ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಮಗ ಸಮಿತ್ ಸಕತ್ ಬ್ಯಾಟಿಂಗ್

By Mahesh

ಬೆಂಗಳೂರು, ಸೆಪ್ಟೆಂಬರ್ 01: ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಅವರು ಕೂಡಾ ಕ್ರಿಕೆಟ್ ಅಂಗಳದಲ್ಲಿ ತಮ್ಮ ಛಾಪು ಮೂಡಿಸಲು ಆರಂಭಿಸಿದ್ದಾರೆ. 12 ವರ್ಷ ವಯೋಮಿತಿಯೊಳಗಿನ ತಂಡದ ಪರ ಆಡುತ್ತಾ ಆಕರ್ಷಕ ಅರ್ಧ ಶತಕ ಸಿಡಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಗೋಪಾಲನ್ ಕ್ರಿಕೆಟ್ ಚಾಲೆಂಜ್ ಕಪ್ 2015 12 ವರ್ಷ ವಯೋಮಿತಿಯೊಳಗಿನ ಪಂದ್ಯವೊಂದರಲ್ಲಿ ಸೋಮವಾರ (ಆಗಸ್ಟ್ 31) ಸಮಿತ್ ಅವರು 77ರನ್ ಗಳಿಸಿ ತಮ್ಮ ತಂಡಕ್ಕೆ ಜಯ ತಂದಿತ್ತರು.

ಸೈಂಟ್ ಜಾನ್ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 9 ವರ್ಷದ ಸಮಿತ್ ಅವರು ಅಜೇಯ 77 ರನ್ ಗಳಿಸಿ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್ ತಂಡ 16 ಓವರ್ ಗಳಲ್ಲಿ 210 ಬೃಹತ್ ಮೊತ್ತ ಪೇರಿಸಲು ನೆರವಾದರು.

Rahul Dravid's 9-year-old son Samit

ಸಮಿತ್ ಅವರ ತಂಡದ ಬೃಹತ್ ಮೊತ್ತಕ್ಕೆ ಸಮನಾದ ಪ್ರತಿಸ್ಪರ್ಧೆ ಒಡ್ಡಲಾಗದ ಎದುರಾಳಿ ತಂಡವಾದ ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್ 16 ಓವರ್ ಗಳಲ್ಲಿ 96ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ಮಲ್ಯ ಅದಿತಿ ತಂಡ 114ರನ್ ಗಳ ಭಾರಿ ಗೆಲುವು ಸಾಧಿಸಲು ಸಮಿತ್ ಅವರ ಆಟ ನೆರವಾಯಿತು. ಅಕ್ಟೋಬರ್ 11 ರಂದು 10ನೇ ವಸಂತಕ್ಕೆ ಕಾಲಿರಿಸಲಿರುವ ಸಮಿತ್ ಗೆ ಅಪ್ಪ ದ್ರಾವಿಡ್ ರಂತೆ ಕ್ರಿಕೆಟ್ ಆಟವೆಂದರೆ ಬಲು ಪ್ರೀತಿ.

ಸಮಿತ್ ಅವರಲ್ಲದೆ ಮಲ್ಯ ಅದಿತಿ ಸ್ಕೂಲ್ ಪರ ಜೊಹಾನ್ ಅವರು 91 ರನ್ ಹೊಡೆದು ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಭಾರತ ಎ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸಮಿತ್ ಹಾಗೂ ಅನ್ವಯ್. ಕಳೆದ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಂದರ್ಭದಲ್ಲಿ ಇಬ್ಬರು ಮಕ್ಕಳು ಕೂಡಾ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆ ಆಟವಾಡುತ್ತಿದ್ದರು.

Rahul Dravid's 9-year-old son Anvay

ರಾಜಸ್ಥಾನ್ ತಂಡದ ಗುರುವಾಗಿರುವ ದ್ರಾವಿಡ್ ಅವರು ತಮ್ಮ ಮಕ್ಕಳನ್ನು ಕ್ರಿಕೆಟ್ ಮೈದಾನಕ್ಕೆ ಕರೆ ತಂದು ಅಭ್ಯಾಸಕ್ಕೆ ತೊಡಗಿಸುವುದನ್ನು ಕಾಣಬಹುದು. 2012ರಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದ್ರಾವಿಡ್ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು.

ಗೋಪಾಲನ್ ಕ್ರಿಕೆಟ್ ಚಾಲೆಂಜ್ ಟೂರ್ನಮೆಂಟ್ ಆಗಸ್ಟ್ 31ರಂಡು ಆರಂಭವಾಗಲಿದ್ದು ಸೆಪ್ಟೆಂಬರ್ 5ಕ್ಕೆ ಕೊನೆಗೊಳ್ಳಲಿದೆ. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಅಂಡರ್ 12 ಹಾಗೂ ಅಂಡರ್ 14ಕೆಟಗರಿಯ 23 ತಂಡಗಳು ಪಾಲ್ಗೊಂಡಿವೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X