ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್, ಸ್ಪಿನ್ ಬಲವಿದ್ದರೆ ಗೆಲುವು!

ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಮೇ 28ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಉಭಯ ತಂಡಗಳಿಗೂ ತಮ್ಮ ತಂಡದ ಸ್ಪಿನ್ನರ್ ಗಳ ಬಲ ಪರೀಕ್ಷೆ ಮಾಡುವ ತವಕವಿದೆ.

By Mahesh

ಲಂಡನ್, ಮೇ 27: ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಮೇ 28ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಉಭಯ ತಂಡಗಳಿಗೂ ತಮ್ಮ ತಂಡದ ಸ್ಪಿನ್ನರ್ ಗಳ ಬಲ ಪರೀಕ್ಷೆ ಮಾಡುವ ತವಕವಿದೆ. ಮುಖ್ಯವಾಗಿ ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಲಿದ್ದು, ಅಶ್ವಿನ್ ಅವರ ಲಯ ಮುಂದಿನ ಪಂದ್ಯಗಳಿಗೆ ಮುನ್ನುಡಿ ಬರೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರ ಬಳಿಕ ಏಕದಿನ ಕ್ರಿಕೆಟ್ ಮಾದರಿಗೆ ಟೀಂ ಇಂಡಿಯಾದ ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಈ ಅಭ್ಯಾಸ ಪಂದ್ಯಗಳಿಗೆ ಅಧಿಕೃತ ಮಾನ್ಯತೆ ಇಲ್ಲದಿರುವುದರಿಂದ ತಂಡದಲ್ಲಿರುವ ಎಲ್ಲಾ 15 ಮಂದಿ ಆಟಗಾರರು ಆಡುವ ಅವಕಾಶ ಪಡೆಯಲಿದ್ದಾರೆ.[ಮನೀಶ್ ಗೆ ಅವಕಾಶ ಸಿಕ್ಕರೂ, ಕೈ ಕೊಟ್ಟ ಅದೃಷ್ಟ, ತಂಡದಿಂದ ಹೊರಕ್ಕೆ!]

Preview: Champions Trophy Warm-up Match: India Vs New Zealand on May 28

ಎರಡು ತಿಂಗಳುಗಳ ಕಾಲ ವಿಶ್ರಾಂತಿ ಪಡೆದ ಬಳಿಕ ಕಣಕ್ಕಿಳಿಯಲಿರುವ ಅಶ್ವಿನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ತಂಡದಲ್ಲಿ ಸ್ಥಾನಕ್ಕಾಗಿ ರವೀಂದ್ರ ಜಡೇಜ ಜತೆ ಪೈಪೋಟಿ ನಡೆಸಬೇಕಿದೆ. ಮಿಕ್ಕಂತೆ ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕೂಡಾ ಬಹುಕಾಲದ ನಂತರ ತಂಡ ಸೇರಿದ್ದಾರೆ.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]

2015ರಲ್ಲಿ ಸಿಡ್ನಿಯಲ್ಲಿ ವಿಶ್ವಕಪ್ ಸೆಮಿಫೈನಲ್ ನಂತರ ಶಮಿ, ಟೀಂ ಇಂಡಿಯಾ ಪರ ಆಡಿಲ್ಲ. ತಂಡದಲ್ಲಿ ಸ್ಥಾನಕ್ಕಾಗಿ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜತೆ ಶಮಿ ಸೆಣೆಸಬೇಕಿದೆ. ಬ್ಯಾಟ್ಸ್ ಮನ್ ಗಳ ಪೈಕಿ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಅದೃಷ್ಟದಿಂದ ಸ್ಥಾನ ಪಡೆದಿರುವ ಶಿಖರ್ ಧವನ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಬೌಲ್ಟ್, ಮಿಚೆಲ್ ಮೆಕ್ಲೆನಗನ್, ಟಿಮ್ ಸೌಥಿ ದಾಳಿ ಎದುರಿಸಲು ವಿರಾಟ್ ಕೊಹ್ಲಿ, ಧೋನಿ, ಕೇದಾರ್ ಜಾಧವ್ ಸಿದ್ದವಾಗಿದ್ದಾರೆ.[ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

ತಂಡಗಳು:
ಭಾರತ: Virat Kohli (captain), Shikhar Dhawan, Rohit Sharma, MS Dhoni (wicketkeeper), Yuvraj Singh, Kedar Jadhav, Ajinkya Rahane, Hardik Pandya, Ravichandran Ashwin, Ravindra Jadeja, Umesh Yadav, Bhuvneshwar Kumar, Mohammed Shami, Dinesh Karthik, Jasprit Bumrah.

ನ್ಯೂಜಿಲೆಂಡ್ : ane Williamson (captain), Tom Latham, Martin Guptill, Ross Taylor, Luke Ronchi (wicketkeeper), Neil Broom, Jimmy Neesham, Colin de Grandhomme, Corey Anderson, Mitchell Santner, Jeetan Patel, Adam Milne, Mitchell McClenaghan, Tim Southee, Trent Boult.

* ಮೇ 28ರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭ, ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರವಿರುತ್ತದೆ.
* ಭಾರತದ ಮುಂದಿನ ಪಂದ್ಯ ಬಾಂಗ್ಲಾದೇಶ ವಿರುದ್ಧ ಮೇ 30 (ಮಂಗಳವಾರ) (ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X