ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ-ಸಾಕ್ಷಿ ಪುತ್ರಿ ಝೀವಾ ನೋಡಿ

By Mahesh

ರಾಂಚಿ, ಏ.7: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹಾಗೂ ಸಾಕ್ಷಿ ಅವರ ಪ್ರೇಮದ ಕುರುಹಾದ ಪುತ್ರಿ ಝೀವಾ ಮುದ್ದು ಮುಖ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳ ಕಣ್ಣಿಗೆ ಬಿದ್ದಿದೆ.

ಧೋನಿ ಮಗುವಿನೊಂದಿಗೆ ಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿತ್ತು. ಅದರೆ, ಅದು ತಪ್ಪು ಚಿತ್ರ ಧೋನಿ ಜೊತೆಗಿರುವ ಮಗು ಝೀವಾ ಅಲ್ಲ ಎಂದು ಸಾಕ್ಷಿ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಭಿಮಾನಿಗಳು ಹಾಗಾದರೆ ಝೀವಾ ಚಿತ್ರವನ್ನು ನೀವೆ ಪ್ರಕಟಿಸಿ ನಾವೆಲ್ಲ ಕಾತುರದಿಂದ ಕಾದಿದ್ದೇವೆ ಎಂದಿದ್ದರು. [ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಾಕ್ಷಿ ಏನೂ ಟ್ವೀಟ್ ಮಾಡಲು ಮುಂದಾಗಲಿಲ್ಲ. ಬದಲಿಗೆ ಅಪ್ಪನ ಎದೆಗೆ ಅಪ್ಪಿಕೊಂಡ ಮುದ್ದು ಮುಖದ ಝೀವಾ ಇದೀಗ ಲಭ್ಯವಾಗಿದೆ. [ಐಪಿಎಲ್ 2015(ಐಪಿಎಲ್ 8) ಮಾರ್ಗದರ್ಶಿ]

PHOTO: MS Dhoni with his little daughter Ziva at Ranchi airport

ಮಂಗಳವಾರ(ಏ.7) ಧೋನಿ ಅವರು ರಾಂಚಿಯ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುತ್ರಿಯನ್ನು ಎತ್ತಿಕೊಂಡು ಬರುವಾಗ ಮಾಧ್ಯಮ ಪ್ರತಿನಿಧಿಗಳು ಕೆಮರಾ ಜೂಮ್ ಮಾಡಿ ಝೀವಾ ಚಿತ್ರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. [ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

ಕಳೆದ ತಿಂಗಳು ಮಾರ್ಚ್ 2ರಂದು ರಾತ್ರಿ ಸಾಕ್ಷಿ ಸಿಂಗ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮ ಮಗಳ ಪುಟ್ಟ ಕೈ ಇರುವ ಫೋಟೋ ಹಾಕಿದ್ದರು. ಚಿತ್ರದಲ್ಲಿ ಮಗು ತನ್ನ ಎಡಗೈನಿಂದ ತಾಯಿ ಸಾಕ್ಷಿಯ ಕೈ ಹಿಡಿದುಕೊಂಡಿದೆ. ಅಲ್ಲದೇ ಸಾಕ್ಷಿ ಇದಕ್ಕೆ 'Bundle of Joy !! ಎಂದು ಹೆಸರು ನೀಡಿದ್ದರು.

ಏ.8ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿ ಪಂದ್ಯಗಳು ಆರಂಭಗೊಳ್ಳುವುದರಿಂದ ಧೋನಿ ಅವರು ಇದಕ್ಕೂ ಮುನ್ನ ಸಿಕ್ಕಿರುವ ಸಮಯವನ್ನೆಲ್ಲ ಪುತ್ರಿ ಜೊತೆಗಿದ್ದು ಕಳೆಯುತ್ತಿದ್ದಾರೆ. [8 ತಂಡಗಳ ನೂರೆಂಟು ಆಟಗಾರರು]

ಕೋಲ್ಕತ್ತಾದಲ್ಲಿ ಏ.8ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಏ.7ರಂದು ಸಂಜೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X