ಕ್ರಿಕೆಟರ್ ರಾಬಿನ್, ಟೆನಿಸ್ ಆಟಗಾರ್ತಿ ಶೀತಲ್ ಮದುವೆ

By:
Subscribe to Oneindia Kannada

ಬೆಂಗಳೂರು, ಫೆ. 19: ಟೀಂ ಇಂಡಿಯಾ ಹಾಗೂ ಕರ್ನಾಟಕ ತಂಡದ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಟೆನಿಸ್ ಆಟಗಾರ್ತಿ, ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ಮಾರ್ಚ್ 3ರಂದು ಮದುವೆಯಾಗಲಿದ್ದಾರೆ.

30 ವರ್ಷದ ಉತ್ತಪ್ಪ, ಮಾಜಿ ಟೆನಿಸ್ ಆಟಗಾರ್ತಿ ಶೀತಲ್​ರನ್ನು ಈ ವರ್ಷವೇ ವರಿಸುವುದಾಗಿ ಜನವರಿಯಲ್ಲೇ ಹೇಳಿದ್ದರು. ಅವರಿಬ್ಬರ ನಿಶ್ಚಿತಾರ್ಥ ಮಾರಿಷಸ್​ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್​ನಲ್ಲಿ ಪ್ರಕಟಿಸಿದ್ದರು. [ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]

Cricketer Robin Uthappa and Tennis ace Sheethal Goutham to get marry on March 03, 2016

ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಮಾರಿಷಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡುತ್ತಿದ್ದಾರೆ.

ವರುಣ್ ಅರೋನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ (ನಿಶ್ಚಿತಾರ್ಥ ಘೋಷಣೆ), ಸುರೇಶ್ ರೈನಾ, ಮೋಹಿತ್ ಶರ್ಮ (ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗ ರಾಬಿನ್ ಉತ್ತಪ್ಪ ಸರದಿ.

With my valentine ❤#love#peace#joy

A photo posted by Robbie Uthappa (@ruthappa) on

English summary
Cricketer Robin Uthappa and Tennis ace Sheethal Goutham are getting married on March 03. We connected because both of us are sportspersons and have been seeing each other since 2013 said Robin.
Please Wait while comments are loading...