ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಕರ್ನಾಟಕಕ್ಕೆ ಗೆಲುವು ತಪ್ಪಿಸಿದ ದೆಹಲಿ, ಪಂದ್ಯ ಡ್ರಾ

By Mahesh

ಹುಬ್ಬಳ್ಳಿ, ನ.26: ಇಲ್ಲಿನ ರಾಜನಗರ ಮೈದಾನದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಹಾಗೂ ದೆಹಲಿ ವಿರುದ್ಧದ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ.

ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ರಣಜಿ ದಾಖಲೆಯನ್ನು ಕರ್ನಾಟಕದ ರಾಬಿನ್ ಉತ್ತಪ್ಪ ಅವರು ಸಮಗಟ್ಟಿದ್ದು, ದೆಹಲಿ ಆಟಗಾರರ ಹೋರಾಟ ಪಂದ್ಯದ ಮುಖ್ಯಾಂಶವಾಗಿತ್ತು.

ಗುರುವಾರದಂದು ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದ ವಿನಯ್ ಪಡೆಗೆ ದೆಹಲಿ ಆಟಗಾರ ನಿತೀಶ ರಾಣಾ ಮತ್ತು ಧ್ರುವ ಶೋರೆ ಶತಕ ಗಳಿಸಿ ಗೆಲುವಿನ ಆಸೆಗೆ ತಣ್ಣಿರೆರಚಿದರು.

3ನೇ ದಿನವಾದ ಬುಧವಾರ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 301 ರನ್‌ಗೆ ಆಲೌಟಾಯಿತು. 241 ರನ್ ಹಿನ್ನಡೆ ಅನುಭವಿಸಿದ್ದ ಫಾಲೋ-ಆನ್‌ಗೆ ಸಿಲುಕಿತ್ತು. ಗುರುವಾರದಂದು 92 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ದೆಹಲಿ ತಂಡವು 290 ರನ್ ಗಳಿಸಿತು.

ಮುಂದಿನ ಕರ್ನಾಟಕ ತಂಡವು ಪ್ರಸಕ್ತ ಸಾಲಿನ ತನ್ನ ಕೊನೆಯ ಲೀಗ್ ಪಂದ್ಯವನ್ನು ಪುಣೆಯಲ್ಲಿ ಮಹಾರಾಷ್ಟ್ರ ತಂಡದ ಸೆಣಸಲಿದೆ. ದೆಹಲಿ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯಿಂದ 3 ಅಂಕಗಳನ್ನು ಪಡೆದಿದ್ದು, ಒಟ್ಟು ತನ್ನ ಅಂಕಗಳನ್ನು 24 ಕ್ಕೆ ಹೆಚ್ಚಿಸಿಕೊಂಡಿದೆ. ಚಿತ್ರಗಳು: ಶಂಭು, ಹುಬ್ಬಳ್ಳಿ

ದೆಹಲಿ ತಂಡಕ್ಕೆ ಫಾಲೋ-ಆನ್

ದೆಹಲಿ ತಂಡಕ್ಕೆ ಫಾಲೋ-ಆನ್

ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ದೆಹಲಿ ತಂಡಕ್ಕೆ ಫಾಲೋ-ಆನ್ ನೀಡಿತ್ತು.

ಗೌತಮ್ ಗಂಭೀರ್ ಮತ್ತೆ ಸಿಡಿಯಲಿಲ್ಲ

ಗೌತಮ್ ಗಂಭೀರ್ ಮತ್ತೆ ಸಿಡಿಯಲಿಲ್ಲ

ಮೊದಲ ಇನಿಂಗ್ಸ್‌ನಲ್ಲಿ ಹೋರಾಟಕಾರಿ ಅರ್ಧಶತಕ ಸಿಡಿಸಿದ್ದ ದಿಲ್ಲಿ ತಂಡದ ನಾಯಕ ಗೌತಮ್ ಗಂಭೀರ್ ಅವರು 15ರನ್ ಮಾತ್ರ ಗಳಿಸಿ ಅರವಿಂದ್ ಶ್ರೀನಾಥ್ ಗೆ ಬಲಿಯಾದರು. ಉನ್ಮುಕ್ತ್ ಚಂದ್ ಕೂಡಾ ಶ್ರೀನಾಥ್ ಗೆ ವಿಕೆಟ್ ಒಪ್ಪಿಸಿದರು. ಅದರೆ, ಧ್ರುವ್ ಮತ್ತು ನಿತಿಶ್ ಅವರು 240ರನ್ ಗಳ ಜೊತೆಯಾಟ ಮೂಲಕ ಕರ್ನಾಟಕಕ್ಕೆ ಗೆಲುವು ತಪ್ಪಿಸಿದರು.

ಸ್ಕೋರ್ ವಿವರ

ಸ್ಕೋರ್ ವಿವರ

ಕರ್ನಾಟಕ ಪ್ರಥಮ ಇನ್ನಿಂಗ್ಸ್: 542 ರನ್
ದೆಹಲಿ ಪ್ರಥಮ ಇನ್ನಿಂಗ್ಸ್: 104.1 ಓವರ್‌ಗಳಲ್ಲಿ 301 ರನ್‌ಗೆ ಆಲೌಟ್
ದೆಹಲಿ ದ್ವಿತೀಯ ಇನ್ನಿಂಗ್ಸ್ : 92 ಓವರ್ಸ್ 2 ವಿಕೆಟ್ ಗಳಲ್ಲಿ 290ರನ್

ಫಲಿತಾಂಶ: ಪಂದ್ಯ ಡ್ರಾ, ಕರ್ನಾಟಕಕ್ಕೆ 3 ಅಂಕ, ದೆಹಲಿಗೆ 1.

ಫಲಿತಾಂಶ: ಪಂದ್ಯ ಡ್ರಾ, ಕರ್ನಾಟಕಕ್ಕೆ 3 ಅಂಕ, ದೆಹಲಿಗೆ 1.

(ರಾಬಿನ್ ಉತ್ತಪ್ಪ 148, ಮಾಯಾಂಕ್ ಅಗರವಾಲ್ 118, ಮನೀಶ್ ಪಾಂಡೆ 81, ವಿನಯ್ ಕುಮಾರ್ 50, ಪ್ರದೀಪ್ ಸಂಗ್ವಾನ್ 102/3, ನವದೀಪ್ 85/3)
(ಗೌತಮ್ ಗಂಭೀರ್ 75, ವೈಭವ್ ರಾವಲ್ 54, ಮನನ್ ಶರ್ಮ 56, ಮಿಥುನ್, ಎ ಶ್ರೀನಾಥ್, ಶರತ್, ಶ್ರೇಯಸ್ ತಲಾ 2 ವಿಕೆಟ್, ಕರುಣ್, ವಿನಯ್ ತಲಾ 1 ವಿಕೆಟ್)
(ಧ್ರುವ್ 107, ನಿತಿಶ್ 132, ಎ ಶ್ರೀನಾಥ್ 2 ವಿಕೆಟ್ )

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X