ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಥ್ಯೂ ವೇಡ್ ಕಿಚಾಯಿಸಿದ್ದು ರೊಚ್ಚಿಗೆಬ್ಬಿಸಿತು: ಜಡೇಜಾ

ಆಸ್ಟ್ರೇಲಿಯಾ ಆಟಗಾರರ ಸೆಡ್ಲಿಂಗ್ ವಿವಾದದ ಮೇಲಿನ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ ಆಲ್ರೌಂಡರ್ ರವೀಂದ್ರ ಜಡೇಜಾ.

ಧರ್ಮಶಾಲಾ, ಮಾರ್ಚ್ 28: ''ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ತಾವು ಬ್ಯಾಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾಗ, ವಿಕೆಟ್ ಕೀಪಿಂಗ್ ನಲ್ಲಿ ನಿಂತಿದ್ದ ಮ್ಯಾಥ್ಯೂ ವೇಡ್ ನನ್ನನ್ನು ಕಿಚಾಯಿಸಿದ್ದೇ ನನ್ನಲ್ಲಿ ಕಿಚ್ಚು ಹೊತ್ತಿಸಿ, ನಾನು ಉತ್ತಮವಾಗಿ ಆಡಲು ಕಾರಣವಾಗಿತು'' ಎಂದು ರವೀಂದ್ರ ಜಡೇಜಾ ಅವರು ತಿಳಿಸಿದ್ದಾರೆ.

| ಗ್ಯಾಲರಿ | ಟ್ವೀಟ್ ಅಭಿನಂದನೆ

ಧರ್ಮಶಾಲಾ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್ ವೇಳೆ 63 ರನ್ ಗಳಿಸಿದ ಅವರು, ಈ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ್ದಾರೆ. ಇದಲ್ಲದೆ, ಸದ್ಯಕ್ಕಷ್ಟೇ ಮುಕ್ತಾಯವಾದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 24 ವಿಕೆಟ್ ಉರುಳಿಸುವ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Matthew Wade's chirping behind the stumps motivated me: Ravindra Jadeja

ತಮ್ಮ ಈ ಯಶಸ್ಸಿನ ಹಿಂದಿನ ಕಾರಣವನ್ನು ಹಂಚಿಕೊಂಡಿರುವ ಅವರು, ''ಧರ್ಮಶಾಲಾ ಪಂದ್ಯದಲ್ಲಿ ನಾನು ನನ್ನ ಪಾಡಿಗೆ ಬ್ಯಾಟಿಂಗ್ ಆಡುತ್ತಿದ್ದೆ. ಆದರೆ, ವಿಕೆಟ್ ಕೀಪಿಂಗ್ ಗೆ ನಿಂತಿದ್ದ ಮ್ಯಾಥ್ಯೂ ವೇಡ್ ಅವರು, ನನ್ನನ್ನು ಕಿಚಾಯಿಸಿದರು. ಇದು ನನ್ನನ್ನು ಘಾಸಿಗೊಳಿಸದರೂ ಬ್ಯಾಟ್ ಮೂಲಕವೇ ಇವರಿಗೆ ಉತ್ತರ ಕೊಡಬೇಕೆಂದು ತೀರ್ಮಾನಿಸಿದೆ. ನನ್ನ ಮನಸ್ಸು ರೊಚ್ಚಿಗೆದ್ದಿತು. ಹಾಗಾಗಿ, ನಾನು ಬ್ಯಾಟಿಂಗ್ ನಲ್ಲಿ ಅರ್ಧಶತಕ ಸಿಡಿಸಲು ಸಾಧ್ಯವಾಯಿತು'' ಎಂದು ತಿಳಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X