ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಬ್ಲಾಸ್ಟ್ : ಬೂಮ್ ಬೂಮ್ ಅಫ್ರಿದಿ ಭರ್ಜರಿ ಶತಕ

By Mahesh

ಲಂಡನ್, ಆ.23: ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ವಿದಾಯ ಹೇಳಿರಬಹುದು, ಆದರೆ, ಅವರ ಸ್ಫೋಟಕ ಆಟ ಇನ್ನೂ ನಿಂತಿಲ್ಲ. ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನ ಟ20 ಬ್ಲಾಸ್ಟ್ ಪಂದ್ಯವೊಂದರಲ್ಲಿ 43 ಎಸೆತಗಳಲ್ಲಿ 101 ರನ್ ಗಳಿಸಿದ ಆಫ್ರಿದಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

21 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಅಫ್ರಿದಿ21 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಅಫ್ರಿದಿ

ಟಿ-20 ಬ್ಲಾಸ್ಟ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಕೇವಲ 20 ಎಸೆತಗಳಲ್ಲಿ 50 ರನ್ ಪೂರೈಸಿದರು. ನಂತರ 43 ಎಸೆತಗಳಲ್ಲಿ 101 ರನ್ ಚೆಚ್ಚಿದರು. ಆಫ್ರಿದಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹ್ಯಾಂಪ್ ಶೈರ್ ತಂಡವು ಡರ್ಬಿಶೈರ್ ವಿರುದ್ಧ 101 ರನ್‌ಗಳಿಂದ ಜಯ ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

 Shahid Afridi slams 42-ball century in Natwest T20 Blast

ಆಲ್‌ರೌಂಡರ್ ಅಫ್ರಿದಿ ಅವರು 256 ಪಂದ್ಯಗಳನ್ನಾಡಿದ್ದರೂ ಇದು ಅವರ ಮೊದಲ ಟಿ20 ಶತಕ ಎನ್ನುವುದು ವಿಶೇಷ ಕೇವಲ 43 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 10 ಬೌಂಡರಿ ಬಾರಿಸಿದ ಅಫ್ರಿದಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹ್ಯಾಂಪ್ ಶೈರ್ ತಂಡ 249/8 ಸ್ಕೋರ್ ಮಾಡಲು ಸಾಧ್ಯವಾಯಿತು.

ಅಫ್ರಿದಿಗೆ ನಾಯಕ ಜೇಮ್ಸ್ ವಿನ್ಸಿ55 ರನ್(36 ಎಸೆತ) ಸಾಥ್ ನೀಡಿದರು. 2006ರಲ್ಲಿ ಹ್ಯಾಂಪ್ ಶೈರ್ 225 ಗಳಿಸಿದ್ದು ತಂಡದ ಗರಿಷ್ಠ ಟ್ವೆಂಟಿ-20 ಸ್ಕೋರ್‌ ಆಗಿತ್ತು. ಈಗ ಈ ಮೊತ್ತವನ್ನು ದಾಟಿ ದಾಖಲೆ ಬರೆಯಲಾಗಿದೆ.

ಡರ್ಬಿಶೈರ್ ತಂಡ148 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಲಿಯಾಮ್ ಡಾಸನ್ ಹಾಗೂ ಕೈಲ್ ಅಬಾಟ್(ತಲಾ 3 ವಿಕೆಟ್) ಪಡೆದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X