ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ತ್ ನಲ್ಲಿ ವೆಸ್ಟ್ ಇಂಡೀಸ್ ಬಗ್ಗುಬಡಿದ ಭಾರತ

By Mahesh

ಪರ್ತ್, ಮಾ.6: ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಪರ್ತ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಹೋಳಿ ಹಬ್ಬ ಆಚರಿಸಿದೆ. ಗೆಲ್ಲಲು ಬೇಕಿದ್ದ 183 ಗುರಿಯನ್ನು 39.1 ಓವರ್ಸ್ ನಲ್ಲಿ ತಲುಪಿದ ಟೀಂ ಇಂಡಿಯಾ ಗೆಲುವು ಸಾಧಿಸಿದೆ.

ಸತತ ನಾಲ್ಕು ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಹಂತ ತಲುಪಿದೆ. ಈ ಗೆಲುವಿನಿಂದ ಭಾರತ ವೆಸ್ಟ್ ಇಂಡೀಸ್ ನ್ನು ವಿಶ್ವಕಪ್ ನಲ್ಲಿ 5 ಸಾರಿ ಸೋಲಿಸಿದಂತಾಗಿದೆ. ವಿರುದ್ಧದ ಪಿಚ್ ಹೇಗೆ ವರ್ತಿಸುತ್ತದೆ? ಎಂಬುದರ ಮೇಲೆ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗಿತ್ತು. ಕದನ ಸ್ವಾರಸ್ಯದ ವಿವರಗಳನ್ನು ಈ ಪುಟದಲ್ಲಿ ನೋಡಬಹುದು.[ಭಾರತ- ವೆಸ್ಟ್ ಇಂಡೀಸ್ ಕದನ ಇಣುಕು ನೋಟ]

LIVE: World Cup Match 28: India Vs West Indies



* ಸತತ ನಾಲ್ಕು ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಹಂತ ತಲುಪಿದ ಭಾರತ
* 39.1 ಓವರ್ಸ್ ನಲ್ಲಿ ಗೆಲುವಿನ ದಡ ಮುಟ್ಟಿದ ಟೀಂ ಇಂಡಿಯಾ. 186/6.
* ನಾಯಕ ಎಂಎಸ್ ಧೋನಿ ಅಜೇಯ 45 ಹಾಗೂ ಆರ್ ಅಶ್ವಿನ್ ಅಜೇಯ 16 ರನ್.

MS Dhoni

* ಟೀಂ ಇಂಡಿಯಾಕ್ಕೆ ಗೆಲ್ಲಲು 35ರನ್ 108 ಎಸೆತಗಳಲ್ಲಿ ಬೇಕು.
* ಧೋನಿ ಸಿಕ್ಸರ್ ಕಂಡು ಅಭಿಮಾನಿಗಳು ಹುಚ್ಚೆದು ಕುಣಿದಾಡಿದರು.

* ಟೀಂ ಇಂಡಿಯಾ 24 ಓವರ್ಸ್ 113/5.
* ಸುರೇಶ್ ರೈನಾ ಔಟ್ ಆದಾಗ ವಿಂಡೀಸ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು

* 18 ಓವರ್ಸ್ ನಲ್ಲಿ 78/4 ರೈನಾ ಹಾಗೂ ಧೋನಿ ಕ್ರೀಸ್ ನಲ್ಲಿದ್ದಾರೆ.
* ಶಿಖರ್ ಧವನ್ 9ರನ್ ಗಳಿಸಿ ಔಟ್. ಟೇಲರ್ ಬೌಲಿಂಗ್ ನಲ್ಲಿ ಸಾಮಿಗೆ ಕ್ಯಾಚಿತ್ತು ಔಟ್
* 4.3 ಓವರ್ಸ್ ಟೀಂ ಇಂಡಿಯಾ 11/1
[ಭಾರತದ ಅದೃಷ್ಟ ಮತ್ತು ಜಡೇಜ ಗಡ್ಡದ ರಹಸ್ಯ ]
* ಟೀಂ ಇಂಡಿಯಾಕ್ಕೆ ಗೆಲ್ಲಲು 183ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್
* 44.2ಓವರ್ಸ್ ಗಳಲ್ಲಿ 182ಸ್ಕೋರಿಗೆ ವಿಂಡೀಸ್ ಆಲೌಟ್.
* ಹೋಲ್ಡರ್ ಜಡೇಜ ಬೌಲಿಂಗ್ ನಲ್ಲಿ 57 ಸ್ಕೋರಿಗೆ ಔಟ್.
* 44 ಓವರ್ ಗಳಲ್ಲಿ 182/9, ಹೋಲ್ಡರ್ 57.

ಅಂಕ ಪಟ್ಟಿ ಓದುವ ಕ್ರಮ:
ತಂಡ-ಆಡಿದ ಪಂದ್ಯಗಳು-ಗೆಲುವು-ಸೋಲು-ಟೈ-ಅಂಕ-ರನ್ ರೇಟ್-ರನ್ ನೀಡಿಕೆ-ರನ್ ಹೊಡೆಸಿಕೊಂಡಿದ್ದು
India points table

* 43ನೇ ಓವರ್ ಅಂತ್ಯಕ್ಕೆ ನಾಯಕ ಹೋಲ್ಡರ್ 51(58 ಎಸೆತ)
* 43ನೇ ಓವರ್ ಅಂತ್ಯಕ್ಕೆ ಜೆರೋಮಿ ಟೇಲರ್ 11 ರನ್ ಗಳಿಸಿ ಉಮೇಶ್ ಯಾದವ್ ಗೆ ಬಲಿ.
* ಜಾಸನ್ ಹೋಲ್ಡರ್ 56 ಎಸೆತಗಳಲ್ಲಿ 50ರನ್ . ವೈಯಕ್ತಿಕ 2ನೇ ಅರ್ಧಶತಕ.
* ನಾಯಕ ಹೋಲ್ಡರ್ ಉತ್ತಮ ಬ್ಯಾಟಿಂಗ್ 41 ಓವರ್ ಗಳಲ್ಲಿ 168/8.
* ಮಹಮ್ಮದ್ ಶಮಿಗೆ ಮತ್ತೊಂದು ವಿಕೆಟ್. 36 ಓವರ್ ಅಂತ್ಯಕ್ಕೆ ವಿಂಡೀಸ್ 125/8.

* ವೆಸ್ಟ್ ಇಂಡೀಸ್ 35 ಓವರ್ಸ್ ನಲ್ಲಿ 120/7. ಶಮಿ ಸೆಕೆಂಡ್ ಸ್ಪೆಲ್ ಆರಂಭ
* 31 ಓವರ್ಸ್ ನಲ್ಲಿ 109/7 ಸ್ಕೋರ್.

* WI 101/7 in 29 ಓವರ್ಸ್. 28ನೇ ಓವರ್ಸ್ ನಲ್ಲಿ 100ರನ್ ದಾಟಿದ ವಿಂಡೀಸ್. ಜಾಸನ್ ಹೋಲ್ಡರ್ ಹಾಗೂ ಸಾಮಿ ಕ್ರೀಸ್ ನಲ್ಲಿ, ಯಾದವ್ ಸೆಕೆಂಡ್ ಸ್ಪೆಲ್.
* ಆಂಡ್ರೆ ರಸೆಲ್ 8 ರನ್ ಗಳಿಸಿ ಜಡೇಜ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತುಔಟ್.
* 19 ಓವರ್ಸ್ 68/5, 21 ಓವರ್ಸ್ 71/5
* ಮೋಹಿತ್ ಶರ್ಮಗೆ ವಿಕೆಟ್, 18.1 ಓವರ್ಸ್ 67/5, ಸಿಮನ್ಸ್ ಯಾದವ್ ಗೆ ಕ್ಯಾಚಿತ್ತು ಔಟ್
* 17 ಓವರ್ಸ್ ವೆಸ್ಟ್ ಇಂಡೀಸ್ 61/4
* 15 ಓವರ್ ಗಳ ನಂತರ ವಿಂಡೀಸ್ 54/4. ಶಮಿ 6 ಓವರ್ಸ್ 19ಕ್ಕೆ 2, ಉಮೇಶ್ 5 ಓವರ್ಸ್ 20ಕ್ಕೆ 1.
* 13ನೇ ಓವರ್ ಮೋಹಿತ್ ಶರ್ಮ - ಓವರ್ ಅಂತ್ಯಕ್ಕೆ 49/4.
* 12ನೇ ಓವರ್ ಎಸೆದ ಅಶ್ವಿನ್. ಓವರ್ ಅಂತ್ಯಕ್ಕೆ 44/4. ಸಿಮನ್ಸ್ 4, ಕಾರ್ಟರ್ 3.
* 10 ಓವರ್ ನಂತರ ವಿಂಡೀಸ್ ಮೊತ್ತ 38/4.
* 10 ಓವರ್ ಆರಂಭದಲ್ಲೇ ವಿಕೆಟ್ ಪತನ. ಉಮೇಶ್ ಯಾದವ್ ಬೌಲಿಂಗ್ ರಾಮದೀನ್ ಬೋಲ್ಡ್. ಸ್ಕೋರ್ 35/4.
* 9 ಓವರ್ ಅಂತ್ಯಕ್ಕೆ ವೆಸ್ಟ್ ಇಂಡೀಸ್ ಸ್ಕೋರ್ 35/3.
India Vs West Indies

* ಕ್ರಿಸ್ ಗೇಲ್ ಇನ್ನಿಂಗ್ಸ್ ಅಂತ್ಯ. ಶಮಿ ಬೌಲಿಂಗ್ ನಲ್ಲಿ ಮೋಹಿತ್ ಶರ್ಮಕ್ಕೆ ಕ್ಯಾಚಿತ್ತು ಔಟ್. ಗೇಲ್ 21 (27)
* 8 ಓವರ್ ಅಂತ್ಯಕ್ಕೆ 28/2. ಗೇಲ್ 15(21), ಕ್ರೀಸ್ ಗೆ ಆಗಮಿಸಿದ ಕಾರ್ಟರ್.
* ಅನಗತ್ಯ ರನ್ ಕದಿಯಲು ಯತ್ನ ಮರ್ಲಾನ್ ಸ್ಯಾಮುಯಲ್ ರನೌಟ್ 7.2 ಓವರ್ಸ್ 15/2
* 6 ಓವರ್ ಅಂತ್ಯಕ್ಕೆ ವೆಸ್ಟ್ ಇಂಡೀಸ್ 10/1 ಸ್ಯಾಮುಯಲ್ 0(3), ಗೇಲ್ 1(11).

* 5 ನೇ ಓವರ್ ನಲ್ಲಿ ಮೊದಲ ವಿಕೆಟ್ ಪತನ . ಶಮಿ ಎಸೆತದಲ್ಲಿ ಧೋನಿಗೆ ಕ್ಯಾಚಿತ್ತು ಸ್ಮಿತ್ ಔಟ್.
*
ಸ್ಮಿತ್ 20 ಎಸೆತಗಳಲ್ಲಿ ಗಳಿಸಿದ್ದು 6 ರನ್ ಮಾತ್ರ. ಓವರ್ ಅಂತ್ಯಕ್ಕೆ ವೆಸ್ಟ್ ಇಂಡೀಸ್ 8/1.
* ನಾಲ್ಕನೇ ಓವರ್ ನಲ್ಲಿ ರನ್ ಗಳಿಸಲು ಪರದಾಡಿದ ಗೇಲ್, ಯಾದವ್ ಗೆ ಮೇಡನ್ ಸ್ಕೋರ್ 6/0

ಮೂರನೇ ಓವರ್ ಅಂತ್ಯಕ್ಕೆ ವಿಂಡೀಸ್ 6/0
* 140 kmph ವೇಗದಲ್ಲಿ ಉಮೇಶ್ ಯಾದವ್ ಬೌಲಿಂಗ್

ಭಾರತ:
ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ರವೀಂದ್ರ ಜಡೇಜ, ಆರ್ ಅಶ್ವಿನ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮ.

ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್ (ನಾಯಕ), ಮರ್ಲಾನ್ ಸ್ಯಾಮುಯಲ್ಸ್, ಜೊನಾಥನ್ ಕಾರ್ಟರ್, ಕ್ರಿಸ್ ಗೇಲ್, ದಿನೇಶ್ ರಾಮದೀನ್ (ವಿಕೆಟ್ ಕೀಪರ್), ಕೆಮಾರ್ ರೋಚ್, ಆಂಡ್ರೆ ರಸೆಲ್, ಡರೇನ್ ಸಾಮಿ, ಲೆಂಡ್ಲ್ ಸಿಮನ್ಸ್, ಡ್ವಾಯ್ನೆ ಸ್ಮಿತ್, ಜೆರೊಮಿ ಟೇಲರ್
ಮೊದಲ ಓವರ್ : ಮಹಮ್ಮದ್ ಶಮಿ ಬೌಲಿಂಗ್

ಎರಡನೇ ಓವರ್ : ಉಮೇಶ್ ಯಾದವ್ ಬೌಲಿಂಗ್.. ಓವರ್ ಅಂತ್ಯಕ್ಕೆ 6/0.
* ಮೊದಲ ಓವರ್ ಅಂತ್ಯಕ್ಕೆ ಸ್ಮಿತ್ 5, ಗೇಲ್ ೦, ವಿಂಡೀಸ್ 5/0
* ವಿಂಡೀಸ್ ಮೊದಲ ರನ್ ಬೌಂಡರಿ ಮೂಲಕ ಬಂದಿದೆ. ಡ್ವಾಯ್ನೆ ಸ್ಮಿತ್ ಆಫ್ ಸೈಡ್ ನಲ್ಲಿ ಕಟ್ ಮಾಡಿ 4 ರನ್ ಚೆಚ್ಚಿದರು.

ಪರ್ತ್ ನಲ್ಲಿರುವ ಭಾರತದ ಅಭಿಮಾನಿಗಳು:

ಟಾಸ್ ಮಾಡಿದ ಧೋನಿ:

ಟಾಸಿಗೂ ಮುನ್ನ:
ಪಿಚ್ ನಲ್ಲಿ ಬೌಲಿಂಗ್ ರನ್ ಅಪ್ ಅಳತೆ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X