ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಸೀಸ್ ತಂಡಕ್ಕೆ ಸಲಹೆಗಾರನಾದ ಮೊದಲ ಭಾರತೀಯ ಎಂಬ ಹೆಮ್ಮೆ'

By Mahesh

ಚೆನ್ನೈ, ಡಿ.16: ಭಾರತದಲ್ಲಿ 2016ರಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ-20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಪಿನ್ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟರ್ ಶ್ರೀಧರನ್ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೀರಾಮ್, ಇಂಥ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಮ್ಮೆಯಿದೆ ಹಾಗೂ ಇದು ದೊಡ್ಡ ಸವಾಲಾಗಿದೆ ಎಂದಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರ ಮೈಕ ಹಸ್ಸಿ ಅವರು ತಮಿಳುನಾಡಿನ ಆಟಗಾರರ ಜೊತೆ ಒಡನಾಟ ಹೊಂದಿದ್ದರು. ಮುಖ್ಯವಾಗಿ ಸ್ಪಿನ್ನರ್ ಗಳ ಜೊತೆ ಹೆಚ್ಚಿನ ಸಂವಾದ ನಡೆಸಿ ಆಟವನ್ನು ಅಭಿವೃದ್ಧಿ ಪಡಿಸುವ ಇಂಗಿತ ಹೊಂದಿದ್ದರು. ಈಗ ಹಸ್ಸಿ ಸಲಹೆಯಂತೆ ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ಶ್ರೀಧರನ್ ಶ್ರೀರಾಮ್ ಅವರನ್ನು ನೇಮಿಸಿದೆ.[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

'ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್, ಫಿಂಚ್, ಮ್ಯಾಕ್ಸ್ ವೆಲ್, ಫಾಲ್ಕ್ನರ್ ನಂಥ ಹಿಟ್ಟರ್ ಗಳಿದ್ದಾರೆ. ಸ್ಟೀವನ್ ಸ್ಮಿತ್ ಉತ್ತಮ ಆಟಗಾರ. ಸ್ಟಾರ್ಕ್ ಅನುಪಸ್ಥಿತಿ ಕಾಡಬಹುದು. ಆದರೆ, ಆಸ್ಟ್ರೇಲಿಯಾಕ್ಕೆ ಬೆಂಗಳೂರು, ಧರ್ಮಶಾಲಾ ಹಾಗೂ ಮೊಹಾಲಿ ಪಿಚ್ ನಲ್ಲಿ ಹೆಚ್ಚಿನ ತೊಂದರೆಯಾಗುವುದಿಲ್ಲ, ಉಳಿದ ಕಡೆಗಳಲ್ಲಿ ಸ್ಪಿನ್ ಆಡುವುದರ ಬಗ್ಗೆ ಹೆಚ್ಚಿನ ಗಮನ ಅಗತ್ಯ' ಎಂದು ಶ್ರೀರಾಮ್ ಅಭಿಪ್ರಾಯಪಟ್ಟಿದ್ದಾರೆ.[ದೈತ್ಯ ಭಾರತವೇ ವಿಶ್ವ ಟಿ20 ಗೆಲ್ಲಲಿದೆ: ಲಾರಾ]

Sridharan Sriram on Challenge of coaching Australian team World Twenty20

2000ರಿಂದ 2004ರ ನಡುವೆ ಭಾರತದ ಆಲ್‌ರೌಂಡರ್ ಆಗಿ ಮಿಂಚಿರುವ, ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ನ ಸಹಾಯಕ ಕೋಚ್ ಆಗಿದ್ದ ಶ್ರೀರಾಮ್, ಈ ವರ್ಷಾರಂಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯ ಎ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.[ಟಿ20ಕಪ್ ವಿಶ್ವ ಪರ್ಯಟನೆ ಆರಂಭ]

39ರ ಹರೆಯದ ಶ್ರೀರಾಮ್ ಭಾರತದಲ್ಲಿ ಮಾರ್ಚ್ 8 ರಿಂದ ಏಪ್ರಿಲ್ 3ರ ತನಕ ನಡೆಯಲಿರುವ ಟೂರ್ನಿಯಲ್ಲಿ ಆಸ್ಟ್ರೇಲಿಯ ತಂಡವನ್ನು ಸೇರಿಕೊಳ್ಳುವ ಮೊದಲು ದಕ್ಷಿಣ ಆಫ್ರಿಕ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಆಸ್ಟ್ರೇಲಿಯ 2015ರಲ್ಲಿ ಕೇವಲ ಒಂದು ಟ್ವೆಂಟಿ-20 ಪಂದ್ಯವನ್ನು ಮಾತ್ರ ಆಡಿದೆ. ಆಸ್ಟ್ರೇಲಿಯ ತಂಡ 2016ರ ಮಾರ್ಚ್ 18 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ಎದುರಿಸುವ ಮೂಲಕ ವಿಶ್ವ ಟಿ20 ಟೂರ್ನಿಗೆ ಚಾಲನೆ ಸಿಗಲಿದೆ. ವಿಶ್ವ ಟಿ20 ಕಪ್ ಎತ್ತುವ ಆಸ್ಟ್ರೇಲಿಯಾದ ಕನಸು ಇನ್ನೂ ನನಸಾಗಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X