ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನದಿಗೆ ಬಿದ್ದು ದಾರುಣ ಸಾವಿಗೀಡಾದ ಯುವ ಕ್ರಿಕೆಟಿಗ

ಎಡಿನ್‌'ಬರ್ಗ್, ಜನವರಿ, 08: ಯುವ ಕ್ರಿಕೆಟಿಗನೊಬ್ಬ ಅರಳಬೇಕಾದ ವಯಸ್ಸಿನಲ್ಲಿ ಬಾರದ ಲೋಕ ಸೇರಿಕೊಂಡಿದ್ದಾನೆ. ಸ್ಕಾಟ್ಲೆಂಡ್‌'ನ ಟಾಮ್ ಅಲಿನ್ (28) ಆಕಸ್ಮಿಕವಾಗಿ ಸಾವಿಗೀಡಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಪ್ರಕರಣದ ಬಗ್ಗೆ ಅನುಮಾನಗಳು ಎದ್ದಿದ್ದು ಸ್ಕಾಟ್ಲೆಂಡ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೊಸ ವರ್ಷಾಚರಣೆ ನಿಮಿತ್ತ ಜನವರಿ 3ರಂದು ಮನೆಯ ಮಾಳಿಗೆ ಮೇಲೆ ಏರ್ಪಡಿಸಲಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಟಾಮ್ ಅಲಿನ್ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ಮನೆಯ ಕೆಳಗಡೆ ಹರಿಯುವ ನದಿಗೆ ಆಟಗಾರ ಬಿದ್ದಿದ್ದಾರೆ ಎಂದು 'ಡೈಲಿ ಮೇಲ್' ವರದಿ ಮಾಡಿದೆ. ವಾರ್ವಿಕ್'ಶೈರ್ ಕೌಂಟಿ ಕ್ಲಬ್ ತಂಡದ ಆಟಗಾರ ದುರಂತ ಸಾವಿಗೀಡಾಗಿದ್ದಾರೆ.[ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ:]

Scottish police investigate death of Sussex cricketer

ಕೆಲ ದಿನಗಳ ಹಿಂದೆ ಇಂಗ್ಲೆಂಡ್ ನ ಉದಯೋನ್ಮುಖ ಬೌಲರ್ ಮ್ಯಾಟ್ ಹಾಬ್ಡೆನ್ (22) ನಾಲ್ಕು ದಿನಗಳ ಹಿಂದಷ್ಟೇ ದುರಂತ ಸಾವಿಗೀಡಾಗಿದ್ದರು. ಕಳೆದ ವರ್ಷದ ಆಸ್ಟ್ರೇಲಿಯಾದ ಫಿಲಿಫ್ ಹ್ಯೂಸ್ ಸಹ ಮೈದಾನದಲ್ಲೇ ಲೋಕ ತ್ಯಜಿಸಿದ್ದರು.. ಇಡೀ ಕ್ರಿಕೆಟ್ ಲೋಕವೇ ಕಂಬನಿ ಮಿಡಿದಿತ್ತು.[ಹ್ಯೂಸ್ ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್]

ಏಪ್ರಿಲ್20 ರಂದು ಪಶ್ಚಿಮ ಬಂಗಾಲದ ಅಂಡರ್ 19 ತಂಡದ ನಾಯಕ ಅಂಕಿತ್ ಕೇಶ್ರಿ ಮೈದಾನದಲ್ಲಿ ಆಟವಾಡುವಾಗ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೀಗ ಕ್ರಿಕೆಟ್ ಲೋಕ ಮತ್ತೊಬ್ಬ ಆಟಗಾರನನ್ನು ಕಳೆದುಕೊಂಡಿದೆ. ರವಿ ಬೋಪಾರಾ ಸೇರಿದಂತೆ ಅನೇಕ ಆಟಗಾರರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X