ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಹೊಸ 7 ಸದಸ್ಯರ ಸಮಿತಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನ

ನವದೆಹಲಿ, ಜೂನ್ 28 : ನಿವೃತ್ತ ನ್ಯಾಯ ಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಮುಂದಾಗಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ವಿಶೇಷ ಸಮಿತಿಯನ್ನು ರಚಿಸಿದೆ.

ಐಪಿಎಲ್ ಪ್ರಾಯೋಜಕತ್ವ: ಬಿಸಿಸಿಐಗೆ 2 ಸಾವಿರ ಕೋಟಿ ರು. ಕೊಟ್ಟ ವಿವೊಐಪಿಎಲ್ ಪ್ರಾಯೋಜಕತ್ವ: ಬಿಸಿಸಿಐಗೆ 2 ಸಾವಿರ ಕೋಟಿ ರು. ಕೊಟ್ಟ ವಿವೊ

ಏಳು ಸದಸ್ಯರ ಈ ಸಮಿತಿಗೆ ಬಿಸಿಸಿಐನ ಹಿರಿಯ ಆಡಳಿತಗಾರ ರಾಜೀವ್‌ ಶುಕ್ಲಾ ಅವರು ಅಧ್ಯಕ್ಷರಾಗಿದ್ದಾರೆ. ಹಾಗೂ ಸಮಿತಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಸ್ಥಾನ ನೀಡಲಾಗಿದೆ.

Sourav Ganguly, Rajeev Shukla in BCCI’s 7-member panel to oversee Lodha reforms

ಕೇರಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಟಿ.ಸಿ. ಮ್ಯಾಥ್ಯೂ, ಮೇಘಾಲಯ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ನಬಾ ಭಟ್ಟಾ ಚಾರ್ಜಿ, ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಮತ್ತು ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ಮತ್ತು ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಅವರೂ ಸಮಿತಿ ಯಲ್ಲಿದ್ದಾರೆ. ಅನಿರುದ್ಧ್ ಮತ್ತು ಅಮಿತಾಭ್‌ ಅವರು ಸಮಿತಿಯ ಸಂಚಾಲಕರಾಗಿದ್ದಾರೆ.

'ಜುಲೈ 14 ರಂದು ನಡೆಯುವ ವಿಚಾರಣೆಯ ವೇಳೆ ನಾವು ಲೋಧಾ ಶಿಫಾರಸುಗಳ ಅನುಷ್ಠಾನಕ್ಕೆ ಕೈಗೊಂಡಿ ರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು.

ಶುಕ್ಲಾ ನೇತೃತ್ವದ ಸಮಿತಿಯು ಶಿಫಾರಸುಗಳನ್ನು ಜಾರಿಗೊಳಿಸಲು ತೊಡಕಾಗಿರುವ ಅಂಶ ಗಳನ್ನು ಪತ್ತೆ ಹಚ್ಚಿ ಜುಲೈ 10ರ ಒಳಗೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರಿಗೆ ಲಿಖಿತ ವರದಿ ನೀಡಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X