ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ಸ್ಪಿನ್ ದಿಗ್ಗಜ ವೆಟ್ಟೋರಿ ಏಕದಿನ ಕ್ರಿಕೆಟ್ಟಿಗೆ ಗುಡ್ ಬೈ

By Mahesh

ಆಕ್ಲೆಂಡ್, ಮಾ.31: ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ವೇಗಿಗಳಲ್ಲದ್ದೇ ದರ್ಬಾರ್ ಆಗಿದ್ದ ಕಾಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡೇನಿಯಲ್ ವೆಟ್ಟೋರಿ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ 2015 ಫೈನಲ್ ಪಂದ್ಯವೇ ಕೊನೆ ಪಂದ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವಕಪ್ 2015ಟೂರ್ನಿಯಲ್ಲಿ ಸ್ಪಿನ್ನರ್ ಆಗಿ ಮಿಂಚದಿದ್ದರೂ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಗಳಿಗೆಯಲ್ಲಿ ಹೊಡೆದ ಬೌಂಡರಿ ಅಭಿಮಾನಿಗಳ ನೆನಪಲ್ಲಿ ಸದಾ ಕಾಲ ಉಳಿಯಲಿದೆ. ಕ್ರಿಕೆಟ್ ಜಗತ್ತಿನ ಸ್ಫುರದ್ರೂಪಿ ಆಟಗಾರರ ಪೈಕಿ ಒಬ್ಬರೆನಿಸಿಕೊಂಡಿರುವ ಡೇನಿಯಲ್ ವೆಟ್ಟೋರಿ ಅವರು 18ನೇ ವಯಸ್ಸಿಗೆ ಟೆಸ್ಟ್ ಕಣಕ್ಕಿಳಿದವರು. [ಏಕದಿನ ಕ್ರಿಕೆಟ್ಟಿಗೆ ಮಿಸ್ಬಾ, ಅಫ್ರಿದಿ ಗುಡ್ ಬೈ]

1996-97ರಲ್ಲಿ ನ್ಯೂಜಿಲೆಂಡ್ ಪರ ಟೆಸ್ಟ್ ಸರಣಿ ಆಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿಗೆ ಕ್ರಿಕೆಟ್ ಜಗತ್ತಿಗೆ ಬಂದ ಕಿವೀಸ್ ಎನಿಸಿಕೊಂಡರು.113 ಟೆಸ್ಟ್ ಪಂದ್ಯ ಹಾಗೂ 295 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ 36 ವರ್ಷ ವಯಸ್ಸಿನ ವೆಟ್ಟೋರಿ ಈಗ ಹಿರಿಯ ಅನುಭವಿ ಆಟಗಾರನಾಗಿ ನಿವೃತ್ತಿ ಹೊಂದುತ್ತಿದ್ದಾರೆ. [ವಿಶ್ವಕಪ್ 2015 ಸಮರ ಸಂಭ್ರಮ]

New Zealand spinner Daniel Vettori bids adieu to International Cricket

* ನ್ಯೂಜಿಲೆಂಡ್ ಪರ ಮೊದಲ ಏಕದಿನ ಕ್ರಿಕೆಟ್ ನಲ್ಲಿ ಅಗ್ರಗಣ್ಯ ಆಲ್ ರೌಂಡರ್ ಎನಿಸಿಕೊಂಡಿರುವ ವೆಟ್ಟೋರಿ ಒಟ್ಟಾರೆ 295 ಪಂದ್ಯಗಳಿಂದ 305 ವಿಕೆಟ್ 2,253 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

* ಎಡಗೈ ಸ್ಪಿನ್ನರ್ ವೆಟ್ಟೋರಿ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 113 ಟೆಸ್ಟ್ ಗಳಿಂದ 362 ವಿಕೆಟ್ ಪಡೆದುಕೊಂಡು ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. ಬ್ಯಾಟಿಂಗ್ ನಲ್ಲೂ ತಂಡಕ್ಕೆ ಆಸರೆಯಾಗಿದ್ದ ವೆಟ್ಟೋರಿ 6 ಶತಕ (ಗರಿಷ್ಠ 140ರನ್), 23 ಅರ್ಧಶತಕ ಬಾರಿಸಿದ್ದಾರೆ.

* ಟೆಸ್ಟ್ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ಹಾಗೂ ಇಯಾನ್ ಬೋಥಂ ನಂತರ 4,000ರನ್ ಹಾಗೂ 300 ಪ್ಲಸ್ ವಿಕೆಟ್ ಪಡೆದ ಆಟಗಾರ ಎನಿಸಿರುವ ವೆಟ್ಟೋರಿ ಒಟ್ಟಾರೆ 362 ವಿಕೆಟ್ ಹಾಗೂ 4,531ರನ್ ಗಳಿಸಿದ್ದಾರೆ. []

* ಐಸಿಸಿ ವಿಶ್ವಕಪ್ 2015ರಲ್ಲಿ 15 ವಿಕೆಟ್ ಪಡೆದು ಸ್ಪಿನ್ನರ್ ಗಳೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಒಟ್ಟಾರೆ ವಿಶ್ವಕಪ್ ನಲ್ಲಿ 32 ಪಂದ್ಯಗಳಿಂದ 36 ವಿಕೆಟ್ ಪಡೆದುಕೊಂಡಿದ್ದಾರೆ.



* ಟ್ವೆಂಟಿ 20 ಕ್ರಿಕೆಟ್ ನಲ್ಲಿ 34 ಪಂದ್ಯಗಳನ್ನಾಡಿ 205ರನ್ ಹಾಗೂ 38 ವಿಕೆಟ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ವೆಟ್ಟೋರಿ ಅವರಿಗೆ ಈಗ ಹೊಸ ಜವಾಬ್ದಾರಿಯನ್ನು ವಿಜಯ್ ಮಲ್ಯ ವಹಿಸಿದ್ದಾರೆ. ಏ.2ರಂದು ಭಾರತಕ್ಕೆ ಬರಲಿರುವ ವೆಟ್ಟೋರಿ ಅವರು ಏ.8ರಿಂದ ಆರಂಭಗೊಳ್ಳಲಿರುವ ಐಪಿಎಲ್ 8ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಗುಡ್ ಲಕ್ ವೆಟ್ಟೋರಿ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X