ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ 'ಡಾಕ್ಯುಮೆಂಟರಿ'ಗೆ ಚೆಂದದ ಹೆಸರು ಕೊಡಿ

By Mahesh

ಬೆಂಗಳೂರು, ಮಾ.5: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಭಿಮಾನಿಗಳಿಂದ ಮೊದಲ ಬಾರಿಗೆ ಒಂದು ಗಿಫ್ಟ್ ಕೇಳಿದ್ದಾರೆ. ತಮ್ಮ ವೃತ್ತಿ ಬದುಕಿನುದ್ದಕ್ಕೂ ಟೀಂ ಇಂಡಿಯಾ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಸಚಿನ್ ಅವರು ಬಹುಶಃ ಮೊದಲ ಬಾರಿಗೆ ತಮ್ಮ ಫ್ಯಾನ್ಸ್ ಗಳ ಮುಂದೆ ಟ್ವಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

2013ರಲ್ಲಿ ವೃತ್ತಿ ಬದುಕಿಗೆ ಅಂತ್ಯ ಹಾಡಿದ ಕ್ರಿಕೆಟ್ ಮಾಂತ್ರಿಕ್ ಸಚಿನ್ ಅವರು ನಂತರ ಕ್ರಿಕೆಟ್ ಅಲ್ಲದೆ ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಶಿವಾಜಿ ಪಾರ್ಕಿನಿಂದ ಶಾರ್ಜವರೆಗೆ, ವಾಂಖೆಡೆಯಿಂದ ಎಂಸಿಜಿವರೆಗೆ, ಈಡನ್ ಗಾರ್ಡನ್ಸ್ ನಿಂಡ ಲಾರ್ಡ್ಸ್ ತನಕ ಸಚಿನ್ ಬ್ಯಾಟ್ ನಿಂದ ಹರಿದ ರನ್ ಹೊಳೆ ನಾನಾ ಕಥೆಗಳನ್ನು ಹೇಳುತ್ತದೆ. [ಸಚಿನ್ -ಲಾರಾ ಅಪೂರ್ವ ಚಿತ್ರ ಭಾರಿ ಮೆಚ್ಚುಗೆ]

Sachin Tendulkar invites his fans to receive 'something very special'

ಸಚಿನ್ ಅವರ ಕುರಿತಂತೆ ಬಂದಿರುವ ಅವರ ಆತ್ಮಕಥೆ ಈಗಾಗಲೇ ಜನಪ್ರಿಯತೆ ಗಳಿಸಿದೆ. ಈಗ ಸಚಿನ್ ಅವರ ಜೀವನ ಹಾಗೂ ವೃತ್ತಿ ಬದುಕು ಕುರಿತಂತೆ ಸಾಕ್ಷ್ಯ ಚಿತ್ರವೊಂದು ನಿರ್ಮಾಣವಾಗುತ್ತಿದೆ. 200ನಾಟೌಟ್ ಎಂಬ ಸಂಸ್ಥೆ ತೆಂಡೂಲ್ಕರ್ ಬದುಕಿನ ಸಮಗ್ರ ಚಿತ್ರಣವನ್ನು ಮುಂದಿಡಲು ಯತ್ನಿಸುತ್ತಿದೆ.

ಇಂಗ್ಲೆಂಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಎರ್ಸ್ಕಿನ್ ಚಿತ್ರವನ್ನು ನಿರ್ದೇಶಿಸುತ್ತಿರುವ ಈ ಸಾಕ್ಷ್ಯಚಿತ್ರ (Docu-Feature)ಗೆ ಸೂಕ್ತ ಹೆಸರಿನ ಹುಡುಕಾಟ ಜಾರಿಯಲ್ಲಿದೆ. ಈ ಬಗ್ಗೆ ಸಚಿನ್ ಅವರು ತಮ್ಮ ಅಧಿಕೃತ ಟ್ವೀಟ್ ಖಾತೆಯಿಂದ ಸಂದೇಶ ಹಾಕಿದ್ದಾರೆ.



ಈ ಚಿತ್ರಕ್ಕೆ ಸೂಕ್ತ ಹೆಸರನ್ನು ಕೊಡಿ, ನೀವು ಕೊಟ್ಟ ಹೆಸರು ಆಯ್ಕೆಯಾದರೆ ನಿಮಗೆ ವಿಶೇಷವಾದ ಕೊಡುಗೆ ನನ್ನಿಂದ ಕಾದಿದೆ ಎಂದು ಸಚಿನ್ ಹೇಳಿದ್ದಾರೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಕ್ರಿಕೆಟ್ ಲೋಕದ ನೂರಾರು ದಾಖಲೆಗಳನ್ನು ಸರಿಗಟ್ಟಿರುವ ವೀರ ಸಚಿನ್ ಅವರ ಜೀವನ ಚರಿತ್ರೆ 'ಪ್ಲೇಯಿಂಗ್ ಇಟ್ ಮೈ ವೇ' ಬಿಡುಗಡೆಗೆ ಮುನ್ನ ಉಂಟು ಮಾಡಿದ್ದ ಕುತೂಹಲವನ್ನು ಈ ಸಾಕ್ಷ್ಯಚಿತ್ರ ಮೀರಿಸುತ್ತಿದೆ.

ಸಚಿನ್ ಮನವಿಗೆ ಓಗೊಟ್ಟು ಡಾಕ್ಯುಮೆಂಟರಿಗೆ ಹೆಸರು ಸೂಚಿಸಲು ಬಯಸುವ ಅಭಿಮಾನಿಗಳು ಈ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X