ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ರಿದಿ ಜತೆ ಭಾರತಕ್ಕೆ ಯಾರ್ಯಾರು ಬಂದ್ರು?

ಕೋಲ್ಕತಾ, ಮಾರ್ಚ್, 13,:ಬಿಗಿ ಭದ್ರತೆ ನಡುವೆ ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ ಆಡಲು ಭಾರತಕ್ಕೆ ಬಂದಿಳಿದಿದೆ. ಶನಿವಾರ ರಾತ್ರಿ ಕೋಲ್ಕೋತಾ ವಿಮಾನ ನಿಲ್ದಾಣಕ್ಕೆ 27 ಸದಸ್ಯರನ್ನೊಳಗೊಂಡ ತಂಡ ಬಂದಿಳಿದಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಇನ್ನೊಂದೆಡೆ ಪಾಕ್‌ ಮಹಿಳಾ ತಂಡವೂ ಚೆನ್ನೈಗೆ ಬಂದಿಳಿದಿದೆ. ನಿಲ್ದಾಣದಿಂದ ಹೊರಬಂದ ಆಟಗಾರರು ತಮ್ಮನ್ನು ಸ್ವಾಗತಿಸಲು ಸೇರಿದ್ದ ಅಭಿಮಾನಿಗಳತ್ತ ಕೈಬೀಸಿದರು. ಬಳಿಕ ಪೊಲೀಸರು ಭಾರಿ ಬಿಗಿಭದ್ರತೆಯೊಂದಿಗೆ ಆಟಗಾರರನ್ನು ಎರಡು ಬಸ್‌ಗಳಲ್ಲಿ ಹೊಟೇಲ್‌ಗೆ ಕರೆದುಕೊಂಡು ಹೋದರು. ಸಿಐಎಸ್‌ಎಫ್‌ ಮತ್ತು ಬ್ಲಾಕ್‌ ಕಮಾಂಡೊಗಳನ್ನು ನಿಯೋಜಿಸಲಾಗಿತ್ತು.[ಪಾಕಿಸ್ತಾನ ಕೋಲ್ಕತಾಗೆ ಬಂದ್ರೆ ಈಡನ್‌ಗೆ 'ಗುದ್ದಲಿ' ಪೂಜೆ!]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ನಿಗದಿಯಂತೆ ಪಾಕ್‌ ತಂಡ ಬುಧವಾರವೇ ಭಾರತಕ್ಕೆ ಬರಬೇಕಿತ್ತು. ಆದರೆ ಭದ್ರತೆಯ ನೆಪವೊಡ್ಡಿ ಅಲ್ಲಿನ ಸರ್ಕಾರ ಆಟಗಾರರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಶನಿವಾರ ನಿಗದಿಯಾಗಿದ್ದ ಬಂಗಾಳ ಇಲೆವೆನ್‌ ಎದುರಿನ ಮೊದಲ ಅಭ್ಯಾಸ ಪಂದ್ಯ ಕೂಡ ರದ್ದಾಗಿತ್ತು. ಸೋಮವಾರ ನಡೆಯುವ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಶಾಹಿದ್‌ ಅಫ್ರಿದಿ ತಂಡ ಶ್ರೀಲಂಕಾವನ್ನು ಎದುರಿಸಿಲಿದೆ.

 ಮಾರ್ಚ್ 19ಕ್ಕೆ ಬಿಗ್ ಫೈಟ್

ಮಾರ್ಚ್ 19ಕ್ಕೆ ಬಿಗ್ ಫೈಟ್

ಭಾರತ ಮತ್ತು ಪಾಕಿಸ್ತಾನ ಮಾರ್ಚ್ 19 ರಂದು ಮುಖಾಮುಖಿಯಾಗಲಿವೆ. ಏಷ್ಯಾ ಕಪ್ ನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ ಇದೀಗ ಪಾಕಿಸ್ತಾನವನ್ನು ಎದುರಿಸಲಿದೆ.

 ಅಫ್ರಿದಿ ಧನ್ಯವಾದ

ಅಫ್ರಿದಿ ಧನ್ಯವಾದ

ಪಾಕಿಸ್ತಾನಕ್ಕಿಂತ ಹೆಚ್ಚಿನ ಪ್ರೀತಿ ನಮಗೆ ಭಾರತದಲ್ಲಿ ಸಿಕ್ಕಿದೆ ಎಂದು ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.

 ಪಾಕ್ ಪಂದ್ಯಗಳು

ಪಾಕ್ ಪಂದ್ಯಗಳು

ಭಾರತ (ಮಾರ್ಚ್‌ 19), ನ್ಯೂಜಿಲೆಂಡ್‌ (ಮಾ.22) ಮತ್ತು ಆಸ್ಟ್ರೇಲಿಯಾ (ಮಾ.25) ವಿರುದ್ಧ ಪಾಕಿಸ್ತಾನ ಆಡಲಿದೆ. ಭಾರತದ ವಿರುದ್ಧ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯ ಕೋಲ್ಕತಾಗೆ ಭದ್ರತೆಯ ಕಾರಣದಿಂದ ಶಿಫ್ಟ್ ಆಗಿತ್ತು.

ಮಲಿಕ್ ಆಗಮನ

ಮಲಿಕ್ ಆಗಮನ

ಪಾಕಿಸ್ತಾನದ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಶೋಯೆಬ್ ಮಲಿಕ್ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಪಾಕಿಸ್ತಾನ ಮಹಿಳಾ ತಂಡ

ಪಾಕಿಸ್ತಾನ ಮಹಿಳಾ ತಂಡ

ಚೆನ್ನೈ ವಿಮಾನ ನಿಲ್ದಾಣಕ್ಕೆ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡವು ಬಂದಿಳಿಯಿತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X