ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ 2ನೇ ದಿನ: ಕರ್ನಾಟಕ 350 ಆಲೌಟ್, ವಿದರ್ಭ 172/2

By Mahesh

ಬೆಂಗಳೂರು, ಅ.16: ವಿದರ್ಭ ವಿರುದ್ಧದ ರಣಜಿ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ಅವರ ಆಕರ್ಷಕ ಶತಕ ಸಿಡಿಸಿದ್ದಾರೆ. ರಾಬಿನ್ ಉತ್ತಪ್ಪ, ಕರುಣ್ ನಾಯರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 350 ರನ್ ಗಳಿಸಿ ಆಲೌಟ್ ಆಗಿದೆ. ಎರಡನೇ ದಿನದ ಅಂತ್ಯಕ್ಕೆ ನಿಧಾನಗತಿಯಲ್ಲಿ ಚೇಸ್ ಮಾಡಿದ ವಿದರ್ಭ 172/2 ಸ್ಕೋರ್ ಮಾಡಿದೆ.

ವಿದರ್ಭ ಪರ ಕರ್ನಾಟಕದಿಂದ ವಲಸೆ ಹೋಗಿರುವ ಗಣೇಶ್ ಸತೀಶ್ ಅವರು 81ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ವಾಸೀಂ ಜಾಫರ್ 68ರನ್ ಗಳಿಸಿ ಔಟಾದರು. ತಮಿಳುನಾಡಿನಿಂದ ವಲಸೆ ಬಂದಿರುವ ಎಸ್ ಬದರೀನಾಥ್ ಅವರು 21 ರನ್ ಗಳಿಸಿ ಆಡುತ್ತಿದ್ದಾರೆ. 2 ದಿನ ಬಾಕಿ ಇದ್ದು, ವಿದರ್ಭ 178ರನ್ ಹಿಂದಿದೆ.

Ganesh Satish


2014ರ ರಣಜಿ ಋತುವಿನಲ್ಲಿ ಕರ್ನಾಟಕ ಪರ ಆಡಿದ್ದ ಗಣೇಶ್ ಸತೀಶ್ ಅವರು ಕಳೆದ ರಣಜಿ ಫೈನಲ್ ನಲ್ಲಿ ಕರ್ನಾಟಕ ಪರ ಶತಕ ಬಾರಿಸಿದ್ದರು. ಈಗ ವಿದರ್ಭ ಪರ ಎರಡನೇ ವಿಕೆಟ್ ಗೆ ವಾಸಿಂ ಜಾಫರ್ ಜೊತೆ 117ರನ್ ಸೇರಿಸಿ ವಿದರ್ಭಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ವಿದರ್ಭ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡ 102.4 ಓವರ್ ಗಳಲ್ಲಿ 350 ಸ್ಕೋರ್ ಮಾಡಿದೆ. ವಿದರ್ಭ ಪರ ಆರ್ ಡಿ ಠಾಕೂರ್ ಅವರು 4 ವಿಕೆಟ್ ಪಡೆದರೆ, ಬಂಡಿವಾರ್ 2, ಎಸ್ ಬಿ ವಾಘ್, ಫಜಲ್, ವಾಖರೆ ಅವರು ತಲಾ 1 ವಿಕೆಟ್ ಪಡೆದರು.
Ranji Trophy: Manish Pandey hits ton, KL Rahul fails

ಕೆಎಲ್ ರಾಹುಲ್ ವಿಫಲ: ತಂಡದ ಮೊತ್ತ 49ರನ್ ಆಗುವಷ್ಟರಲ್ಲೇ 21 ರನ್ ಗಳಿಸಿದ್ದ ಕೆಎಲ್ ರಾಹುಲ್ ಅವರು ಫಜಲ್ ಗೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಉತ್ತಮ ತಯಾರಿ ನಡೆಸಲು ಯೋಜಿಸಿದ್ದ ರಾಹುಲ್ ಗೆ ನಿರಾಶೆಯಾಗಿದೆ.

ರಾಬಿನ್ ಉತ್ತಪ್ಪ 59ರನ್ ಗಳಿಸಿ ತಂಡಕ್ಕೆ ಬಲ ತಂದರು. ಉತ್ತಮವಾಗಿ ಆಡುತ್ತಿದ್ದ ಸಮರ್ಥ್ 20ರನ್ ಗಳಿಸಿ ಔಟಾದರು. ಉತ್ತಪ್ಪ ಔಟಾದಾಗ ತಂಡದ ಮೊತ್ತ 3/118 ಆಗಿತ್ತು.

ಕರುಣ್ ನಾಯರ್ 58 ರನ್ ಗಳಿಸಿ ಮನೀಶ್ ಪಾಂಡೆ 104 ರನ್ (163 ಎಸೆತ, 13x4, 1x6, 211 ನಿಮಿಷ) ಸಾಥ್ ನೀಡಿದರು. ಮೊದಲ ಇನಿಂಗ್ಸ್ 89.5 ಓವರ್‌ಗಳಲ್ಲಿ 6 ವಿಕೆಟ್‌ಗೆ 298 ಮೊದಲ ದಿನದ ಅಂತ್ಯಕ್ಕೆ ಗಳಿಸಿದ್ದ ಕರ್ನಾಟಕ ಎರಡನೇ ದಿನದ ಆರಂಭದಲ್ಲೇ ವಿಕೆಟ್ ಕಳೆದುಕೊಂಡು 350 ರನ್ನಿಗೆ ಆಲೌಟ್ ಆಗಿದೆ.

Wasim Jaffer


ಕರ್ನಾಟಕ: ವಿನಯ್ ಕುಮಾರ್ (ನಾಯಕ), ಸಿಎಂ ಗೌತಮ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಸಮರ್ಥ್ ಆರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಎಸ್ ಅರವಿಂದ್, ಮಿಥುನ್, ಜೆ ಸುಚಿತ್.

ವಿದರ್ಭ: ಎಸ್ ಬದ್ರಿನಾಥ್ (ನಾಯಕ), ಗಣೇಶ್ ಸತೀಶ್, ವಾಸಿಂ ಜಾಫರ್, ಶಲಭ್ ಶ್ರೀವಾಸ್ತವ, ಸ್ವಪ್ನಿಲ್ ಬಂಡಿವರ್, ಆದಿತ್ಯ ಶಾನ್​ವಾರ್, ರವಿ ಠಾಕೂರ್, ಜಿತೇಶ್ ಶರ್ಮ(ವಿಕೆಟ್ ಕೀಪರ್), ಆದಿತ್ಯ ಸರ್​ವಾತೆ, ಶ್ರೀಕಾಂತ್ ವಾಘ್, ಅಕ್ಷರ್ ವಾಖರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X