಚಿತರ ಪಟ್ಟಿ ಸೇರಿದ ಸ್ಟೀವನ್ ಸ್ಮಿತ್

ಕಿಂಗ್ ಸ್ಟನ್ (ಜಮೈಕಾ), ಜೂ. 13: ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ 199 ರನ್ ಗೆ ವಿಕೆಟ್ ಒಪ್ಪಿಸಿದ 8 ನೇ ಆಟಗಾರ ಎಂಬ ಹೆಸರಿನೊಂದಿಗೆ ದ್ವಿಶತಕ ವಂಚಿತರ ಪಟ್ಟಿ ಸೇರಿಕೊಂಡಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ 199 ಗೆ ಔಟ್ ಆಗಿ ಒಂದು ರನ್ ನಿಂದ ದ್ವಿಶತಕ ತಪ್ಪಿಸಿಕೊಂಡವರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.

361 ಎಸೆತ ಎದುರಿಸಿ 199 ರನ್ ಗಳಿಸಿದ್ದ ಸ್ಮಿತ್ ಜೇರ್ಮ್ ಟೇಲರ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದರು. ಫಲಿತಾಂಶವನ್ನು ಮರು ಪ್ರಶ್ನೆ ಮಾಡಲಾಯಿತಾದರೂ ಫೀಲ್ಡ್ ಅಂಪೈರ್ ತೀರ್ಮಾನ ಸರಿಯಾಗಿದೆ ಎಂದು ನಿರ್ಧಾರ ಬಂದಿದ್ದರಿಂದ ಸ್ಮಿತ್ ಫೆವಿಲಿಯನ್ ಸೇರಿಕೊಳ್ಳಬೇಕಾಯಿತು. [ಭಾರತ-ಬಾಂಗ್ಲಾ ಪಂದ್ಯ ಏನಾಯಿತು?]

cricket


ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ ಒಟ್ಟು 2,166 ಟೆಸ್ಟ್ ಪಂದ್ಯಗಳು ನಡೆದಿವೆ. ಆದರೆ 199 ರನ್ ಗೆ ಔಟಾದ ಪ್ರಕರಣ ಇದು ಎಂಟನೆಯದ್ದು. 1984 ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಮುದಾಸಿರ್ ನಝರ್ 199 ಕ್ಕೆ ವಿಕೆಟ್ ಒಪ್ಪಿಸಿ ಹೊಸ ಬಗೆಯ ಬೇಡದ ದಾಖಲೆಗೆ ನಾಂದಿ ಹಾಡಿದ್ದರು.[ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿಯಲ್ಲಿ ಧೋನಿ]

ಟೆಸ್ಟ್ ಕ್ರಿಕೆಟ್ ನಲ್ಲಿ 199 ಕ್ಕೆ ವಿಕೆಟ್ ಒಪ್ಪಿಸಿದ ಆಟಗಾರರ ಪಟ್ಟಿ
1. ಮುದಾಸಿರ್ ನಝರ್(ಪಾಕಿಸ್ತಾನ, ಭಾರತದ ವಿರುದ್ಧ, 1984)
2. ಮೊಹಮದ್ ಅಜರುದ್ದೀನ್(ಭಾರತ, ಶ್ರೀಲಂಕಾ ವಿರುದ್ಧ, 1986)
3. ಮ್ಯಾಥ್ಯೂ ಇಲಿಯಟ್(ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ, 1997)
4. ಸನತ್ ಜಯಸೂರ್ಯ( ಶ್ರೀಲಂಕಾ, ಭಾರತದ ವಿರುದ್ಧ, ಕೊಲಂಬೋ, 1997)
5. ಸ್ಟಿವ್ ವಾ ( ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧ, 1999)
6. ಯೂನಿಸ್ ಖಾನ್ (ಪಾಕಿಸ್ತಾನ, ಭಾರತದ ವಿರುದ್ಧ, 2006)
7. ಇಯಾನ್ ಬೆಲ್ (ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ, 2008)
8. ಸ್ಟಿವನ್ ಸ್ಮಿತ್ (ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧ, 2015)(ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X