ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಹಾ ಎಂಥಾ ಚಿತ್ರ! ಚಾಯ್ ವಾಲ ಜತೆ ಮಾಜಿ ನಾಯಕ ಧೋನಿ

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸದ್ಯಕ್ಕೆ ದೂರವುಳಿದರೂ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಸುದ್ದಿಯಲ್ಲಿದ್ದಾರೆ. ಚಾಯ್ ವಾಲನೊಬ್ಬನನ್ನು ಹುಡುಕಿಕೊಂಡು ಹೋಗಿ ಆತನ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.

By Mahesh

ಬೆಂಗಳೂರು, ಮಾರ್ಚ್ 03: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸದ್ಯಕ್ಕೆ ದೂರವುಳಿದರೂ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಸುದ್ದಿಯಲ್ಲಿದ್ದಾರೆ.

ಜಾರ್ಖಂಡ್ ಪರ ವಿಜಯ್ ಹಜಾರೆ ಟ್ರೋಫಿ ಆಡಲು ಕೋಲ್ಕತಾಗೆ ಟ್ರೈನ್ ಹತ್ತಿ ಬಂದ ಧೋನಿ ಅವರು ಪಂದ್ಯ ನಂತರ ಐಷಾರಾಮಿ ಹೋಟೆಲ್ ಗೆ ಹೋಗದೆ ಅಕಾಡೆಮಿಯ ರೂಮಿನಲ್ಲೇ ಉಳಿದು ಸುದ್ದಿಯಾಗಿದ್ದರು.

ಈಗ ತಮ್ಮ ಹಳೆ ನೆನಪನ್ನು ಕೆದಕಿ ಚಾಯ್ ವಾಲನೊಬ್ಬನನ್ನು ಹುಡುಕಿಕೊಂಡು ಹೋಗಿ ಆತನ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ನಂತರ ಆತನಿಗೆ ಭರ್ಜರಿ ಡಿನ್ನರ್ ಕೊಡಿಸಿದ್ದಾರೆ.[ರೈಲಿನಲ್ಲಿ ಎಂಎಸ್ ಧೋನಿ ಪ್ರಯಾಣ ಏಕೆ? ಎಲ್ಲಿಗೆ?]

13 ವರ್ಷಗಳ ನಂತರ ಟ್ರೈನ್ ಜರ್ನಿ ಸುಖ ಅನುಭವಿಸಿದ ಧೋನಿ ಅವರು ತಾವು ಟಿಕೆಟ್ ಕಲೆಕ್ಟರ್ ಆಗಿದ್ದ ರೈಲು ನಿಲ್ದಾಣಗಳಿಗೆ ಭೇಟಿ ನೀಡಿದ್ದಲ್ಲದೆ, ಹಳೆ ಗೆಳೆಯರನ್ನು ಭೇಟಿ ಮಾಡುತ್ತಿದ್ದಾರೆ. ಈಡನ್ ಗಾರ್ಡನ್ ಮೈದಾನದ ಬಳಿಯ ಚಹಾ ಅಂಗಡಿ ಇಟ್ಟುಕೊಂಡಿರುವ ಥಾಮಸ್ ಎಂಬುವವರನ್ನು ಹುಡುಕಿಕೊಂಡು ಹೋಗಿದ್ದಾರೆ.

ಧೋನಿಗಾಗಿ ಕಾದು ಕುಳಿತ ಥಾಮಸ್

ಧೋನಿಗಾಗಿ ಕಾದು ಕುಳಿತ ಥಾಮಸ್

ಈಡನ್ ಗಾರ್ಡನ್ ಗೆ ಧೋನಿ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಸ್ಟೇಡಿಯಂನ ಹೊರಗೆ ಚಾಯ್ ವಾಲ ಥಾಮಸ್ ಕಾದು ಕುಳಿತ್ತಿದ್ದರು. ಪಂದ್ಯ ಮುಗಿದ ಬಳಿಕ ಹಳೆ ಗೆಳೆಯನನ್ನು ಭೇಟಿ ಮಾಡಿ ಆತ್ಮೀಯ ಅಪ್ಪುಗೆ ನೀಡಿದರು. ಥಾಮಸ್ ರನ್ನು ಗುರುತಿಸಿದ ಧೋನಿ, ರಾತ್ರಿ ಡಿನ್ನರ್ ಗೆ ಬರುವಂತೆ ಆಹ್ವಾನ ಇತ್ತರು. ಚಿತ್ರಕೃಪೆ: Dainik Bhaskar.

ಧೋನಿ ಜತೆ ಸೆಲ್ಫಿ

ಧೋನಿ ಜತೆ ಸೆಲ್ಫಿ

ಸ್ಟಾರ್ ಕ್ರಿಕೆಟರ್ ಧೋನಿ ಅವರ ಜತೆಗೆ ಚಾಯ್ ವಾಲ ಥಾಮಸ್ ಸೇರಿದಂತೆ ಹಳೆ ಗೆಳೆಯರು ಸೆಲ್ಫಿ ತೆಗೆದುಕೊಂಡರು. Image Courtesy: Dainik Bhaskar.

ಫುಟ್ ಪಾತ್ ನಲ್ಲಿ ಧೋನಿ

ಫುಟ್ ಪಾತ್ ನಲ್ಲಿ ಧೋನಿ

ಹಳೆ ಗೆಳೆಯರ ಜತೆ ಹರಟುತ್ತಾ, ಥಾಮಸ್ ಕೊಟ್ಟ ಚಹಾ ಕಪ್ ಹಿಡಿದು ಫುಟ್ ಪಾತ್ ಮೇಲೆ ಕುಳಿತ ಸರಳ ಕ್ರಿಕೆಟರ್ ಧೋನಿ.

ರೈಲ್ವೆ ದಿನಗಳ ನೆನಪು

ರೈಲ್ವೆ ದಿನಗಳ ನೆನಪು

ಖರಗ್ ಪುರ ಸ್ಟೇಶನ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ ದಿನಗಳಲ್ಲಿ ಸಹ ಉದ್ಯೋಗಿಗಳು, ಗೆಳೆಯರಾಗಿದ್ದವರೆಲ್ಲರನ್ನು ಕರೆಸಿಕೊಂಡು ಡಿನ್ನರ್ ನೀಡಿದ ಧೋನಿ.ಇವರೆಲ್ಲರ ಬಗ್ಗೆ ಧೋನಿ ಅವರ ಕುರಿತ ಚಿತ್ರ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿದೆ. Image Courtesy: Dainik Bhaskar.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X