ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಿಗ್ಗಜ ಸಚಿನ್ ಬಾರಿಸಿದ್ದ ನೂರನೇ ಶತಕಕ್ಕೆ ಇಂದಿಗೆ 5 ವರ್ಷಗಳ ಸಂಭ್ರಮ

ಕ್ರಿಕೆಟ್ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್ ಅವರು ನಿರ್ಮಿಸಿದ್ದ ವಿಶ್ವದಾಖಲೆಯ ನೂರನೇ ಶತಕಕ್ಕೆ ಇಂದಿಗೆ (ಮಾ.16) ಐದು ವರ್ಷಗಳ ಸಂಭ್ರಮ.

ಮುಂಬೈ, ಮಾರ್ಚ್. 16 : ಕ್ರಿಕೆಟ್ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್ ಅವರು ನಿರ್ಮಿಸಿದ್ದ ವಿಶ್ವದಾಖಲೆಯ ನೂರನೇ ಶತಕಕ್ಕೆ ಇಂದಿಗೆ (ಮಾ.16) ಐದು ವರ್ಷಗಳ ಸಂಭ್ರಮ.

ಹೌದು, 2012 ಮಾರ್ಚ್‌ 16ರಂದು ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನೂರು ರನ್ ಬಾರಿಸುವ ಮೂಲಕ ತಮ್ಮ ಕ್ರಿಕೆಟ್ ಜೀವಮಾನದ ನೂರನೇ ಶತಕ(ಟೆಸ್ಟ್ ಮತ್ತು ಏಕದಿನ) ಸಿಡಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದರು. ಆ ದಾಖಲೆಗೆ ಇದೀಗ 5 ವರ್ಷಗಳು ಪೂರೈಸಿವೆ.[ ]

On this day, Sachin Tendulkar notched up century of tons


ಶೇರ್‌ ಏ ಬಾಂಗ್ಲಾ ಅಂತರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಶತಕ ಬಾರಿಸಿ ಈ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಅವರು 147 ಎಸೆತಗಳನ್ನು ಎದುರಿಸಿ 114ರನ್ ಗಳಿಸಿದ್ದರು.

24 ವರ್ಷಗಳ ಕ್ರಿಕೆಟ್‌ ಜೀವನದಲ್ಲಿ ಒಟ್ಟು 34,347 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 18,426, ಮತ್ತು ಟೆಸ್ಟ್‌ ನಲ್ಲಿ 15,921 ರನ್‌ ಬಾರಿಸಿರುವ ಸಚಿನ್‌, ಏಕದಿನ ಕ್ರಿಕೆಟ್‌ನಲ್ಲಿ 49 ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲಿ 51 ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

200 ರನ್ ಸಚಿನ್ ಅವರ ಬೆಸ್ಟ್ ಸ್ಕೋರ್ ಆಗಿದೆ. ಈ ಸಾಧನೆಯನ್ನು 2010 ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ನಲ್ಲಿ ಮಾಡಿದ್ದಾರೆ. ಇನ್ನು ಇವರು 2013 ನವೆಂಬರ್ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X