ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಅಬ್ಬರ, ಮುಂಬೈಗೆ ಮೊದಲ ಬಾರಿಗೆ ಗೆಲುವಿನ ರುಚಿ

By Mahesh

ಕೋಲ್ಕತ್ತಾ, ಏಪ್ರಿಲ್ 14: ಈಡನ್ ಗಾರ್ಡನ್ಸ್ ಮೈದಾನವೆಂದರೆ ರೋಹಿತ್ ಶರ್ಮಗೆ ಎಲ್ಲಿಲ್ಲದ ಪ್ರೀತಿ. ಬುಧವಾರ ಅತಿಥೇಯ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧವೂ ರೋಹಿತ್ ಭರ್ಜರಿ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೆಕೆಆರ್ ನೀಡಿದ್ದ188ರನ್ ಗುರಿಯನ್ನು ಮುಂಬೈನ ರೋಹಿತ್ -ಬಟ್ಲರ್ ಉತ್ತಮ ಬ್ಯಾಟಿಂಗ್ ಮೂಲಕ ಚೇಸ್ ಮಾಡಿ 19.1 ಓವರ್​ಗಳಲ್ಲಿ ಗುರಿ ಮುಟ್ಟಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ನೈಟ್​ರೈಡರ್ಸ್ ತಂಡಕ್ಕೆ ನಾಯಕ ಗೌತಮ್ ಗಂಭೀರ್ ಆಸರೆಯಾದರು. []

IPL 2016: Rohit, Buttler power Mumbai Indians to 6-wicket win over KKR

64 ರನ್(52 ಎಸೆತಗಳು, 4X4, 1X6), ಕರ್ನಾಟಕದ ಮನೀಷ್ ಪಾಂಡೆ 52 ರನ್(29 ಎಸೆತಗಳು, 3 X4, 3 X6, ಆಂಡ್ರೆ ರಸೆಲ್ 36 ರನ್(17 ಎಸೆತಗಳು, 1‍X4, 4X6) ನೆರವಿನಿಂದ 5 ವಿಕೆಟ್​ಗೆ 187 ರನ್ ಗಳಿಸಿತು. ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.[ಅಂಕ ಪಟ್ಟಿ]

ನಾಯಕ ರೋಹಿತ್ ಶರ್ಮ ಅಜೇಯ 84ರನ್(54 ಎಸೆತಗಳು, 10X4, 2X6) ಹಾಗೂ ಇಂಗ್ಲೆಂಡಿನ ಜೋಸ್ ಬಟ್ಲರ್ 41 ರನ್(22 ಎಸೆತಗಳು, 3‍X4, 3X6) ಗಳಿಸಿದರು. [ಐಪಿಎಲ್ ಗೂ ಮುನ್ನ ಬಿಸಿಸಿಐ ಕಟ್ಟಿದ ತೆರಿಗೆ ಎಷ್ಟು?]

ರೋಹಿತ್-ಬಟ್ಲರ್ ಜೋಡಿ 4ನೇ ವಿಕೆಟ್​ಗೆ 40 ಎಸೆತಗಳಲ್ಲಿ 66 ರನ್ ಪೇರಿಸಿ, ಮುಂಬೈ ತಂಡಕ್ಕೆ 6 ವಿಕೆಟ್​ಗಳ ಗೆಲುವು ದಾಖಲಿಸಲು ನೆರವಾದರು. [ಸನ್ ರೈಸರ್ಸ್ ಮೇಲೆ ಆರ್ ಸಿಬಿ ಸವಾರಿ!]

ಆದರೆ, ರೋಹಿತ್ ಅಬ್ಬರದ ಜೊತೆಗೆ ರಿಕಿ ಪಾಂಟಿಂಗ್ ಅವರ ಸೂಚನೆ ಮೇರೆಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನ್ಯೂಜಿಲೆಂಡ್ ನ ಆಲ್ ರೌಂಡರ್ ಮಿಚೆಲ್ ಮೆಕ್ಲಿನಘನ್ 8 ಎಸೆತ ಗಳಲ್ಲಿ 3 ಸಿಕ್ಸರ್ ಇದ್ದ 20 ರನ್ ಚೆಚ್ಚಿದ್ದು ಉಪಯೋಗಕ್ಕೆ ಬಂತು.[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

ಭೂಕಂಪ, ಕೋತಿ ಕಾಟ: ಮ್ಯಾನ್ಮಾರ್​ನಲ್ಲಿ ಪ್ರಬಲ ಭೂಕಂಪವಾದ ಬೆನ್ನಲ್ಲೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿರುವ ಪ್ರೆಸ್ ಬಾಕ್ಸ್​ಗೂ ಕಂಪನ ಅನುಭವವಾಯಿತು. ಸ್ಟೇಡಿಯಂನ 4ನೇ ಅಂತಸ್ತಿನಲ್ಲಿರುವ ಪ್ರೆಸ್ ಬಾಕ್ಸ್​ನಲ್ಲಿ ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪತ್ರಕರ್ತರು ವರದಿ ಮಾಡುತ್ತಿದ್ದರು. [ವಿಶ್ವ ದಾಖಲೆ ಸ್ಥಾಪಿಸಿದ ವೇಗಿ ಡ್ವಾಯ್ನೆ ಬ್ರಾವೋ]

ಇದಲ್ಲದೆ ಪಂದ್ಯದ ನಡುವೆ ಪ್ರೇಕ್ಷಕರ ಗ್ಯಾಲರಿಯೊಂದಕ್ಕೆ ಕೋತಿಯೊಂದು ನುಗ್ಗಿ ಗಲಾಟೆ ಮಾಡತೊಡಗಿತ್ತು. ಕೋತಿಯನ್ನು ಹಿಡಿದು ಸರಿಪಡಿಸುವಷ್ಟರಲ್ಲಿ ಬಿಳಿಬಟ್ಟೆ ತೊಟ್ಟ ಪೊಲೀಸರು ಸಾಕು ಸಾಕಾಯಿತು. ಈ ಎಲ್ಲಾ ಚಿತ್ರಗಳು ಗ್ಯಾಲರಿಯಲ್ಲಿವೆ ನೋಡಿ...

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X