ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

12 ಕೋಟಿ ರು. ಮೊತ್ತಕ್ಕೆ ಆರ್ ಸಿಬಿ ಸೇರಿದ ಟಿಮಲ್ ಮಿಲ್ಸ್ ಯಾರು?

ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರಿಗೆ ವೇಗಿಯೊಬ್ಬನ ಅವಶ್ಯಕತೆಯಿತ್ತು. ಬ್ಯಾಟಿಂಗ್ ಲೈನಪ್ ಸದೃಢವಾಗಿದ್ದರೂ ಬೌಲಿಂಗ್ ನಲ್ಲಿ ಸೊರಗಿದ್ದರಿಂದಲೇ ಮಿಲ್ಸ್ ಅವರಿಗೆ ಆರ್ ಸಿಬಿ ದುಬಾರಿ ಬೆಲೆ ತೆತ್ತು ಮಣೆಹಾಕಿದೆ.

ಬೆಂಗಳೂರು, ಫೆಬ್ರವರಿ 20: ಈ ಬಾರಿಯ ಐಪಿಎಲ್ ಹರಾಜು ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರ ಪೈಕಿ ಅತಿ ಬೇಡಿಕೆಯ ಕ್ರಿಕೆಟಿಗನಾಗಿ ಹೊರಹೊಮ್ಮಿದ ಟಿಮಲ್ ಮಿಲ್ಸ್ 12 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಹರಾಜಾಗಿದ್ದಾರೆ.

ದಿನದ ಹರಾಜಿನಲ್ಲಿ ಬಿಲಿಯನ್ ಮೊತ್ತವನ್ನು ದಾಟಿದ ಎರಡನೇ ಆಟಗಾರನೆನಿಸಿದರು. ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಅವರು 14.5 ಕೋಟಿ ರು. ಗಳಿಗೆ ಪುಣೆ ತಂಡದ ಪಾಲಾದರೆ, ಮಿಲ್ಸ್ ಅವರು 12 ಕೋಟಿಗೆ ಆರ್ ಸಿಬಿ ಪಾಲಾಗಿದರು.[LIVE : ಐಪಿಎಲ್ 2017, 4 ಕೋಟಿಗೆ ಅಪಘಾಬಿಸ್ತಾನದ ರಶೀದ್ ಹೈದರಬಾದ ಪಾಲು]

Royal Challegers of Bangalore bags England pacer Tymal Mills for Rs. 12 crores

ಇವರನ್ನು ಕೊಂಡುಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ, ಪಂಜಾಬ್, ಮುಂಬೈ, ಡೆಲ್ಲಿ ಫ್ರಾಂಚೈಸಿಗಳು ಹರಸಾಹಸ ಮಾಡಿದವು ಆದರೆ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಆರ್ ಸಿಬಿ ಯಶಸ್ವಿಯಾಯಿತು.[ಐಪಿಎಲ್ 2017 ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ]

ಮಿಲ್ಸ್ ಯಾರು, ಆರ್ ಸಿಬಿ ಇವರನ್ನು ಕೊಂಡಿದ್ದೇಕೆ?

- ಈತ ಇಂಗ್ಲೆಂಡ್ ತಂಡದ ಫಾಸ್ಟ್ ಬೌಲರ್.

- ಬೌಲಿಂಗ್ ವೇಳೆ ಸರಾಸರಿ 145 ಕಿ.ಮೀ.ವರೆಗೆ ಚೆಂಡನ್ನು ಎಸೆಯಬಲ್ಲ.

- ಇಂಥ ವೇಗಿಯೊಬ್ಬನ ಅವಶ್ಯಕತೆ ಆರ್ ಸಿಬಿಗೆ ಇತ್ತು.

- ಬ್ಯಾಟಿಂಗ್ ಲೈನಪ್ ನಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ನಂಥ ಮಹಾನ್ ಆಟಗಾರರನ್ನು ಹೊಂದಿದ್ದರೂ, ಬೌಲಿಂಗ್ ನಲ್ಲಿ ದುರ್ಬಲ ಪಡೆ ಹೊಂದಿದೆ.

- ದುರ್ಬಲ ಬೌಲಿಂಗ್ ವಿಭಾಗದಿಂದಾಗಿ ಆರ್ ಸಿಬಿ ತಂಡ ಕಳೆದ ವರ್ಷ ಐಪಿಎಲ್ ಫೈನಲ್ ವರೆಗೆ ಹೋಗಿದ್ದರೂ ಕಪ್ ಗೆಲ್ಲಲಾಗದೇ ನಿರಾಸೆ ಹೊಂದಿತ್ತು.

- ಹಾಗಾಗಿ, ಈ ಬಾರಿಯ ಹರಾಜಿನಲ್ಲಿ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವತ್ತ ಆರ್ ಸಿಬಿ ಫ್ರಾಂಚೈಸಿಯು ಗಮನ ಹರಿಸಿತ್ತು.

- ಇದರಿಂದಾಗಿ, ಕಳೆದ ವರ್ಷ ಕಳಪೆ ಪ್ರದರ್ಶನ ತೋರಿದ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ತಂಡದಿಂದ ಕೈಬಿಟ್ಟಿರುವ ಆರ್ ಸಿಬಿ, ಈ ಬಾರಿ ಅವರ ಸ್ಥಾನಕ್ಕೆ ಮಿಲ್ಸ್ ಅವರನ್ನು ಕರೆತಂದಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X