ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS
For Daily Alerts

ಸಚಿನ್, ದ್ರಾವಿಡ್ ವಿಕೆಟ್ ಪಡೆದಿದ್ದ ಸ್ಪಿನ್ನರ್ ಈಗ ಟ್ಯಾಕ್ಸಿ ಡ್ರೈವರ್

By Mahesh

ಸಿಡ್ನಿ, ಸೆಪ್ಟೆಂಬರ್ 01: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರ ವಿಕೆಟ್ ಪಡೆದಿದ್ದ ಪಾಕಿಸ್ತಾನದ ಆಫ್ ಸ್ಪಿನ್ನರ್ ಈಗ ಟ್ಯಾಕ್ಸಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಹೊಂದಿದ ಮೇಲೆ ಸ್ಪಿನ್ನರ್ ಅರ್ಷದ್ ಖಾನ್ ಟ್ಯಾಕ್ಸಿ ಚಾಲಕರಾಗಿರುವ ವಿಷಯ ಹೊರ ಬಂದಿದೆ.

ಪಾಕಿಸ್ತಾನದ ಆಫ್ ಸ್ಪಿನ್ನರ್ ಅರ್ಷದ್ ಖಾನ್ ಅವರು ಸಿಡ್ನಿಯಲ್ಲಿ ರೇಡಿಯೋ ಟ್ಯಾಕ್ಸಿ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನ ಪರ 9 ಟೆಸ್ಟ್ ಪಂದ್ಯ ಹಾಗೂ 58 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅರ್ಷದ್ ಆಡಿದ್ದಾರೆ. 1997 ರಿಂದ 2006 ತನಕ ಅರ್ಷದ್ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಆಡಿ 88 ವಿಕೆಟ್ ಪಡೆದುಕೊಂಡಿದ್ದಾರೆ.

ಸಚಿನ್ ವಿಕೆಟ್: 2006ರಲ್ಲಿ ಪೇಷಾವರ್ ನಲ್ಲಿ ನಡೆದ ಪಂದ್ಯದಲ್ಲಿ ತೆಂಡೂಲ್ಕರ್ ಅವರು 100ರನ್ ಗಳಿಸಿದ್ದಾಗ ಅರ್ಷದ್ ಅವರು ಎಲ್ ಬಿ ಬಲೆಗೆ ಕೆಡವಿದ್ದರು. 2005ರಲ್ಲಿ ಇನ್ಜಾಮಾಮ್ ಉಲ್ ಹಕ್ ಅವರ 100ನೇ ಟೆಸ್ಟ್ ಪಂದ್ಯದಲ್ಲಿ ಅರ್ಷದ್ ಬೌಲಿಂಗ್ ನಲ್ಲಿ 16 ರನ್ ಗಳಿಸಿದ್ದ ದ್ರಾವಿಡ್ ಅವರು ಯೂನಿಸ್ ಖಾನ್ ಗೆ ಕ್ಯಾಚಿತ್ತು ಔಟಾಗಿದ್ದರು.

Pakistani spinner who took Tendulkar, Dravid wickets, now drives taxi

ಫೇಸ್ ಬುಕ್ ಮೂಲಕ ತಿಳಿದ ವಿಷಯ: ಗಣೇಶ್ ಬಿರ್ಲೆ ಎಂಬುವರು 44 ವರ್ಷ ವಯಸ್ಸಿನ ಅರ್ಷದ್ ಅವರು ಸಿಡ್ನಿಯಲ್ಲಿ ಉಬರ್ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. ಅವರನ್ನು ನೋಡಿ ನನಗೆ ದುಃಖವಾಗಿದೆ ಎಂದು ಆಗಸ್ಟ್ 31ರಂದು ಬರೆದುಕೊಂಡಿದ್ದಾರೆ.

'ನಾನು ಟ್ಯಾಕ್ಸಿ ಬುಕ್ ಮಾಡಿದಾಗ ಈತನ ಬಗ್ಗೆ ಕುತೂಹಲ ಉಂಟಾಯಿತು. ಮಾತುಕತೆ ನಡೆಸುತ್ತಿದ್ದಂತೆ ಆತ ತನ್ನ ಪೂರ್ತಿ ಹೆಸರು ಹೇಳಿ ನಾನು ಲಾಹೋರ್ ಮೂಲದವನು, ಸಿಡ್ನಿಯಲ್ಲಿ ಕಾರು ಚಾಲನೆ ಮಾಡುತ್ತಿದ್ದೇನೆ ಎಂದು ಹೇಳಿದರು. ನಂತರ ನನಗೆ ಈತ ಪಾಕಿಸ್ತಾನ ಮಾಜಿ ಸ್ಪಿನ್ನರ್ ಎಂದು ತಿಳಿಯಿತು. ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಆಡಿದ ಅನುಭವವನ್ನು ಹಂಚಿಕೊಂಡರು'.

ಪೇಶಾವರ್ ಮೂಲದ ಅರ್ಷದ್ ಖಾನ್ ಅವರು 1999 ರಿಂದ 2005 ರ ತನಕ ಕ್ರಿಕೆಟ್ ಆಡಿದ್ದಾರೆ. ಜೇಮ್ಶೆಡ್ ಪುರ, ಜೈಪುರ್, ವಿಶಾಖಪಟ್ಟಣಂ, ಬೆಂಗಳೂರು, ಕೊಚ್ಚಿ, ಕಾನ್ಪುರ ಹಾಗೂ ದೆಹಲಿಯಲ್ಲಿ ಪಂದ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಭಾರತ ವಿರುದ್ಧ ಪಾಕಿಸ್ತಾನ 168ರನ್ ಗಳ ಜಯ ದಾಖಲಿಸಿದ ತಂಡದಲ್ಲಿ ಅರ್ಷದ್ ಕೂಡಾ ಇದ್ದರು.

Posted by Ganesh Birle on Monday, August 31, 2015

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X