ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ ಸುಲಭ ಜಯ, ಸೆಮೀಸ್ಗೆ ಭಾರತ

By Mahesh

ಅಡಿಲೇಡ್, ಮಾ.19: ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಐಸಿಸಿ ವಿಶ್ವಕಪ್ ಟೂರ್ನಿ 2015ರ ಎರಡನೇ ಕ್ವಾರ್ಟರ್ ಫೈನಲ್ ಕದನ ಏಕಮುಖ ಪಂದ್ಯವಾಗಿತ್ತು. ಬಾಂಗ್ಲಾಕ್ಕೆ 303ರನ್ ಟಾರ್ಗೆಟ್ ಕೊಟ್ಟ ಇಂಡಿಯಾ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಬಾಂಗ್ಲಾವಿರುದ್ಧ 109ರನ್ ಗಳ ಸುಲಭ ಜಯ ದಾಖಲಿಸಿ ಸೆಮಿಫೈನಲ್ ತಲುಪಿದೆ.

ವಿಶ್ವಕಪ್ ಕ್ವಾರ್ಟರ್ ಫೈನಲ್ ಹಂತದಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗಿದ್ದವು. . ಈ ಮುಂಚೆ ಎರಡು ಬಾರಿ ಲೀಗ್ ಹಂತದಲ್ಲಿ ಕಾದಾಡಿವೆ.ವಿಶ್ವಕಪ್ ನಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿವೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ವೇಳಾಪಟ್ಟಿ | ಫಲಿತಾಂಶ

ಬಾಂಗ್ಲಾದೇಶ ತಂಡ 2007ರಲ್ಲಿ ಭಾರತಕ್ಕೆ ಸೋಲುಣಿಸಿತ್ತು. ಮೊದಲ ಹಂತದಿಂದಲೇ ಟೀಂ ಇಂಡಿಯಾ ಹೊರ ಬಿದ್ದಿತ್ತು. ಎಂಎಸ್ ಧೋನಿ ತಂಡ ಈ ಸೇಡನ್ನು 2011ರಲ್ಲಿ ತೀರಿಸಿಕೊಂಡಿತು. ಕಾದಾಟದ ಸ್ವಾರಸ್ಯಗಳು ಕಾಲಕಾಲಕ್ಕೆ ಈ ಪುಟದಲ್ಲಿ ಅಪ್ಡೇಟ್ ಓದಿರಿ... [ಮಾರ್ಚ್ ತಿಂಗಳಲ್ಲಿ ಭಾರತ ವಿರುದ್ಧ ಸೋಲದ ಬಾಂಗ್ಲಾ]

ಪಂದ್ಯದ ಅಪ್ಡೇಟ್ಸ್:

Rohith Sharma


ಬಾಂಗ್ಲಾದೇಶ ಚೇಸಿಂಗ್:
* ಅಮೋಘ ಶತಕ ಸಿಡಿಸಿದ ರೋಹಿತ್ ಶರ್ಮ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ.
* ಸತತ ಏಳನೇ ಬಾರಿಗೆ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

* 303 ರನ್ ಚೇಸ್ ಮಾಡಿದ ಬಾಂಗ್ಲಾದೇಶ 45ಓವರ್ ಗಳಲ್ಲಿ 193ಸ್ಕೋರಿಗೆ ಆಲೌಟ್ ಆಗಿದೆ.
* 44 ಓವರ್ ಗಳಲ್ಲಿ 192/8 ಭಾರತಕ್ಕೆ ವಿಜಯೋತ್ಸವ ಆಚರಿಸುವ ಕ್ಷಣದ ನಿರೀಕ್ಷೆ.
* 43 ಓವರ್ ಗಳಲ್ಲಿ 189/7 ಸಬ್ಬೀರ್ 27 ಬ್ಯಾಟಿಂಗ್.
Shami

* ಉತ್ತಮವಾಗಿ ಆಡುತ್ತಿದ್ದ ನಾಸೀರ್ ಅವರು 34 ಎಸೆತಗಳಲ್ಲಿ 35 ರನ್ (6x4) ಗಳಿಸಿ ಜಡೇಜ ಬೌಲಿಂಗ್ ನಲ್ಲಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

* ಕ್ಯಾಚ್ ಡ್ರಾಪ್ ಮಾಡಿದ ಶಿಖರ್ ಧವನ್. 40 ಓವರ್ ಗಳಲ್ಲಿ ಬಾಂಗ್ಲಾದೇಶ 168/6,ಸಬ್ಬೀರ್ 29. ನಾಸೀರ್ 13.


* 40 ಓವರ್ ನಂತರ ಟೀಂ ಇಂಡಿಯಾ ಪರ ಉಮೇಶ್, ಶಮಿ ತಲಾ 2 ವಿಕೆಟ್, ಜಡೇಜ 1 ವಿಕೆಟ್, 1 ರನೌಟ್
* ಟೀಂ ಇಂಡಿಯಾ ಪರ ಅಭಿಮಾನಿಗಳ ಹರ್ಷೋದ್ಗಾರ.

* 31 ಓವರ್ ಗಳಲ್ಲಿ 114/5. ಶಕೀಬ್ ಅಲ್ ಹಸನ್ ಔಟ್.

* ಸೌಮ್ಯ ಸರ್ಕಾರ್ 29 ರನ್ ಗಳಿಸಿ ಧೋನಿ ಹಿಡಿದ ಉತ್ತಮ ಕ್ಯಾಚಿಗೆ ಬಲಿ. 21 ಓವರ್ಸ್ 90/4.
* 20 ಓವರ್ಸ್ 87/3 ಸ್ಕೋರ್ ಮಹ್ಮದ್ದುಲ್ಲಾ 21ರನ್ ಗಳಿಸಿ ಔಟ್.
* 16.5 ಓವರ್ 73/2 ಆಗಿದ್ದಾಗ ಶಿಖರ್ ಧವನ್ ಬೌಂಡರಿ ಬಳಿ ಹಿಡಿದ ಅದ್ಭುತ ಕ್ಯಾಚಿಗೆ ಮುಹಮದ್ದುಲ್ಲಾ ಔಟ್. ಸ್ಕೋರ್ 73/3
* ಬಾಂಗ್ಲಾದೇಶ 9 ಓವರ್ ಗಳಲ್ಲಿ 39/2. ಇಬ್ಬರು ಆರಂಭಿಕ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಗೆ.

* ತಮೀಮ್ ಇಕ್ಬಾಲ್ 25 ಎಸೆತಗಳಲ್ಲಿ 25ರನ್ ಗಳಿಸಿ ಔಟ್. ಉಮೇಶ್ ಯಾದವ್ ಎಸೆತದಲ್ಲಿ ಧೋನಿ ಹಿಡಿದ ಕ್ಯಾಚ್ ಸರಿ ಇದೆ ಎಂದು ಥರ್ಡ್ ಅಂಪೈರ್ ನಿಂದ ನಿರ್ಣಯ.
* ಇಮ್ರುಲ್ ಕೆಯ್ಸ್ 5 ರನ್ ಗಳಿಸಿ ಆತುರವಾಗಿ ಓಡಿ ರನೌಟ್.
* ರೋಹಿತ್ ಶರ್ಮ ಆಟಕ್ಕೆ ಹರ್ಷ ವ್ಯಕ್ತಪಡಿಸಿದ ರೋಹಿತ್ ಅಪ್ಪ.

* ಬಾಂಗ್ಲಾಕ್ಕೆ 303ರನ್ ಟಾರ್ಗೆಟ್ ಕೊಟ್ಟ ಇಂಡಿಯಾ.
* ಟೀಂ ಇಂಡಿಯಾ 50 ಓವರ್ಸ್ ನಲ್ಲಿ 302/6. ಟಾಪ್ ಸ್ಕೋರರ್ಸ್ ರೋಹಿತ್ 137, ರೈನಾ 65, ಜಡೇಜ 10 ಎಸೆತಗಳಲ್ಲಿ 23ರನ್
* 47 ಓವರ್ಸ್ ನಲ್ಲಿ 273/5. ರೋಹಿತ್ ಶರ್ಮ 137 ರನ್(126 ಎಸೆತ, 14X4, 3X6)
* ರೋಹಿತ್ ಶರ್ಮ ಅಮೋಘ ಶತಕ 101 ರನ್ (108 ಎಸೆತ), ರೈನಾ ಫಿಫ್ಟಿ 50 (46 ಎಸೆತ) 43 ಓವರ್ಸ್ 233/3
* 40 ಓವರ್ಸ್ ನಲ್ಲಿ 205/3.

* 39.4 ಓವರ್ಸ್ ನಲ್ಲಿ 200/3. ರೋಹಿತ್ ನೋಬಲ್ ಎಸೆತದಲ್ಲಿ ಕ್ಯಾಚಿತ್ತು ಜೀವದಾನ. ರೈನಾ ಕ್ಯಾಚ್ ಡ್ರಾಪ್. ನಂತರ ಬೌಂಡರಿ.. ರುಬೆಲ್ ಬೌಲಿಂಗ್ ನಲ್ಲಿ ಎಲ್ಲವೂ ಆಗುತ್ತಿದೆ.
LIVE: World Cup QF 2: Unchanged India opt to bat first against Bangladesh


* 90 ರನ್ ಗಳಿಸಿದ ರೋಹಿತ್ ಉತ್ತಮ ಬ್ಯಾಟಿಂಗ್ 41-50 ಓವರ್ ಗಳಲ್ಲಿ ಭಾರತದ ರನ್ ಗಳಿಕೆ ವೇಗ 8.73ಗೂ ಅಧಿಕ.
* 38.1 ಓವರ್ಸ್ ನಲ್ಲಿ 186/3 ಆಗಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿ. 39 ಓವರ್ಸ್ ನಲ್ಲಿ 194/3.
* ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಟ್ವೀಟ್

* 27 ಓವರ್ಸ್ ನಲ್ಲಿ 109/2, 28 ಓವರ್ಸ್ 115/3. ರಹಾನೆ ಔಟ್, ರೈನಾ ಇನ್
* 26.4 ಓವರ್ ಗಳಲ್ಲಿ 108/2 ಆಗಿದ್ದಾಗ ರೋಹಿತ್ ಶರ್ಮ ಅರ್ಧಶತಕ 50 (70ಎಸೆತ)
* 25 ಓವರ್ ಗಳಲ್ಲಿ 99/2. ಪವರ್ ಪ್ಲೇ ರನ್ ರೇಟ್ 5.01.

* 22 ಓವರ್ಸ್ ನಂತರ ಟೀಂ ಇಂಡಿಯಾ ನಿಧಾನಗತಿ ಆಟ 88/2. ರೋಹಿತ್ 43, ರಹಾನೆ 6.
* 21 ಓವರ್ಸ್ ನಂತರ ಟೀಂ ಇಂಡಿಯಾ 86/2.
* 20 ಓವರ್ಸ್ ಭಾರತ 84/2. ಕಣದಲ್ಲಿ ರೋಹಿತ್ ಹಾಗೂ ಅಜಿಂಕ್ಯ ರಹಾನೆ.

* ಕೊಹ್ಲಿ ವಿಕೆಟ್ ಕಿತ್ತ ಸಂಭ್ರಮ


* 17 ಓವರ್ ನಂತರ 79/1. ವಿರಾಟ್ ಕೊಹ್ಲಿ ಕಣಕ್ಕೆ ಧವನ್ ನಂತರ ವಿರಾಟ್ ಕೊಹ್ಲಿ ಔಟ್ ,ರುಬೆಲ್ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ಕೊಹ್ಲಿ ಔಟ್
* 17ನೇ ಓವರ್ ಆರಂಭದಲ್ಲೇ ಮೊದಲ ಆಘಾತ. 30 ರನ್ ಗಳಿಸಿದ್ದ ಶಿಖರ್ ಧವನ್ ಸ್ಟಂಪ್ ಔಟ್
* ಡ್ರಿಂಕ್ಸ್ ಬ್ರೇಕ್: ಭಾರತ 72/0, 16 ಓವರ್ಸ್ (ರೋಹಿತ್ 39, ಶಿಖರ್ 28) - 7x4, 1x6.
* 15 ಓವರ್ ನಲ್ಲಿ 70/0.
ಪಂದ್ಯದ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ರೋಹಿತ್. ಮೊದಲ ಸಿಕ್ಸರ್ ಕೂಡಾ ಎತ್ತಿದರು.
* 14 ಓವರ್ ಗಳಲ್ಲಿ 63/0. ಪವರ್ ಪ್ಲೇಗಳಲ್ಲಿ 5.30 ರನ್ ಸರಾಸರಿ.

* 13 ಓವರ್ ಗಳ ನಂತರ 59/0. ರೋಹಿತ್ 30ರನ್ ( 4 ಬೌಂಡರಿ), ಶಿಖರ್ 24 (3 ಬೌಂಡರಿ)
* 12 ಓವರ್ ಗಳ ನಂತರ 56/0. ರೋಹಿತ್ 28 ರನ್ ( 4 ಬೌಂಡರಿ), ಶಿಖರ್ 23 (3 ಬೌಂಡರಿ)
* 11 ಓವರ್ ಗಳ ನಂತರ 55/0. ರೋಹಿತ್ 27 ರನ್ ( 4 ಬೌಂಡರಿ), ಶಿಖರ್ 22 (3 ಬೌಂಡರಿ)
* 10 ಓವರ್ ಗಳ ನಂತರ 51/0. ರೋಹಿತ್ 24 ರನ್ ( 4 ಬೌಂಡರಿ), ಶಿಖರ್ 22 (3 ಬೌಂಡರಿ)


* 9 ಓವರ್ಸ್ ನಂತರ ಭಾರತ 47/0. ರೋಹಿತ್ ಶರ್ಮ 22 (4 ಬೌಂಡರಿ), ಧವನ್ 20 (3 ಬೌಂಡರಿ)
* 8 ಓವರ್ಸ್ ನಂತರ ಭಾರತ 41/0. ರೋಹಿತ್ ಶರ್ಮ 22 (4 ಬೌಂಡರಿ), ಧವನ್ 14 (2 ಬೌಂಡರಿ)

* 7 ಓವರ್ಸ್ ನಂತರ ಟೀಂ ಇಂಡಿಯಾ 36/0. ಶಿಖರ್ ಮತ್ತೊಂಡು ಬೌಂಡರಿ. ರೋಹಿತ್ 18. ಶಿಖರ್ 13

* 6ನೇ ಓವರ್ ಗೆ ಸ್ಪಿನ್ನರ್ ನಾಸೀರ್ ಕಣಕ್ಕೆ ಭಾರತ 28/0. ರೋಹಿತ್ ಶರ್ಮ 17 (3 ಬೌಂಡರಿ), ಧವನ್ 6 (1 ಬೌಂಡರಿ)
* 5 ಓವರ್ ಗಳ ನಂತರ ಭಾರತ 26/0. ರೋಹಿತ್ ಶರ್ಮ 1 5(3 ಬೌಂಡರಿ), ಧವನ್ 5 (1 ಬೌಂಡರಿ)
* ನಾಲ್ಕು ಓವರ್ ಗಳ ನಂತರ ಭಾರತ 23/0.ರೋಹಿತ್ ಶರ್ಮ 15 (3 ಬೌಂಡರಿ), ಧವನ್ 4 (1 ಬೌಂಡರಿ).


* ಮೂರು ಓವರ್ ನಂತರ ಟೀಂ ಇಂಡಿಯಾ 17/0. ರೋಹಿತ್ 9, ಧವನ್ 4. ಒಟ್ಟು 3 ಬೌಂಡರಿ.
* ಎರಡನೇ ಓವರ್ ನಂತರ ಭಾರತ 12/0. ರೋಹಿತ್ ಹಾಗೂ ಶಿಖರ್ ತಲಾ 4 ರನ್. ಎಂಸಿಜಿಯಲ್ಲಿ ಗಾಳಿಯೋ ಗಾಳಿ.
* ಮೊದಲ ಓವರ್ ನಂತರ: ಭಾರತ 8/0. 2 ಬೌಂಡರಿ, 1 ಬ್ಯಾಟ್ ನಿಂದ ಮತ್ತೊಂದು ಲೆಗ್ ಬೈಸ್.
LIVE: World Cup QF 2,Unchanged India opt to bat first against Bangladesh

* ಟಾಸ್ ಗೆದ್ದ ನಾಯಕ ಎಂಎಸ್ ಧೋನಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
* ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.[ಭಾರತ vs ಬಾಂಗ್ಲಾದೇಶ ಟಾಪ್ 10 ಖಾಸ್ ಬಾಸ್]
ಟಾಸ್ ಹಾಗೂ ಅಂತಿಮ XI ವಿವರ

ಆಡುವ XI: ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಆರ್ ಅಶ್ವಿನ್, ಉಮೇಶ್ ಯಾದವ್, ಮೋಹಿತ್ ಶರ್ಮ, ಮಹಮ್ಮದ್ ಶಮಿ.

ಬಾಂಗ್ಲಾದೇಶ: ಮಶ್ರಾಫ್ ಮೋರ್ತಾಜಾ(ನಾಯಕ) , ತಮೀಮ್ ಇಕ್ಬಾಲ್, ಇಮ್ರುಲ್ ಕೇಯ್ಸ್, ಮುಮುದುಲ್ಲಾ , ಮುಫ್ಫಿಕರ್ ರಹೀಂ(ವಿಕೆಟ್ ಕೀಪರ್), ನಾಸೀರ್ ಹುಸೇನ್, ರುಬೇಲ್ ಹುಸೇನ್, ಸಬೀರ್ ರಹ್ಮನ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ತಸ್ಕಿನ್ ಅಹ್ಮದ್.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X