ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

21 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಅಫ್ರಿದಿ

ಪಾಕಿಸ್ತಾನದ ದಿಗ್ಗಜ ಕ್ರಿಕೆಟರ್ ಶಾಹೀದ್ ಅಫ್ರಿದಿ ಅವರು ಸುಮಾರು 21 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಸೋಮವಾರ (ಫೆಬ್ರವರಿ 20) ದಂದು ವಿದಾಯ ಹೇಳಿದ್ದಾರೆ.

By Mahesh

ಶಾರ್ಜಾ(ಯುಎಇ), ಫೆಬ್ರವರಿ 20: ಪಾಕಿಸ್ತಾನದ ದಿಗ್ಗಜ ಕ್ರಿಕೆಟರ್ ಶಾಹೀದ್ ಅಫ್ರಿದಿ ಅವರು ಸುಮಾರು 21 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಸೋಮವಾರ (ಫೆಬ್ರವರಿ 20) ದಂದು ವಿದಾಯ ಹೇಳಿದ್ದಾರೆ. ಅಫ್ರಿದಿಗೆ ವಯಸ್ಸೇ ಆಗುವುದಿಲ್ಲ, ಎಷ್ಟು ಸಾರಿ ರಿಟೈರ್ ಆಗಿದ್ದೀನಿ ಎಂದಿದ್ರು, ಕೊನೆಗೂ ರಿಟೈರ್ ಆದ್ನಲ್ಲ ಎಂಬ ಪ್ರತಿಕ್ರಿಯೆಗಳು ಕೇಳೀ ಬಂದಿದೆ.

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೂ ವಿದಾಯ ಹೇಳುವ ಮೂಲಕ 36 ವರ್ಷದ ಅಫ್ರಿದಿ ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಿಂದ ದೂರಾಗುತ್ತಿದ್ದಾರೆ. 2010ರಲ್ಲಿ ಟೆಸ್ಟ್ ಹಾಗೂ 2015ರಲ್ಲಿ ಏಕದಿನ ಪಂದ್ಯಗಳಿಗೆ ಈ ಹಿಂದೆಯೇ ಅಫ್ರಿದಿ ನಿವೃತ್ತಿ ಘೋಷಿಸಿದ್ದಾರೆ.

Shahid Afridi retires from international cricket after 21-year career

2016 ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಟಿ-20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಆದರೆ, ಆಟಗಾರನಾಗಿ ತಂಡದಲ್ಲಿ ಉಳಿದಿದ್ದರು. 98 ಟಿ-20 ಪಂದ್ಯಗಳಿಂದ 1405 ರನ್, 97 ವಿಕೆಟ್ ಗಳಿಸಿದ್ದಾರೆ. ಈಗ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ, ದೇಶಿ ಮತ್ತು ವಿದೇಶಿ ಲೀಗ್ ಪಂದ್ಯಗಳಲ್ಲಿ ಆಡಲಿದ್ದಾರೆ.

1996 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. 27 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 156 ಗರಿಷ್ಠ ರನ್ ಸೇರಿ 1,776 ರನ್ ಗಳಿಸಿ, 48 ವಿಕೆಟ್ ಕಬಳಿಸಿದ್ದಾರೆ. 398 ಏಕದಿನ ಪಂದ್ಯಗಳಿಂದ 8,064 ರನ್ ಗಳಿಸಿದ್ದು, ಬೌಲಿಂಗ್ ನಲ್ಲಿ 395 ವಿಕೆಟ್ ಪಡೆದಿದ್ದಾರೆ.(ಎಎಫ್ ಪಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X