ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪರ ಅಭಿಮಾನ ಹೇಳಿಕೆ, ಅಫ್ರಿದಿಗೆ ನೋಟಿಸ್

By ರಮೇಶ್ ಬಿ

ಲಾಹೋರ್, ಮಾರ್ಚ್ 14: 'ಪಾಕಿಸ್ತಾನದಲ್ಲಿ ಸಿಗದ ಪ್ರೀತಿ ವಿಶ್ವಾಸ ಭಾರತದಲ್ಲಿ ಸಿಗುತ್ತದೆ' ಎಂದು ಹೇಳಿಕೆ ನೀಡಿ ತಾಯ್ನಾಡು ಪಾಕಿಸ್ತಾನಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆಂದು ಪಾಕ್ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಲಾಹೋರ್ ಹೈಕೋರ್ಟ್ ನಲ್ಲಿ ಪಿಟೀಷನ್ ಹಾಕಲಾಗಿದೆ. ಈ ಬಗ್ಗೆ ಉತ್ತರಿಸುವಂತೆ ವಕೀಲರೊಬ್ಬರು ಅಫ್ರಿದಿ ಹಾಗೂ ಪಿಸಿಬಿ ಮುಖ್ಯಸ್ಥ ಸೇಠಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

'ಶಾಹೀದ್ ಅಫ್ರಿದಿ ಅವರು ತಮ್ಮ ಹೇಳಿಕೆ ಮೂಲಕ ದೇಶದ ಮೇಲಿನ ಪ್ರೀತಿಯನ್ನು ಕುಗ್ಗಿಸಿದ್ದರಿಂದ ಪಾಕಿಸ್ತಾನ ಜನರ ಕ್ಷಮೆ ಕೇಳಬೇಕು ಹಾಗೂ ತಾವು ನೀಡಿದ್ದ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು' ಎಂದು ಲಾಹೋರಿನ ವಕೀಲ ಅಜಾರ್ ಸಿದ್ಧಿಕಿ ಅವರು ನೋಟಿಸಿನಲ್ಲಿ ಉಲ್ಲೇಖಿಸಿ ಅಫ್ರಿದಿ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪ್ರಮುಖರಾದ ಶರಿಯಾರ್ ಖಾನ್ ಹಾಗೂ ನಜಾಮ್ ಸೇಠಿ ಅವರಿಗೆ ಅವರಿಗೆ ಕಳುಹಿಸಿದ್ದಾರೆ.[ಭಾರತವನ್ನು ಹೊಗಳಿದ ಅಫ್ರಿದಿ ಮೇಲೆ ಮಿಯಾಂದಾದ್ ಗರಂ]

ಇದೇ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಳೆ ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಜಾವೇದ್ ಮಿಯಾಂದಾದ್ ಹಾಗೂ ಪಾಕ್ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ಮೋಹಿಸಿನ್ ಖಾನ್ ಅವರು ಅಫ್ರಿದಿಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. [ವಿಶ್ವ ಟ್ವೆಂಟಿ20 2016 ಟೂರ್ನಿಗೆ ಫುಲ್ ಗೈಡ್]

Controversy: Notice against Shahid Afridi for 'getting more love in India'

ಮಾರ್ಚ್ 13 ರಂದು ಭಾನುವಾರ ಕೋಲ್ಕತ್ತದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ನಮ್ಮ ದೇಶದಲ್ಲಿ ಸಿಗುದಷ್ಟು ಪ್ರೀತಿ ಭಾರತ ದೇಶದಲ್ಲಿ ಸಿಗುತ್ತಿದೆ ಹಾಗಾಗಿ ಭಾರತದಲ್ಲಿ ಆಡುವುದು ತಂಬ ಖುಷಿಯಾಗುತ್ತದೆ' ಎಂದು ಹೇಳಿದ್ದರು.[ಅಫ್ರಿದಿ ಜತೆ ಭಾರತಕ್ಕೆ ಯಾರ್ಯಾರು ಬಂದ್ರು?]

ಇದರಿಂದ ಪಾಕಿಸ್ತಾನ ಮಾಜಿ ಆಟಗಾರರಿಂದ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದು ಈಗ ಆಫ್ರಿದಿ ಅವರಿಗೆ 15 ದಿನಗಳ ಒಳಗಾಗಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ವಕೀಲ ಸಿದ್ಧಿಕಿ ಲಾಹೋರ್ ಕೈಕೋರ್ಟ್ ಗೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಅಬುಧಾಬಿಯಿಂದ ಮಾರ್ಚ್ 12 ರಂದು ಶನಿವಾರ ಸಂಜೆ ಕೋಲ್ಕತ್ತಗೆ ಆಗಮಿಸಿತ್ತು. ಮರುದಿನವೇ ಪಾಕ್ ಕ್ರಿಕೆಟ್ ತಂಡದ ನಾಯಕ ಭಾರತದ ಮೇಲಿನ ಪ್ರೀತಿಯ ಹೇಳಿಕೆಯನ್ನು ನೀಡಿದ್ದರು ಆದರೆ, ಈಗ ಅದು ವಿವಾದಕ್ಕೆ ಕಾರಣವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರ್ಚ್ 14 ರಂದು ಈಡನ್ ಗಾರ್ಡನ್ ಮೈದಾನದಲ್ಲಿ ಶೀಲಂಕಾ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

ಮುಖ್ಯವಾದ ಪಂದ್ಯಗಳು ಪ್ರಾರಂಭವಾಗುವುದಕ್ಕೆ ಮುನ್ನವೇ ಈ ವಿವಾದಕ್ಕೆ ಗುರಿಯಾಗಿರುವ ಆಫ್ರಿದಿ ಈ ವಿಶ್ವ ಟಿ-20 ಕಪ್ ಟೂರ್ನಿಯಲ್ಲಿ ಯಾವು ರೀತಿಯಲ್ಲಿ ಪ್ರದರ್ಶನ ನೀಡುತ್ತಾರೆಂದು ಕಾದು ನೋಡಬೇಕಿದೆ. (ಐಎಎನ್ಎಸ್)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X