ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡ್ರೆಸಿಂಗ್ ರೂಮ್ ಕಲಹ, ಧೋನಿಗೆ ಹೆಚ್ಚಿದ ಮಾನಸಿಕ ಒತ್ತಡ

By Mahesh

ರಾಂಚಿ, ಜೂ.23: ವೃದ್ಧಿಮಾನ್ ಸಹಾ, ನಮನ್ ಓಝಾ ಮುಂತಾದ ವಿಕೆಟ್ ಕೀಪರ್ ಗಳಿರಬಹುದು, ನಾಯಕನಾಗಿ ಕೊಹ್ಲಿ ಇರಬಹುದು ಟೀಂ ಇಂಡಿಯಾಕ್ಕೆ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಧೋನಿ ಅನುಪಸ್ಥಿತಿ ಕಾಡಲಿದೆ. ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಗುಟ್ಟು ರಟ್ಟು ಮಾಡಿದ್ದ ಧೋನಿ ಅವರ ಗುರು ಭಟ್ಟಾಚಾರ್ಯ ಮತ್ತೊಮ್ಮೆ ಬಾಂಬ್ ಹಾಕಿದ್ದಾರೆ.

ಧೋನಿ ತನ್ನ ಭಾವನೆಗಳನ್ನು ಬೇರೆಯವರ ಮೇಲೆ ಹೇರುವುದಿಲ್ಲ. ಅದರೆ, ಇತ್ತೀಚೆಗೆ ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ ಕೆಲ ಘಟನೆಗಳು ಆತನ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಎಂಎಸ್ ಧೋನಿ ಅವರ ಪ್ರಥಮ ಕೋಚ್ ಚಂಚಲ್ ಭಟ್ಟಾಚಾರ್ಯ ಮತ್ತೊಮ್ಮೆ ಹೇಳಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೆಟ್ ಗೆ ಧೋನಿ ಹಠಾತ್ತಾಗಿ ನಿವೃತ್ತಿ ಘೋಷಿಸಿದಾಗ ಭಟ್ಟಾಚಾರ್ಯ ಇದೇ ರೀತಿ ಮಾತುಗಳನ್ನಾಡಿದ್ದರು. [ಧೋನಿ ನಿವೃತ್ತಿ ಘೋಷಣೆ ಅಸಲಿ ಕಾರಣವೇನು?]

MSD and Chanchal


ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದಾಗ ಧೋನಿ ಅವರು ಮಾತನಾಡಿ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಯನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ ಎಂದು ಧೋನಿ ತಕ್ಷಣಕ್ಕೆ ಕಾರಣ ನೀಡಿದ್ದರು. ಅದರೆ, ತಂಡದಲ್ಲಿ ಆಗುತ್ತಿರುವ ಬೆಳವಣಿಗೆ ಕಿತ್ತಾಟ, ವೈಯಕ್ತಿಕ ದ್ವೇಷ ಅವರನ್ನು ಕಾಡುತ್ತಿದ್ದು ಮಾನಸಿಕ ಒತ್ತಡದಲ್ಲಿದ್ದಾರೆ ಎಂದು ಕೋಚ್ ಚಂಚಲ್ ಹೇಳಿದ್ದಾರೆ.

ಡ್ರೆಸಿಂಗ್ ರೂಮಿನಲ್ಲಿ ಆಗುತ್ತಿರುವ ಪರಸ್ಪರ ಕಿತ್ತಾಟದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಉತ್ತಮ ಪ್ರದರ್ಶನ ನೀಡಲು ಆಗುತ್ತಿಲ್ಲ. ನನಗೆ ಈ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲದಿದ್ದರೂ ಧೋನಿಯ ವೈಫಲ್ಯಕ್ಕೆ ಇದೇ ಕಾರಣ ಇರಲು ಸಾಧ್ಯ ಎಂದಿದ್ದಾರೆ.

ಧೋನಿಗೆ ಬೆಂಬಲ: ಈ ನಡುವೆ ಎಂಎಸ್ ಧೋನಿ ಅವರು ಟೀಮ್ ಇಂಡಿಯಾದ ನಾಯಕತ್ವ ತೊರೆಯುವ ವಿಚಾರದ ಬಗ್ಗೆ ಮಾತನಾಡಿದ ಮೇಲೆ ಮಾಜಿ ಕ್ರಿಕೆಟರ್ಸ್ ಗಳು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ದಿಲೀಪ್ ವೆಂಗ್ ಸರ್ಕಾರ್, ಅಜಿತ್ ವಾಡೇಕರ್, ಚೇತನ್ ಚೌಹಾನ್, ಎಸ್.ಕಿರ್ಮಾನಿ, ಚಂದು ಬೊರ್ಡೆ ಮತ್ತು ಕಿರಣ್ ಮೋರೆ ಅವರು 2016ರ ಟ್ವೆಂಟಿ -20 ವಿಶ್ವಕಪ್‌ನ ತನಕವಾದರೂ ಧೋನಿ ಟೀಮ್ ಇಂಡಿಯಾದ ನಾಯಕರಾಗಿ ಇರಬೇಕು' ಎಂದು ಒಕ್ಕೊರಲ ಅಭಿಪ್ರಾಯ ಮಂಡಿಸಿದ್ದಾರೆ. ಚಂಚಲ್ ಅವರು ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಪ್ರತಿಕ್ರಿಯೆ ವಿಡಿಯೋ ನೋಡಿ...

<center><div id="vnVideoPlayerContent"></div><script>var ven_video_key="NjU1OTY0fHwxMDA4fHwwfHx8fHx8";var ven_width="100%";var ven_height="325";</script><script type="text/javascript" src="http://ventunotech.com/plugins/cntplayer/ventuno_player.js"></script></center>

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X