ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಕೆಪಾಸಿಟಿ ಬಗ್ಗೆ ಕೊಂಕು ನುಡಿದ ಕಪಿಲ್

By Mahesh

ಮುಂಬೈ, ಅ.29: ಕ್ರಿಕೆಟ್ ದಿಗ್ಗಜ, ಹಲವಾರು ಅಭಿಮಾನಿಗಳ ಪಾಲಿನ ದೇವರು ಸಚಿನ್ ತೆಂಡೂಲ್ಕರ್ ಅವರ ಸಾಮರ್ಥ್ಯ, ಪ್ರತಿಭೆ ಬಗ್ಗೆ ಮಾಜಿ ನಾಯಕ ಕಪಿಲ್ ದೇವ್ ಅವರು ಕೊಂಕು ನುಡಿದಿದ್ದಾರೆ.

ಸಚಿನ್ ಅವರಿಗೆ ದ್ವಿಶತಕ, ತ್ರಿಶತಕ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸುವ ಸಾಮರ್ಥ್ಯವಿದ್ದರೂ ಹೇಗೆ ಗುರಿ ಮುಟ್ಟಬೇಕು ಎಂಬುದು ತಿಳಿದಿರಲಿಲ್ಲ ಎಂದಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಬೇಡಿ. ಸಚಿನ್ ಗೆ ಅಗಾಧ ಪ್ರತಿಭೆ ಇತ್ತು. [ಕ್ರಿಕೆಟ್ ದೇವರ ಮೆಚ್ಚುಗೆ ಪಡೆಯುವಲ್ಲಿ ಸೋತ ಕಪಿಲ್]

ಅದರೆ, ಪ್ರತಿಭೆಗೆ ತಕ್ಕ ನ್ಯಾಯ ಒದಗಿಸಲಿಲ್ಲ. ಆತ ಈಗ ಗಳಿಸಿರುವ ಹೆಸರು, ದಾಖಲೆಗಿಂತ ಹೆಚ್ಚಿನ ಪ್ರಮಾಣದ ಗುರಿ ಮುಟ್ಟಬಹುದಾಗಿತ್ತು ಎಂದು ನನಗೆ ಯಾವಾಗಲೂ ಅಂದುಕೊಳ್ಳುತ್ತಿದ್ದೆ ಎಂದು ಕಪಿಲ್ ಹೇಳಿದ್ದನ್ನು ಖಲೀಜ್ ಟೈಮ್ಸ್ ವರದಿ ಮಾಡಿದೆ.[ಸಚಿನ್, ಈ ಶತಮಾನದ ಶ್ರೇಷ್ಠ ಕ್ರಿಕೆಟರ್: ಕ್ರಿಕೆಟ್ ಆಸ್ಟ್ರೇಲಿಯಾ]

'ಬಾಂಬೆ ಕ್ರಿಕೆಟ್' ಮಾದರಿಯನ್ನು ರೂಢಿಸಿಕೊಂಡ ಸಚಿನ್ ಎಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಟ್ಟಕ್ಕೇರಲಿಲ್ಲ. ಬಾಂಬೆ ಹುಡುಗರ ಜೊತೆ ಕಾಲದೂಡುವ ಬದಲು ಆರಂಭದ ದಿನಗಳಲ್ಲಿ ವೆಸ್ಟ್ ಇಂಡೀಸ್ ನ ದಿಗ್ಗಜ ವಿವಿಯನ್ ರಿಚರ್ಡ್ಸ್ ಜೊತೆ ಇನ್ನಷ್ಟು ಕಾಲ ಕಳೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. [ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ]

ಎದುರಾಳಿಗೆ ಭೀತಿ ಹುಟ್ಟಿಸಲಿಲ್ಲ: ಸಚಿನ್ ಅವರ ಪ್ರತಿಭೆ ಬಗ್ಗೆ ಎದುರಾಳಿಗೆ ತಂಡಕ್ಕೆ ಗೌರವವಿತ್ತೇ ಹೊರತೂ ಯಾರಿಗೂ ಭೀತಿ ಹುಟ್ಟುತ್ತಿರಲಿಲ್ಲ. ನಾನು ಸಚಿನ್ ಗೆ ಸೆಹ್ವಾಗ್ ಹಾಗೂ ರಿಚರ್ಡ್ಸ್ ರೀತಿ ಬ್ಯಾಟ್ ಮಾಡಲು ಹೇಳುತ್ತಿದ್ದೆ ಎಂದಿದ್ದಾರೆ.(ಪಿಟಿಐ)

ಎದುರಾಳಿಗೆ ಭೀತಿ ಹುಟ್ಟಿಸುವಂತೆ ಆಡುವ ಪ್ರತಿಭೆ

ಎದುರಾಳಿಗೆ ಭೀತಿ ಹುಟ್ಟಿಸುವಂತೆ ಆಡುವ ಪ್ರತಿಭೆ

ಸಚಿನ್ ಗೆ ಎದುರಾಳಿಗೆ ಭೀತಿ ಹುಟ್ಟಿಸುವಂತೆ ಆಡುವ ಪ್ರತಿಭೆಯಿತ್ತು. ಅದರೆ, ಶತಕ ಗಳಿಸಿದ ನಂತರ ಸಚಿನ್ ಬ್ಯಾಟಿಂಗ್ ಶೈಲಿಯೇ ಬದಲಾಗುತ್ತಿತ್ತು. ಮುಖಾ ಮೂತಿ ನೋಡದೆ ಚೆಚ್ಚುವಂಥ ಛಾತಿ ಬೆಳೆಸಿಕೊಳ್ಳಲೇ ಇಲ್ಲ. ಸದಾಕಾಲ ತಾಂತ್ರಿಕವಾಗಿ ಕರೆಕ್ಟ್ ಕ್ರಿಕೆಟ್ ಆಡುವುದರ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿದ್ದರು

ಮೆಗ್ ಗ್ರಾ ಹಾಗೂ ವಾಸೀಂ ಕೂಡಾ ಭೀತಿ ಹುಟ್ಟಿಸಲಿಲ್ಲ

ಮೆಗ್ ಗ್ರಾ ಹಾಗೂ ವಾಸೀಂ ಕೂಡಾ ಭೀತಿ ಹುಟ್ಟಿಸಲಿಲ್ಲ, ವಖಾರ್ ಹಾಗೂ ಶೋಯಿಬ್ ಕಂಡರೆ ಭೀತಿ ಹುಟ್ಟುತ್ತಿತ್ತು. ಅದರೆ, ಮೊದಲಿಬ್ಬರು ಶ್ರೇಷ್ಠರಲ್ಲವೇ?

ಕಪಿಲ್ ಮಾತನ್ನು ಪುರಸ್ಕರಿಸಿ ಬೋಥಂ

ಕಪಿಲ್ ಮಾತನ್ನು ಪುರಸ್ಕರಿಸಿ ಬೋಥಂ

ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಬೋಥಂ ಅವರು ಕಪಿಲ್ ಮಾತನ್ನು ಪುರಸ್ಕರಿಸಿ, ವಿವಿಯನ್ ರಿಚರ್ಡ್ಸ್ ಅಸಲಿ ಮಾಸ್ಟರ್ ಬ್ಲಾಸ್ಟರ್, ಈಗಲೂ ನನಗೆ ಓಲ್ಡ್ ಟ್ರಾಫರ್ಡ್ ನಲ್ಲಿ ಮೈಕಲ್ ಹೋಲ್ಡಿಂಗ್ ನಿಲ್ಲಿಸಿಕೊಂಡು ರಿಚರ್ಡ್ಸ್ ಅಜೇಯ 189 ರನ್ ಚೆಚ್ಚಿದ್ದು ನೆನಪಿಗೆ ಬರುತ್ತದೆ. ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ರಿಚರ್ಡ್ಸ್ ಸರ್ವಶ್ರೇಷ್ಠ ಎಂದಿದ್ದಾರೆ.

ಕಪಿಲ್ ದೇವ್ ಯಾಕೆ ಟ್ರೆಂಡಿಂಗ್ ನಲ್ಲಿದೆ

ಕಪಿಲ್ ದೇವ್ ಯಾಕೆ ಟ್ರೆಂಡಿಂಗ್ ನಲ್ಲಿದೆ ಎಂದು ಅಚ್ಚರಿಪಟ್ಟೆ. 1983 ವಿಶ್ವಕಪ್ ಏನಾದರೂ ವಾಪಸ್ ಮಾಡಿಬಿಡ್ರಾ ಹೇಗೆ?

20ವರ್ಷ ಮುಂಚೆ ಹೇಳಬೇಕಾದ ಮಾತಿದು

20ವರ್ಷ ಮುಂಚೆ ಹೇಳಬೇಕಾದ ಮಾತಿದು. ಕಪಿಲ್ ಕೋಚ್ ಆಗಿದ್ದಾಗಲೇ ಸಚಿನ್ 200 ರನ್ ಬಾರಿಸಿದ್ದಾರೆ. ಈಗ ಏಕೆ ಈ ರೀತಿ ಡೈಲಾಗ್?

ಶಿವಸೇನೆಗೆ ಇನ್ನೂ ವಿಷಯ ಗೊತ್ತಾಗಿಲ್ವಾ?

ಶಿವಸೇನೆಗೆ ಇನ್ನೂ ವಿಷಯ ಗೊತ್ತಾಗಿಲ್ವಾ? ಗೊತ್ತಾಗಿದ್ದರೆ ಕಪಿಲ್ ಮುಖಕ್ಕೆ ಮಸಿ ಹಾಕುತ್ತಿದ್ದರು ಅಷ್ಟೇ

ಕ್ರಿಕೆಟ್ ದಿಗ್ಗಜರಿಂದ ಸಚಿನ್ ಬಗ್ಗೆ ಮಾತು

ಕ್ರಿಕೆಟ್ ದಿಗ್ಗಜರಿಂದ ಸಚಿನ್ ಬಗ್ಗೆ ಮಾತು

ಕಪಿಲ್ ಅವರ ಜೊತೆಯಲ್ಲಿ ವಾಸಿಂ ಅಕ್ರಂ, ಇಯಾನ್ ಬೋಥಂ ಹಾಗೂ ಶೇನ್ ವಾರ್ನ್ ಕೂಡಾ ಅವರು ಕೂಡಾ ಆಯ್ದ ಪ್ರೇಕ್ಷಕರ ಜೊತೆ ಮಾತನಾಡಿದ್ದಾರೆ.
ಅಕ್ರಮ್ ಅವರು ಮಾತನಾಡಿ, ವಿವಿಯನ್ ರಿಚರ್ಡ್ಸ್, ಸುನಿಲ್ ಗವಾಸ್ಕರ್ ನಂತರ ಬ್ರಿಯಾನ್ ಲಾರಾ, ಸಚಿನ್ ಅವರನ್ನು ಔಟ್ ಮಾಡುವುದು ನನ್ನ ಗುರಿಯಾಗಿತ್ತು ಎಂದಿದ್ದಾರೆ

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X