ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಾಪ್ 10 ಪಟ್ಟಿಯಲ್ಲಿ ರೋಹಿತ್ ಇನ್, ಧೋನಿ ಔಟ್

By Mahesh

ದುಬೈ, ಜ. 25: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಎನಿಸಿದ ರೋಹಿತ್ ಶರ್ಮ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರಿದ್ದಾರೆ. ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ವಿಫಲರಾಗಿರುವ ಧೋನಿ ಇದೇ ಮೊದಲ ಬಾರಿಗೆ ಟಾಪ್ 10 ಏಕದಿನ ಬ್ಯಾಟ್ಸ್ ಮನ್ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ರೋಹಿತ್ ಶರ್ಮ ಅವರು ವೃತ್ತಿ ಬದುಕಿನ ಶ್ರೇಷ್ಠ ಸ್ಥಾನಕ್ಕೇರಿದ್ದಾರೆ. ಐದು ಪಂದ್ಯಗಳಲ್ಲಿ 2 ಶತಕಗಳ ಸಹಿತ ಒಟ್ಟು 441 ರನ್ ಗಳಿಸಿ ಸರಣಿ ಶ್ರೇಷ್ಠ ಎನಿಸಿದ ರೋಹಿತ್ ಅವರು ಟಾಪ್ 10 ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.['ನಾಯಕನಾಗಿ ಧೋನಿ ಅಗತ್ಯಕ್ಕಿಂತ ಹೆಚ್ಚು ಕಾಲ ಇದ್ದಾರೆ!']

Rohit claims career-best fifth spot in ICC batting chart

ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಐದನೇ ಸ್ಥಾನದಲ್ಲಿದ್ದ ನಾಯಕ ಎಂಎಸ್ ಧೋನಿ ಏಳು ಸ್ಥಾನ ಕೆಳಕ್ಕೆ ಕುಸಿದು 13ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.[ಭಾರತ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವುದೇ?]

ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಆಸ್ಟ್ರೇಲಿಯದಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನದ ಹಿನ್ನೆಲೆಯಲ್ಲಿ 59 ಅಂಕವನ್ನು ಗಳಿಸಿದ್ದಾರೆ. ಎರಡನೆ ಸ್ಥಾನದಲ್ಲಿರುವ ಕೊಹ್ಲಿಗಿಂತ 64 ಅಂಕ ಹಾಗೂ ನಂ.1 ದಾಂಡಿಗ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್‌ಗಿಂತ 75 ಅಂಕ ಹಿಂದಿದ್ದಾರೆ.

ಆಸ್ಟ್ರೇಲಿಯದ ವಿರುದ್ಧ ಸಿಡ್ನಿಯಲ್ಲಿ ನಡೆದಿದ್ದ ಐದನೆ ಏಕದಿನ ಪಂದ್ಯವನ್ನು ಜಯಿಸಿರುವ ಭಾರತ ಐಸಿಸಿ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಸರಣಿಯಲ್ಲಿ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್ ಸ್ಥಾನಕ್ಕೇರಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಜಾನ್ ಹೇಸ್ಟಿಂಗ್ಸ್ ಉತ್ತಮ ಸಾಧನೆ ಮಾಡಿದ್ದಾರೆ.

ಸರಣಿಯಲ್ಲಿ ಒಟ್ಟು 169 ರನ್‌ಗಳನ್ನು ಗಳಿಸಿದ್ದ ಮ್ಯಾಕ್ಸ್‌ವೆಲ್ 2 ಸ್ಥಾನ ಮೇಲಕ್ಕೇರಿ 8ನೆ ಸ್ಥಾನದಲ್ಲೂ, 315 ರನ್ ಗಳಿಸಿದ್ದ ಸ್ಮಿತ್ ಐದು ಸ್ಥಾನ ಭಡ್ತಿ ಪಡೆದು 15ನೆ ಸ್ಥಾನಕ್ಕೇರಿದ್ದಾರೆ. ಒಟ್ಟು 220 ರನ್ ಗಳಿಸಿರುವ ವಾರ್ನರ್ ಐದು ಸ್ಥಾನ ಭಡ್ತಿ ಪಡೆದು 18ನೆ ಸ್ಥಾನಕ್ಕೇರಿದ್ದಾರೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X