ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫೈನಲಿಗೆ ಯಾರು ಎಂಟ್ರಿ, ಚೆನ್ನೈ? ಮುಂಬೈ?

By Mahesh

ಮುಂಬೈ, ಮೇ.18: ಐಪಿಎಲ್ 2015ರ ಲೀಗ್ ಹಂತ ರೋಚಕವಾಗಿ ಮುಗಿದಿದ್ದು, ಮಂಗಳವಾರದಿಂದ ಪ್ಲೇ ಆಫ್ ಪಂದ್ಯಗಳು ಆರಂಭಗೊಳ್ಳಲಿವೆ. ಮೊದಲ ಕ್ವಾಲಿಫೈಯರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಕಾದಾಡಲಿವೆ. ಈ ಪಂದ್ಯ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

ಐಪಿಎಲ್ ವಿಶೇಷ ಪುಟ | ಪ್ಲೇ ಆಫ್ ಪಂದ್ಯಗಳಿಗೆ ಫುಲ್ ಗೈಡ್

ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಉಂಟಾಗಿದೆ. ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕ್ಲಮ್ ಅವರು ಅಲಭ್ಯರಾಗಿದ್ದು, ನ್ಯೂಜಿಲೆಂಡ್ ತಂಡ ಸೇರಿದ್ದಾರೆ. ಮೇ.21ರಿಂದ ಕಿವೀಸ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇಬ್ಬರು ಮಾಜಿ ಚಾಂಪಿಯನ್ ಗಳ ಕದನ ಕುತೂಹಲಕಾರಿಯಾಗಿರುವ ನಿರೀಕ್ಷೆಯಿದೆ.

Preview: IPL 2015 Qualifier 1: Chennai Super Kings Vs Mumbai Indians

ಈ ಪಂದ್ಯದಲ್ಲಿ ಗೆದ್ದ ತಂಡ ಮೇ.24ರ ಫೈನಲ್ ಪ್ರವೇಶ ಪಡೆದರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಲಭ್ಯವಾಗಲಿದೆ. ಮೇ.20ರಂದು ಪುಣೆಯಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಲಿದೆ. ಈ ಪಂದ್ಯದ ವಿಜೇತರ ಜೊತೆ ಕ್ವಾಲಿಫೈಯರ್ 2 ನಲ್ಲಿ ಸೋತ ತಂಡ ಆಡುವ ಅವಕಾಶ ಮೇ.22ರಂದು ಸಿಗಲಿದೆ.

ಓಪನಿಂಗ್ ಬಲಾಬಲ: ಎರಡು ತಂಡಗಳಲ್ಲೂ ವಿಂಡೀಸ್ ಆಟಗಾರರು ಪ್ರಮುಖ ಪಾತ್ರವಹಿಸಬೇಕಿದೆ. ಮುಂಬೈ ಆರಂಭಿಕ ಅಟಗಾರರಾದ ಸಿಮನ್ಸ್ ಹಾಗೂ ಪಾರ್ಥೀವ್ ಪಟೇಲ್ ಉತ್ತಮ ಲಯದಲ್ಲಿದ್ದಾರೆ. ಅದರೆ, ಚೆನ್ನೈ ಈಗ ಮೆಕ್ಲಮ್ ಇಲ್ಲದೆ ಡ್ವಾಯ್ನೆ ಸ್ಮಿತ್ ಜೊತೆಗೆ ಟಚ್ ಕಳೆದುಕೊಂಡಿರುವ ಮೈಕ್ ಹಸ್ಸಿಯನ್ನು ಕಣಕ್ಕಿಳಿಸಬೇಕಿದೆ.

ಬೌಲಿಂಗ್ ಸಮಬಲ: ಮುಂಬೈ ಕಡೆ ಮಾಲಿಂಗ ಹಾಗು ಮಿಚೆಲ್ ಮೆಕ್ ಕ್ಲೆನಾಗನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕನ್ನಡಿಗರಾದ ಸ್ಪಿನ್ನರ್ ಜಗದೀಶ್ ಸುಚಿತ್ ಹಾಗೂ ವೇಗಿ ವಿನಯ್ ಕುಮಾರ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಹರ್ಭಜನ್ , ಪೊಲ್ಲಾರ್ಡ್ ಬೌಲಿಂಗ್ ಕೂಡಾ ಮಹತ್ವದ ಪಾತ್ರ ವಹಿಸಲಿದೆ.

Mumbai Indians

ಚೆನ್ನೈ ಈ ಬಾರಿ ಸ್ಪಿನ್ ಮೇಲೆ ಅವಲಂಬಿತವಾಗಿದೆ ಪವನ್ ನೇಗಿ, ಆರ್ ಅಶ್ವಿನ್, ಜಡೇಜ, ಅಗತ್ಯ ಬಿದ್ದರೆ ರೈನಾ.. ನೆಹ್ರಾ ಹಾಗೂ ಬ್ರಾವೋ ಆಟ ಹೇಗಿರುತ್ತೆ ಕಾದು ನೋಡಬೇಕಿದೆ.

ಮಧ್ಯಮ ಕ್ರಮಾಂಕ ಉತ್ತಮ: ಮುಂಬೈ ಕಡೆ ರೋಹಿತ್ ಶರ್ಮ, ಅಂಬಟಿ ರಾಯುಡು, ಪೊಲ್ಲಾರ್ಡ್ ಅಲ್ಲದೆ ಯುವ ಪ್ರತಿಭೆ ಪಾಂಡ್ಯ ಚೆನ್ನೈಗೆ ಮಾರಕವಾಗಬಲ್ಲರು. ಚೆನ್ನೈ ತಂಡದಲ್ಲಿ ಡುಫ್ಲೆಸಿಸ್, ರೈನಾ, ಜಡೇಜ ನೈಜ ಆಟ ಪ್ರದರ್ಶಿಸಬೇಕಿದೆ. ಧೋನಿ ಸಿಡಿದರೆ ಮುಂಬೈಗೆ ಕಷ್ಟ. ಅದರೆ, ರೋಹಿತ್ ಪಡೆಗೆ ತವರು ನೆಲದಲ್ಲಿ ಆಡುವ ಲಾಭವಿದೆ. ಚೆನ್ನೈಗೆ ಹೋಲಿಸಿದರೆ ಮುಂಬೈ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X