ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಪಾಕ್ ಕ್ರಿಕೆಟ್ ಸರಣಿಗೆ ಮೋದಿ ಸರಕಾರ ನಕಾರ

ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಆಟಗಾರರಿಗೆ ಭಾರತದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಲಾಗಿದೆ. ಅಲ್ಲದೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಸದ್ಯಕ್ಕೆ ಸಾಧ್ಯವಿಲ್ಲ

By Mahesh

ನವದೆಹಲಿ, ಮೇ 29: ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಆಟಗಾರರಿಗೆ ಭಾರತದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಲಾಗಿದೆ. ಅಲ್ಲದೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಸೋಮವಾರ(ಮೇ 29) ದಂದು ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯ ಚಾಂಪಿಯನ್ಸ್ ಟ್ರೋಫಿ 2017ರ ಲೀಗ್ ಪಂದ್ಯದಲ್ಲಿ ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗಲಿವೆ.[ಪ್ರೋ ಕಬಡ್ಡಿ ಲೀಗ್ ನಲ್ಲಿ ಪಾಕಿಸ್ತಾನಿಗಳಿಗೆ ಅವಕಾಶವಿಲ್ಲ : ಭಾರತ ಸರ್ಕಾರ]

No bilateral cricket with Pakistan, says Sports Minister Vijay Goel


' ಈ ಬಗ್ಗೆ ಬಿಸಿಸಿಐ ಯಾವುದೇ ಮನವಿ ಸಲ್ಲಿಸಿಲ್ಲ. ಸಲ್ಲಿಸಿದರೂ ಅನುಮತಿ ಸಿಗುವುದಿಲ್ಲ ಎಂದು ವಿಜಯ್ ಗೋಯಲ್ ಹೇಳಿದ್ದಾರೆ. ಈ ನಡುವೆ ದ್ವಿಪಕ್ಷೀಯ ಸರಣಿಗೆ ಭಾರತ ಒಪ್ಪದಿರುವುದರಿಂದ ಸುಮಾರು 60 ಮಿಲಿಯನ್ ಡಾಲರ್ (387 ಕೋಟಿ ರು ಅಂದಾಜು) ನಷ್ಟವಾಗಿದೆ, ನಷ್ಟದ ಪರಿಹಾರವನ್ನು ಬಿಸಿಸಿಐ ತುಂಬಿಕೊಡಲಿ ಎಂದು ಪಿಸಿಬಿ ಆಗ್ರಹಿಸಿದೆ.[ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ!]

ಹೀಗಾಗಿ, ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಸರ್ಕಾರದ ನಿರ್ಧಾರವೇ ಅಂತಿಮ ಎಂದಿತ್ತು. ಈಗ ಕೇಂದ್ರ ಸರ್ಕಾರ ಈ ಸಂಭಾವ್ಯ ಸರಣಿಗೆ ಇತಿಶ್ರೀ ಹಾಡಿದೆ.

ಕಬಡ್ಡಿ ಲೀಗ್‍ ಮಾತ್ರವಲ್ಲದೇ, ಹಾಕಿ ಹಾಗೂ ಕ್ರಿಕೆಟ್ ಗಳಲ್ಲೂ ಪಾಕಿಸ್ತಾನಿ ಆಟಗಾರರಿಗೆ ಆಡಲು ಅವಕಾಶ ಮಾಡಿಕೊಟ್ಟಿಲ್ಲ. ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಇತ್ತೀಚಿನ ಕುಲಭೂಷಣ್ ಜಾಧವ್ ಪ್ರಕರಣದ ನಂತರ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X