ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಕೊಹ್ಲಿ vs ರೈನಾ, ಇಬ್ಬರಿಗೂ ಗೆಲುವು ಅನಿವಾರ್ಯ

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಅಂಗಳದಲ್ಲಿ ತವರಿನ ಅಭಿಮಾನಿಗಳ ಬೆಂಬಲ ಪಡೆಯುವ ರೈನಾ ಪಡೆ ವಿರುದ್ಧ ಸತತ ಸೋಲು ಕಂಡಿರುವ ಕೊಹ್ಲಿ ಪಡೆ ಸೆಣೆಸಲಿದ್ದು, ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ.

By Mahesh

ರಾಜ್ ಕೋಟ್, ಏಪ್ರಿಲ್ 18: ಐಪಿಎಲ್ 10ರ ಮಹತ್ವದ ಪಂದ್ಯದಲ್ಲಿ ಸತತ ಸೋಲು ಅನುಭವಿಸಿರುವ ಎರಡು ತಂಡಗಳು ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಅಂಗಳದಲ್ಲಿ ಸೆಣೆಸಲಿವೆ. ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಪಡೆಗೆ ಗೆಲುವು ಅನಿವಾರ್ಯವಾಗಿದೆ.

ತವರಿನ ಅಭಿಮಾನಿಗಳ ಬೆಂಬಲ ಪಡೆಯುವ ಗುಜರಾತ್ ಹಾಗೂ ಬೆಂಗಳೂರು ತಂಡಗಳೆರಡರಲ್ಲೂ ಸ್ಫೋಟಕ ಬ್ಯಾಟ್ಸ್ ಮನ್ ಗಳನ್ನು ಕಾಣಬಹುದು. ಆದರೆ, ಪಂದ್ಯದಿಂದ ಪಂದ್ಯಕ್ಕೆ ಸೋಲಿನ ಕಹಿ ಮಾತ್ರ ಉಣಬೇಕಾಗಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

Preview: IPL 2017: Match 20: Gujarat Vs Bangalore on April 18

ಗುಜರಾತ್ ಲಯನ್ಸ್ : ಲಯನ್ಸ್‌ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಕಂಡಿದ್ದು, ಕಳೆದ ಐಪಿಎಲ್ ನಲ್ಲಿ ಮೂರನೇ ಸ್ಥಾನಕ್ಕೇರಿತ್ತು.

ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ಸುರೇಶ್ ರೈನಾ, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ಅರೋನ್ ಫಿಂಚ್‌, ಬ್ರೆಂಡನ್‌ ಮೆಕ್ಲಮ್‌ ಮತ್ತು ಡ್ವಾಯ್ನ್ ಸ್ಮಿತ್‌ ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆಯಿದೆ. ಬೌಲಿಂಗ್ ನಲ್ಲಿ ಪ್ರವೀಣ್ ಕುಮಾರ್, ಆಂಡ್ರ್ಯೂ ಟೈ, ಮುನಾಫ್ ಪಟೇಲ್, ಬಸಿಲ್ ತಾಂಪಿ, ಜಡೇಜ ಮಿಂಚಬೇಕಿದೆ.

ಆರ್ ಸಿಬಿ: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಮೇಲೆ ಹೆಚ್ಚಿನ ಅಲವಂಬನೆ ತಂಡಕ್ಕೆ ಮಾರಕವಾಗಿದೆ. ಕ್ರಿಸ್ ಗೇಲ್ ಆಡುವುದು ಅನುಮಾನ. ಮನ್ದೀಪ್ ಸಿಂಗ್, ಕೇದಾರ್ ಜಾಧವ್ ಸರಿಯಾಗಿ ಮಿಂಚಿಲ್ಲ. ವಾಟ್ಸನ್ ಹಾಗೂ ಸ್ಟುವರ್ಟ್ ಬಿನ್ನಿ ಆಲ್ ರೌಂಡರ್ ಆಟ ಪ್ರದರ್ಶಿಸುತ್ತಿಲ್ಲ.

ಬೌಲಿಂಗ್ ವಿಭಾಗದಲ್ಲಿ ಕರ್ನಾಟಕದ ಎಸ್‌. ಅರವಿಂದ್‌ ಮತ್ತು ಆ್ಯಡಮ್‌ ಮಿಲ್ನೆ ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಸ್ಪಿನ್ನರ್ ಗಳಾದ ಸ್ಯಾಮುಯಲ್ ಬದ್ರಿ, ಯಜುವೇಂದ್ರ ಚಾಹಲ್ ಜೊತೆಗೆ ಪವನ್ ನೇಗಿ ಸಮಯಕ್ಕೆ ತಕ್ಕ ಆಟ ಪ್ರದರ್ಶಿಸಬೇಕಿದೆ.

* 8 ಗಂಟೆಗೆ ಪಂದ್ಯ ಆರಂಭ, ಸೋನಿ ಸಿಕ್ಸ್, ಸೋನಿ ಮ್ಯಾಕ್ಸ್, ಸೋನಿ ಇಎಸ್ಪಿಎನ್ ನಲ್ಲಿ ನೇರ ಪ್ರಸಾರ.
* ಗುಜರಾತ್ ಮುಂದಿನ ಪಂದ್ಯ vs ಕೆಕೆಆರ್, ಕೋಲ್ಕತಾ, ಏಪ್ರಿಲ್ 21, 8ಗಂಟೆಗೆ.
* ಆರ್ ಸಿಬಿ ಮುಂದಿನ ಪಂದ್ಯ vs ಕೆಕೆಆರ್, ಕೋಲ್ಕತಾ, ಏಪ್ರಿಲ್ 23, 8ಗಂಟೆಗೆ.
(ಪಿಟಿಐ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X