ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಗೆ ಎರಡನೇ ಬಾರಿಗೆ ಗೌರವ ಡಾಕ್ಟರೇಟ್

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ 2017ನೇ ಸಾಲಿನ ಗೌರವ ಡಾಕ್ಟರೇಟ್‌ ಗೆ ಆಯ್ಕೆ ಮಾಡಲಾಗಿದೆ.

By Mahesh

ಬೆಂಗಳೂರು, ಜನವರಿ 25: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ 2017ನೇ ಸಾಲಿನ ಗೌರವ ಡಾಕ್ಟರೇಟ್‌ ಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ವಿವಿಯೊಂದರಿಂದ ಎರಡನೇ ಬಾರಿಗೆ ಈ ರೀತಿ ಗೌರವಕ್ಕೆ ದ್ರಾವಿಡ್ ಪಾತ್ರರಾಗುತ್ತಿದ್ದಾರೆ.

2014ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ರಾಹುಲ್ ದ್ರಾವಿಡ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜತೆಗೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಎರಡನೇ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ಅವರನ್ನು ಗೌರವಿಸಲಾಗಿತ್ತು.

Rahul Dravid chosen for honorary doctorate by Bangalore University

ಬೆಂಗಳೂರು ವಿಶ್ವವಿದ್ಯಾಲಯದ 52ನೇ ಘಟಿಕೋತ್ಸವ ಸಮಾರಂಭ ಜನವರಿ 27ರಂದು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವಿ ಉಪ ಕುಲಪತಿ ಬಿ ತಿಮ್ಮೇಗೌಡ ಹೇಳಿದ್ದಾರೆ.

ದ್ರಾವಿಡ್ : ಇಂದೋರ್ ನಲ್ಲಿ ಜನವರಿ 11ರಂದು ಜನಿಸಿದ ರಾಹುಲ್ ದ್ರಾವಿಡ್ ಅವರು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ. ಅದೇ ಕಾಲೇಜಿನಲ್ಲಿ ಎಂಬಿಎ ಓದುವಾಗ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕ್ರಿಕೆಟ್ ಜಗತ್ತಿನಲ್ಲಿ 'ದಿ ವಾಲ್' ಎಂದು ಹೆಮ್ಮೆಯಿಂದ ಎಲ್ಲರೂ ಗುರುತಿಸುತ್ತಾರೆ.

2012ರಲ್ಲಿ ನಿವೃತ್ತಿ ಹೊಂದಿದ ಬಳಿಕ ಯುವ ಕ್ರಿಕೆಟರ್ ಗಳಿಗೆ ತರಬೇತಿ ನೀಡುತ್ತಿದ್ದಾರೆ. ಸದ್ಯ ಭಾರತ ಎ ತಂಡ ಕೋಚ್ ಆಗಿದ್ದಾರೆ.

ರಾಹುಲ್ ದ್ರಾವಿಡ್ ಅವರ ತಾಯಿ ಪುಷ್ಪಾ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X