ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ vs ಭಾರತ ಸರಣಿ ಎಲ್ಲಿ? ಯಾವಾಗ?

By Mahesh

ಕೋಲ್ಕತ್ತಾ, ಮೇ.25: ಮಳೆಗಾಲದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ ವೇಳಾಪಟ್ಟಿ 2016ರ ಏಪ್ರಿಲ್ ತನಕ ಫಿಕ್ಸ್ ಆಗಿದೆ. ದಕ್ಷಿಣ ಆಫ್ರಿಕಾ ತಂಡ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿ ನಡೆಯುವ ಕ್ರೀಡಾಂಗಣಗಳ ಪಟ್ಟಿ ಇಲ್ಲಿದೆ.

ದಕ್ಷಿಣ ಆಫ್ರಿಕಾ ತಂಡ ಒಟ್ಟು ನಾಲ್ಕು ಟೆಸ್ಟ್ ಪಂದ್ಯ, ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. ಅಕ್ಟೋಬರ್ ಹಾಗೂ ನವೆಂಬರ್ 2015ರಲ್ಲಿ ಸರಣಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ. [ಮಳೆಗಾಲದಲ್ಲಿ ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ]

South Africa to tour India this year; venues announced

ಬೆಂಗಳೂರು ಸೇರಿದಂತೆ ಅಹಮದಾಬಾದ್, ದೆಹಲಿ, ನಾಗಪುರ, ಚೆನ್ನೈ, ಕಾನ್ಪುರ, ಮಧ್ಯಪ್ರದೇಶದ ಒಂದು ಕ್ರೀಡಾಂಗಣ, ರಾಜ್ ಕೋಟ್, ಮುಂಬೈ, ಕೋಲ್ಕತ್ತಾ, ಮೊಹಾಲಿ, ಧರ್ಮಶಾಲದಲ್ಲಿ ಪಂದ್ಯಗಳು ನಡೆಯಲಿವೆ. [ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

ಇದಾದ ಬಳಿಕ ಶ್ರೀಲಂಕಾ ಜೊತೆಗೆ ಫೆಬ್ರವರಿ 2016ರಲ್ಲಿ 3 ಟಿ20 ಪಂದ್ಯಗಳನ್ನಾಡಲಿದೆ. ವಿಶಾಖಪಟ್ಟಣಂ, ಪುಣೆ ಹಾಗೂ ದೆಹಲಿಯಲ್ಲಿ ಈ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ 20 ಪಂದ್ಯಗಳಿಗೂ(ಮಾ.11 ರಿಂದ ಏ.3) ಮುನ್ನ ಈ ಸರಣಿ ನಡೆಯಲಿದೆ. [ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ]

ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಸರಣಿಗೆ ಕ್ರೀಡಾಂಗಣಗಳನ್ನು ಮಾತ್ರ ಹೆಸರಿಸಲಾಗಿದ್ದು, ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಅಕ್ಟೋಬರ್ ಹಾಗೂ ನವೆಂಬರ್ 2015: ಭಾರತ vs ದಕ್ಷಿಣ ಆಫ್ರಿಕಾ
4 ಟೆಸ್ಟ್ : ಅಹಮದಾಬಾದ್, ದೆಹಲಿ, ನಾಗಪುರ ಹಾಗೂ ಬೆಂಗಳೂರು.
5 ಏಕದಿನ ಪಂದ್ಯ: ಚೆನ್ನೈ, ಕಾನಪುರ, ಎಂಪಿಸಿಎ, ರಾಜ್ ಕೋಟ್ ಹಾಗೂ ಮುಂಬೈ,
2 ಟಿ 20: ಕೋಲ್ಕತ್ತಾ, ಮೊಹಾಲಿ ಹಾಗೂ ಧರ್ಮಶಾಲ.

ಭಾರತ vs ಶ್ರೀಲಂಕಾ, ಫೆಬ್ರವರಿ 2016
3 ಟಿ 20: ವಿಶಾಖಪಟ್ಟಣಂ, ಪುಣೆ ಹಾಗೂ ದೆಹಲಿ
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X